fbpx
ಸಮಾಚಾರ

ಐದು ವರ್ಷದವರಿದ್ದಾಗಲೇ ಮಾಡೆಲ್ ಆಗಿದ್ರು​ ಕಿರಿಕ್ ಹುಡುಗಿ ರಶ್ಮಿಕಾ!

ಹೊಸ ಹೊಸ ಆಫರ್ ಗಳನ್ನು ಪಡೆಯುವ ಜತೆಗೆ ಒಂದಿಲ್ಲೊಂದು ಗಾಸಿಪ್ಪು, ಕಾಂಟ್ರೊವರ್ಸಿಗಳಿಂದ ಸೌಂಡು ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ. ಕನ್ನಡವೂ ಸೇರಿದಂತೆ ತೆಲುಗು, ತೆಮಿಳು ಚಿತ್ರರಂಗಗಳಲ್ಲೂ ಸದ್ಯ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಸಿನಿಮಾಗೆ ಬರುವ ಮುನ್ನ ಮಾಡೆಲಿಂಗ್​ ಮಾಡುತ್ತಿದ್ದರು ಅನ್ನೋ ವಿಷಯವೂ ಸಾಕಷ್ಟು ಮಂದಿಗೆ ತಿಳಿದಿದೆ. ಆದರೆ ಅವರ ಬಗ್ಗೆ ಯಾರಿಗೂ ತಿಳಿಯದ ಮತ್ತೊಂದು ವಿಷಯವಿದೆ.

 

 

ಕಿರಿಕ್ ಬ್ಯುಟಿ 5 ವರ್ಷದವರಾಗಿದ್ದಾಗಲೇ ಮಾಡೆಲಿಂಗ್​ ಮಾಡಿದ್ದರಂತೆ. ಹೌದು, ಹೀಗೆಂದು ರಶ್ಮಿಕಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. 2001ರಲ್ಲಿ ನಿಯತಕಾಲಿಕೆವೊಂದರ ಮುಖಪುಟಕ್ಕಾಗಿ ಫೋಟೋಶೂಟ್​ ಮಾಡಿದ್ದರಂತೆ. ರಶ್ಮಿಕಾ ಅವರ ತಾಯಿ ಆಗ ಪ್ರಕಟವಾಗಿದ್ದ ನಿಯತಕಾಲಿಕೆಯ​ ಪ್ರತಿಯನ್ನು ಇನ್ನೂ ಜೋಪಾನ ಮಾಡಿದ್ದಾರಂತೆ. ಅದರ ಫೋಟೋ ಜೊತೆಗೆ ರಶ್ಮಿಕಾ ತಮ್ಮ ಈಗಿನ ಚಿತ್ರವನ್ನೂ ಪೋಸ್ಟ್​ ಮಾಡಿದ್ದಾರೆ.

ನನ್ನ ಜೀವನ ಎಲ್ಲಿಂದಲೋ ಪ್ರಾರಂಭವಾಗಿ ಇಲ್ಲಿಯವರೆಗೆ ಬಂದಿರುವುದಕ್ಕೆ ನನಗೆ ಸಂತೋಶವಿದೆ. ನನ್ನ ಜೀವನದ ಬಗ್ಗೆ ತೃಪ್ತಿಯೂ ಇದೆ. ನಾನು ಕೆಲಸ ಮಾಡಿದ, ಮಾಡುತ್ತಿರುವ, ಮಾಡಲಿರುವ ಎಲ್ಲಾ ವ್ಯಕ್ತಿಗಳನ್ನೂ ನಾನು ಪ್ರೀತಿಸುತ್ತೇನೆ. ಏನೇ ಹೋರಾಟ ಮಾಡಿಯಾದರೂ ಗುರಿಯನ್ನು ತಲುಪುತ್ತೇನೆ ಎಂದು ಭಾವುಕರಾಗಿ ಇನ್‌ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ ರಶ್ಮಿಕಾ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top