fbpx
ಸಮಾಚಾರ

ಜೂನ್ 05: ನಾಳೆಯ ಪಂಚಾಂಗ ಮತ್ತು ರಾಶಿ ಭವಿಷ್ಯ

ಸ್ಥಳ- ಬೆಂಗಳೂರು.
ಶುಕ್ರವಾರ, ಜೂನ್ 05 2020
ಸೂರ್ಯೋದಯ: 6:52am
ಸೂರ್ಯಾಸ್ತ: 6:43pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು: ಜ್ಯೇಷ್ಠ
ಪಕ್ಷ : ಶುಕ್ಲಪಕ್ಷ
ತಿಥಿ : ಪೂರ್ಣಿಮಾ 24:41
ನಕ್ಷತ್ರ: ಅನುರಾಧ 16:43
ಯೋಗ: ಸಿಧ್ಧ 20:13
ಕರಣ: ವಿಷ್ಟಿ 13:55 ಬಾವ 24:41

ಅಭಿಜಿತ್ ಮುಹುರ್ತ: 11:52 am – 12:43 pm
ಅಮೃತಕಾಲ : 7:08 am – 8:37 am

ರಾಹುಕಾಲ- 10:42 am – 12:18 pm
ಯಮಗಂಡ ಕಾಲ- 3:29 pm – 5:04 pm
ಗುಳಿಕ ಕಾಲ- 7:31 am – 9:07 am

 

 

 

ಮೇಷ (Mesha)

ಭಾಗ್ಯಾಭಿವೃದ್ಧಿ ಇದ್ದರೂ ಪ್ರಯತ್ನಬಲ ಅಗತ್ಯವಿದೆ. ಗೃಹ ಸುಖ ಉತ್ತಮವಿರುತ್ತದೆ. ದೇವತಾ ಕಾರ್ಯಗಳಲ್ಲಿ ವಿಘ್ನ ಭಯ ತೋರಿಬಂದರೂ ಕಾರ್ಯಸಿದ್ಧಿ ಇದೆ. ಉದ್ಯೋಗಿಗಳಿಗೆ ಬದಲಾವಣೆ

ವೃಷಭ (Vrushabh)


ಗುರುಬಲ ಇರುವುದರಿಂದ ಆದಾಯಕ್ಕೆ ಕೊರತೆ ಇರದು ಮನೆಯಲ್ಲಿ ಶುಭ ಮಂಗಲ ಕಾರ್ಯದ ಸಂಭ್ರಮ ಇದೆ. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯದ ಮಾರ್ಗಗಳು ಗೋಚರಕ್ಕೆ ಬರುವುದು.

ಮಿಥುನ (Mithuna)


ಸರಕಾರೀ ಅಧಿಕಾರಿಗಳಿಗೆ ಮುಂಭಡ್ತಿ ಯೋಗವಿದೆ. ಕೃಷಿಕರಿಗೆ ಸಂತಸದ ವಾತಾವರಣ. ವೃತ್ತಿರಂಗದಲ್ಲಿ ಮೇಲಧಿಕಾರಿಗಳಿಗೆ ಸಂಚಾರ ಒದಗಿ ಬರಲಿದೆ. ಧನ ಸಂಚಯಕ್ಕೆ ವಿವಿಧ ಮೂಲಗಳು ಕಂಡುಬಂದಾವು.

ಕರ್ಕ (Karka)


ಗೃಹ ಸುಖ ಉತ್ತಮವಿರುತ್ತದೆ. ವ್ಯಾಪಾರ, ವ್ಯವಹಾರಗಳಲ್ಲಿ ಹೂಡಿಕೆ ಉತ್ತಮ ಆದರೂ ಜಾಗ್ರತೆ ವಹಿಸಿರಿ. ಗುರು ಹಿರಿಯರ ಮಾರ್ಗದರ್ಶನ ಸಾಧಕವಾದೀತು. ವಾಹನ ಖರೀದಿಗೆ ಸಕಾಲ.

ಸಿಂಹ (Simha)


ಸಾಂಸಾರಿಕವಾಗಿ ಅಭಿವೃದ್ಧಿ ಗೋಚರಕ್ಕೆ ಬಂದರೂ ಹೊಂದಾಣಿಕೆಯಿಂದ ಮುಂದುವರಿಯಿರಿ. ಶ್ರೀ ದೇವರ ಕೃಪಾಕಟಾಕ್ಷ ನಿಮ್ಮನ್ನು ಕಾಪಾಡಲಿದೆ. ಸತತ ಪರಿಶ್ರಮ ನಿಮ್ಮನ್ನು ಮುನ್ನಡೆಸಲಿದ್ದು ಶಾಂತಚಿತ್ತರಾಗಿರಿ.

ಕನ್ಯಾರಾಶಿ (Kanya)


ಆದಾಯದ ಹೂಡಿಕೆ ಲಾಭ ತರದಿದ್ದರೂ ನಷ್ಟವಾಗದು. ನೆರೆಹೊರೆಯವರೊಡನೆ ಅನಾವಶ್ಯಕ ವಾದ – ವಿವಾದಗಳಿಗೆ ಕಾರಣರಾಗದಿರಿ. ನಿರುದ್ಯೋಗಿಗಳು ಬಂದ ಅವಕಾಶಗಳಲ್ಲೇ ತೃಪ್ತಿಪಡುವಂತಾದೀತು.

ತುಲಾ (Tula)


ಮನೆಯಲ್ಲಿ ಅತಿಥಿಗಳ ಆಗಮನ ಸಂತಸ ತರಲಿದೆ. ಎಷ್ಟೋ ಕೆಲಸಗಳು ಅನಿರೀಕ್ಷಿತ ರೂಪದಲ್ಲಿ ನಡೆದು ಹೋಗಲಿವೆ. ವೃತ್ತಿರಂಗದಲ್ಲಿ ಮುನ್ನಡೆಯ ದಿನ ಸಹೋದ್ಯೋಗಿಗಳೊಡನೆ ವಿಶ್ವಾಸ ಗಳಿಸಿರಿ.

ವೃಶ್ಚಿಕ (Vrushchika)


ಗುರುಬಲ ಪರಿಪೂರ್ಣ ತೋರಿಬರುವುದರಿಂದ ರಾಜಕೀಯದವರಿಗೆ ಸಮಾಜಿಕ ಕಾರ್ಯಕರ್ತರಿಗೆ, ವ್ಯಾಪಾರ, ವ್ಯವಹಾರಸ್ಥರಿಗೆ, ಶುಭ ಮಂಗಲ ಕಾರ್ಯಗಳಿಗೆ, ಅರ್ಚಕ, ಪುರೋಹಿತರಿಗೆ ಉತ್ತಮ ಅಭಿವೃದ್ಧಿ ಇದೆ.

ಧನು ರಾಶಿ (Dhanu)


ನಿಮ್ಮ ಪ್ರಯತ್ನಬಲ ಆತ್ಮವಿಶ್ವಾಸ ಮುಂದಿನ ಭವಿಷ್ಯಕ್ಕೆ ಸಾಧಕವಾಗಲಿದೆ. ಆರ್ಥಿಕವಾಗಿ ಖರ್ಚುವೆಚ್ಚಗಳು ಅಧಿಕವಾದರೂ ಧನಾಗಮನ ಯಾವುದೇ ರೀತಿಯಲ್ಲಿ ತೋರಿಬರಲಿದೆ. ದಿನಾಂತ್ಯ ಶುಭ.

ಮಕರ (Makara)


ಯೋಜಿತ ಕೆಲಸ ಕಾರ್ಯಗಳಲ್ಲಿ ದೃಢ ನಿರ್ಧಾರದಿಂದ ಮುಂದುವರಿಯಿರಿ. ಹೆಚ್ಚಿನ ರೀತಿಯಲ್ಲಿ ಯಾರಲ್ಲೂ ಹೆಚ್ಚಿನ ವಿಶ್ವಾಸ ತೋರದಿರಿ. ವಿದೇಶ ಸಂಚಾರದಲ್ಲಿ ಕಾರ್ಯಸಿದ್ಧಿ ಇರುತ್ತದೆ. ಮನೆಯಲ್ಲಿ ಸಂತಸ.

ಕುಂಭರಾಶಿ (Kumbha)


ಶನಿಯ ಲಾಭಸ್ಥಾನ ಎಲ್ಲಾ ದೋಷಗಳನ್ನು ಎದುರಿಸಿ ಅಭಿವೃದ್ಧಿ ತರಲಿದೆ. ಸದುಪಯೋಗಿಸಿಕೊಳ್ಳಿರಿ. ಆರೋಗ್ಯವು ಸುಧಾರಿಸಿಕೊಂಡು ಹೋಗಲಿದೆ. ದಿನಾಂತ್ಯದಲ್ಲಿ ಅತಿಥಿಗಳ ಆಗಮನವಿದೆ.

ಮೀನರಾಶಿ (Meena)


ವಿವಾಹದ ಪ್ರಸ್ತಾಪಗಳು ಕಂಡುಬಂದರೂ ದೃಢ ನಿರ್ಧಾರದಿಂದ ಮುಂದುವರಿಯಿರಿ. ವಿದ್ಯಾಭ್ಯಾಸದಲ್ಲಿ ಮುನ್ನಡೆ ಇದೆ. ದೂರ ಪ್ರಯಾಣದ ಸೂಚನೆ ಕಂಡುಬಂದೀತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top