fbpx
ಸಮಾಚಾರ

ಸರ್ಜಾ ಕುಟುಂಬದ ವಿರುದ್ಧವೂ ಪ್ರಕರಣ ದಾಖಲು

ಚಿರಂಜೀವಿ ಸರ್ಜಾ ದೈಹಿಕವಾಗಿ ದೂರವಾಗಿ ಇಂದಿಗೆ 12 ದಿನ. ಅವರ ಹನ್ನೊಂದನೇ ದಿನದ ಕಾರ್ಯಗಳೆಲ್ಲಾ ಮುಗಿದ ಮೇಲೆ ಒಂದಷ್ಟು ಕಾಲ ಚೀರುನ ಅಗಲಿಕೆಯಿಂದ ಶಾಕ್ ಆಗಿದ್ದವರು, ಕಂಬನಿಗರೆದಿದ್ದವರೆಲ್ಲ ಮತ್ತೆ ತಂತಮ್ಮ ಬದುಕಿನ ಜಂಜಡಗಳಲ್ಲಿ ಕಳೆದು ಹೋಗಿದ್ದಾರೆ. ಈ ಮದ್ಯೆ ಚಿರು ಅಭಿಮಾನಿಗಳ ವಿರುದ್ಧ ಬರೋಬ್ಬರಿ ನಾಲ್ಕು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಚಿರು ಪಾರ್ಥೀವ ಶರೀರವನ್ನು ಸಾವಿರಾರು ಅಭಿಮಾನಿಗಳು ವೀಕ್ಷಿಸಿದ್ದರು. ಹೀಗಾಗಿ ಕರೋನಾ ರೋಗ ನಿಯಂತ್ರಣದ ನಿಯಮ‌ ಉಲ್ಲಂಘನೆ ಆರೋಪ ಕೇಳಿಬಂದಿದ್ದು, ಸರ್ಜಾ ಕುಟುಂಬದ ಅಭಿಮಾನಿಗಳ ವಿರುದ್ದ ನಾಲ್ಕು ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಜಯನಗರ, ತಲಘಟ್ಟಪುರ, ಕುಮಾರಸ್ವಾಮಿ ಲೇಔಟ್ ಹಾಗೂ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಎನ್​ಡಿಎಂಎ ಕಾಯ್ದೆಯ ಅನ್ವಯ ಒಟ್ಟು 59 ಪ್ರಕರಣಗಳು ದಾಖಲಾಗಿವೆ.

ಚಿರಂಜೀವಿ ಸರ್ಜಾ ಅಂತಿಕಕಾರ್ಯ ಕನಕಪುರ ರಸ್ತೆ ಬಳಿಯ ನೆಲಗುಳಿ ಗ್ರಾಮದಲ್ಲಿ ನಡೆಯಿತು. ಅಂತಿಮ ದರ್ಶನ, ಅಂತಿಮ ಕಾರ್ಯ ಸೇರಿ ಪ್ರತಿಹಂತದ ವಿಡಿಯೋ ಚಿತ್ರೀಕರಣವನ್ನು ಪೊಲೀಸರು ಮಾಡಿದ್ದಾರೆ. ತನಿಖೆ ನಂತರ ಚಾರ್ಜ್‌ಶೀಟ್ ಸಲ್ಲಿಕೆ ಆಗಲಿದೆ. ಕೊರೊನಾ ರೋಗ ನಿಯಂತ್ರಣ ನಿಯಮ ಉಲ್ಲಂಘನೆ ಅಡಿಯಲ್ಲಿ ಈ ಪ್ರಕರಣಗಳು ದಾಖಲಾಗಿವೆ.

ಅಷ್ಟೇ ಅಲ್ಲದೆ ಸರ್ಜಾ ಕುಟುಂಬದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಸಲ್ಲಿಕೆಯಾಗಿವೆ. ಸರ್ಜಾ ಕುಟುಂಬದ ವಿರುದ್ಧ ವ್ಯಕ್ತಿಯೊಬ್ಬರು ಪ್ರಕರಣ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿರಂಜಿವಿ ಸರ್ಜಾರ ಮೃತದೇಹವಿದ್ದ (ಜಯನಗರ ಠಾಣಾ ವ್ಯಾಪ್ತಿ) ವೇಳೆ ನೂರಾರು ಜನರು ಸೇರಿದ್ದರು. ಚಿರು ನಿವಾಸದ ಎದುರು (ಬನಶಂಕರಿ ಠಾಣಾ ವ್ಯಾಪ್ತಿ) ಅಂತಿಮ ದರ್ಶನಕ್ಕೆ ನೂರಾರು ಜನ ಸೇರಿದ್ದರು. ತಲಘಟ್ಟಪುರ ಹಾಗೂ ಕುಮಾರಸ್ವಾಮಿ ಲೇಔಟ್ ವ್ಯಾಪ್ತಿಯ ಮಾರ್ಗವಾಗಿ ಮೃತದೇಹದ ಜತೆ ಮೆರವಣಿಗೆಯಲ್ಲಿ ಅನೇಕ ಜನರು ಸಾಗಿದ್ದರು.

ಈ ಹಿನ್ನೆಲೆಯಲ್ಲಿ ಲಾಕ್ಡೌನ್ ನಿಯಮಗಳ ನಿಯಮಗಳು ದೊಡ್ಡ ಮಟ್ಟದಲ್ಲಿ ಉಲ್ಲಂಘನೆಯಾಗಿರುವ ಕಾರಣದಿಂದಾಗಿ ಪೊಲೀಸರು ಎನ್​ಡಿಎಂಎ ಆಕ್ಟ್ ಅಡಿಯಲ್ಲಿ ಕೇಸ್‌ ದಾಖಲಿಸಲು ಕೋರ್ಟ್ ಅನುಮತಿ ಕೇಳಿದ್ದರು. ಇದೀಗ ಅನುಮತಿ ಸಿಕ್ಕಿರುವುದರಿಂದ ನಾಲ್ಕು ಪ್ರತ್ಯೇಕ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top