ಗಡಿನಾಡು ಬೆಳಗಾವಿಯ ಸುವರ್ಣ ಸೌಧದ ಮುಂದೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ನಿಲ್ಲಿಸಬೇಕು ಎಂಬ ಕನ್ನಡಿಗರ ಕೂಗಿಗೆ ಸಂಸದ ಜಿಸಿ ಚಂದ್ರಶೇಖರ್ ದನಿಗೂಡಿಸಿದ್ದಾರೆ.. ರಾಯಣ್ಣನ ಪ್ರತಿಮೆ ನಿರ್ಮಿಸಲು ನನ್ನ ಬೆಂಬಲ ಇದೆ ಎಂದು ಸಮಾಸದರು ಹೇಳಿದ್ದಾರೆ.
ಸಂಗೊಳ್ಳಿ ರಾಯಣ್ಣನ ಜಿಲ್ಲೆಯಲ್ಲಿರುವ ಶಕ್ತಿಪೀಠ ಸುವರ್ಣಸೌಧದ ಮುಂದೆ ರಾಯಣ್ಣನ ಪ್ರತಿಮೆ ನಿರ್ಮಿಸಿ ಎಂಬ ಆಸೆಗೆ ನನ್ನ ಬೆಂಬಲವಿದೆ @CMofKarnataka ಜನರ ಆಶಯವನ್ನು ಗೌರವಿಸಿ #RayannaStatuelnfrontofSuvarnasouda#ಸುವರ್ಣಸೌಧದಮುಂದೆರಾಯಣ್ಣಪ್ರತಿಮೆ pic.twitter.com/otty37gYdv
— GC ChandraShekhar (@GCC_MP) June 5, 2020
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು #RayannaStatuelnfrontofSuvarnasouda
#ಸುವರ್ಣಸೌಧದಮುಂದೆರಾಯಣ್ಣಪ್ರತಿಮೆ ಎಂಬ ಹ್ಯಾಶ್ ಟ್ಯಾಗ್ ಬಳಸಿ ಬೆಳಗಾವಿಯ ಸುವರ್ಣ ಸೌಧದ ಮುಂದೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ನಿಲ್ಲಿಸಬೇಕು ಎಂದು ಬೇಡಿಕೆ ಸಲ್ಲಿಸುತ್ತಿದ್ದರು. ಈ ಮೂಲಕ ಸ್ವತಂತ್ರ ವೀರನನ್ನು ನೆನೆಯಬೇಕು ಎಂದು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ ಇದೀಗ ಈ ಅಭಿಯಾನಕ್ಕೆ ಸಂಸದ ಜಿಸಿ ಚಂದ್ರಶೇಖರ್ ಕೈಜೋಡಿಸಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಜಿಸಿ ಚಂದ್ರಶೇಖರ್ “ಸಂಗೊಳ್ಳಿ ರಾಯಣ್ಣನ ಜಿಲ್ಲೆಯಲ್ಲಿರುವ ಶಕ್ತಿಪೀಠ ಸುವರ್ಣಸೌಧದ ಮುಂದೆ ರಾಯಣ್ಣನ ಪ್ರತಿಮೆ ನಿರ್ಮಿಸಿ ಎಂಬ ಆಸೆಗೆ ನನ್ನ ಬೆಂಬಲವಿದೆ.” ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ” ಜನರ ಆಶಯವನ್ನು ಗೌರವಿಸಿ” ಎಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
