fbpx
ಸಮಾಚಾರ

ಚಿರು ಸರ್ಜಾ ಸಾವಿಗೆ ಕಾರಣವಾಯ್ತಾ ಜಾತಕ ದೋಷ? ಜೋತಿಷಿ ಹೇಳಿದ ಕಥೆಯನ್ನು ಬಿಚ್ಚಿಟ್ಟ ಜಗ್ಗೇಶ್

ಸ್ಯಾಂಡಲ್ ವುಡ್ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಸಾವಿನ ಸುದ್ದಿ ಇಡೀ ಕರುನಾಡಿಗೆ ದೊಡ್ಡ ಆಘಾತವೊಂಟು ಮಾಡಿದೆ. ಕೇವಲ 39ನೇ ವಯಸ್ಸಿನಲ್ಲಿಯೇ ಚಿರು ಜೀವನವನ್ನು ಅರ್ಧಕ್ಕೆ ನಿಲ್ಲಿಸಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಅರಗಿಸಿಕೊಳ್ಳಲಾಗದ ಚಿರು ನಿಧನದ ಸುದ್ದಿ ಕೇಳಿ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ.

ಚಿರಂಜೀವಿ ಸರ್ಜಾ ಅಕಾಲಿಕವಾಗಿ ಸಾವನ್ನಪ್ಪಲು ಜಾತಕ ದೋಷವೇ ಕಾರಣವಾಯಿತೇ? ಎಂಬ ಪ್ರಶ್ನೆ ಮೂಡಿದೆ. ಚಿರು ಜಾತಕ ನೋಡಿದ್ದ ಜ್ಯೋತಿಷಿಗಳು ಅಷ್ಟಮ ಕುಜ ದೋಷವಿದೆ. ಅದಕ್ಕೆ ಕೆಲವು ಪೂಜೆ ಮುಖ್ಯ. ಅದನ್ನು ಮಾಡಿ ಮುಂದುವರಿಯಿರಿ ಎಂದಿದ್ದರಂತೆ ಎಂದು ನಟ ಜಗ್ಗೇಶ್ ಹೇಳಿದ್ದಾರೆ. ಚಿರು-ಮೇಘನಾ ರಾಜ್ ಮದುವೆ ಆಗುವುದಕ್ಕೆ ತಾವು ಹೇಗೆ ಕಾರಣ ಎಂಬುದನ್ನು ಅವರು, ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಒಂದು ದಿನ ರಾತ್ರಿ 11ಗಂಟೆಗೆ ನನಗೆ ಕರೆಬಂತು.! ಸಿಟ್ಟಿನಿಂದ ಯಾರು ಅಂದೆ..? ನಾನು ಮಾಮ ಚಿರು ಅಂದ.! ಯಾರೋ ನನ್ನ ನಂಬರ್ ನಿನಗೆ ಕೊಟ್ಟಿದ್ದು ಅಂದೆ.! ನಕ್ಕು Pls ಮಾಮ Forget.! ಅಂದ.

ವಿಷಯ ನಾನು ಮೇಘನ ಮದುವೆ ಆಗಬೇಕು, ನಿಮ್ಮ ಆಶೀರ್ವಾದ ಬೇಕು.! ಜೊತೆಗೆ ನೀವೇ ಅವಳ ಅಪ್ಪ ಅಮ್ಮನ ಜೊತೆ ಮಾತಾಡಬೇಕು ಅಂದ.! ಸುಂದರ್ ಮನೆಗೆ ಹೋಗಿ ಇದರ ಬಗ್ಗೆ ಮಾತಾಡಿ ನನ್ನ ಸ್ನೇಹಿತರಾದ ಜೋತಿಷಿ #ಪ್ರಕಾಶಅಮ್ಮಣ್ಯರ ಬಳಿ ಇಬ್ಬರ ಜಾತಕ ಕೊಟ್ಟು ಚರ್ಚಿಸಿದೆ.. ಆಗ ಅವರು ಹೇಳಿದ್ದು “ಜಗ್ಗೇಶ್, ಅಷ್ಟಮಕುಜ ದೋಷ, ಅದಕ್ಕೆ ಕೆಲ ಪೂಜೆ ಮುಖ್ಯ.. ಅದಮಾಡಿ ಮುಂದುವರೆಯಿರಿ” ಎಂದರು.. ನಂತರ ಆ ಪೂಜೆ ಬಗ್ಗೆ ನನಗೆ ಮಾಹಿತಿ ಇಲ್ಲ.. ಮದುವೆ ನಿಶ್ಚಯ ಆಯಿತು.. ಗಣೇಶನ ಜೊತೆ ಒಂದು Guest Roll ಭಟ್ರ Combo ಮಾಡಿದೆ.. ಆ ಚಿತ್ರಿಕರಣ ಮೇಘನ ಮನೆ ಮುಂದೆಯೇ ಇತ್ತು.! ಚಿತ್ರಿಕರಣ ಮುಗಿಸಿ ಅವರ ಮನೆಗೆ ಹೋಗಿ ಕಾಫಿ ಕುಡಿದು ಅವರ ಮದುವೆಯ ವಿಷಯ ಮಾತಾಡಿ fix ಆಗಿ ಮೇಘನ ಹಾಗು ಚಿರು ಜೊತೆ ಮಾತಾಡಿ ಸಂತೋಷವಾಗಿ ಮನೆಗೆ ಬಂದು ನಾನು ಪರಿಮಳ ಈ ವಿಷಯ ಪ್ರಸ್ತಾಪ ಮಾಡಿದೆವು.. ದೇವರ ದಯೆಯಿಂದ ಮದುವೆಯು ಮುಗಿಯಿತು..

ನಂತರ ಚಿರು ಅನೇಕ ಬಾರಿ ಕರೆಮಾಡಿ “ಮಾಮ Pls ಅಜ್ಜಿಯ ಕೈ ರುಚಿ ಸವಿಯಲು ಮನೆಗೆ ಬನ್ನಿ” ಎಂದು ಕರೆಯುತ್ತಿದ್ದ.! ನನ್ನದು ವಿಚಿತ್ರ ಜನ್ಮ, ಹೂಂ ಎನ್ನುತ್ತಿದ್ದೆ ಆದರೆ ಹೋಗಲಿಲ್ಲ.. ಯಾಕೋ ಇಂದು ನಾನು ಪರಿಮಳ ಚಿರು ಬಗ್ಗೆ ಮಾತಾಡುತ್ತಾ “ಏನ್ ಹುಡುಗರೋ, ಮದುವೆ ಆದಮೇಲೆ ಯಾಕೆ Gap.? ಇಷ್ಟೊತ್ತಿಗೆ Good News ಬೇಕಿತ್ತು” ಎಂದು ಮಾತಾಡಿಕೊಂಡೆವು.! ಮಧ್ಯಾಹ್ನ ಊಟ ಮಾಡಿ ಮಲಗಿದೆ..

ಚಾಲಕ ಪದ್ದು ಕರೆಮಾಡಿ, Boss TV ನೋಡಿದ್ರಾ..? ಚಿರು ಹೋಗಿಬಿಟ್ಟಾ ಎಂದ.. ಕೇಳಿ ಹುಚ್ಚನಂತೆ ಅತ್ತುಬಿಟ್ಟೆ.. ಇಷ್ಟೇನಾ ಬದುಕು.? ಇದಕ್ಕಾ ನಮ್ಮ ಹೋರಾಟ..? ನಮ್ಮಂಥ ಹಿರಿಯರು ನಮ್ಮ ಕಣ್ಣ ಮುಂದಿನ ಕಿರಿಯರ ಸಾವು ನೋಡಬೇಕೆ.? ಎಂಥ ದೌರ್ಭಾಗ್ಯ..! ಶಂಕರ್ ನಾಗ್ ಹೀಗೆ 36ನೇ ವಯಸ್ಸಿಗೆ ಕಾಲವಾದರು.. ಆ ಸಾಲಿಗೆ ಚಿರು ಸೇರಿಬಿಟ್ಟನೆ..! 😢

ಹುಟ್ಟಿಗೆ ಸಾವು ಖಚಿತ.. ಆದರೆ ಇಷ್ಟು ಬೇಗವೇ.!? ಓ ದೇವರೆ ಈ ಸಾವು ನ್ಯಾಯವೆ.!? 😢 ಎಂದು ಜಗ್ಗೇಶ್ ತಮ್ಮ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

 

ಒಂದು ದಿನ ರಾತ್ರಿ 11ಗಂಟೆಗೆ ನನಗೆ ಕರೆಬಂತು.! ಸಿಟ್ಟಿನಿಂದ ಯಾರು ಅಂದೆ..? ನಾನು ಮಾಮ ಚಿರು ಅಂದ.! ಯಾರೋ ನನ್ನ ನಂಬರ್ ನಿನಗೆ ಕೊಟ್ಟಿದ್ದು…

ಜಗ್ಗೇಶ್ ಶಿವಲಿಂಗಪ್ಪ ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಜೂನ್ 7, 2020

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top