fbpx
ಸಮಾಚಾರ

#BoycottChina ಆಂದೋಲನ: ಐಪಿಎಲ್‌ಗೆ ಚೀನಾ ‘ವಿವೋ’ ಪ್ರಾಯೋಜಕತ್ವ ತೆಗೆಯಲು ಸಾಧ್ಯವಿಲ್ಲ ಎಂದ ಬಿಸಿಸಿಐ

ಗಡಿ ಭಾಗದಲ್ಲಿ ಚೀನಾ ಉಪಟಳ ಹೆಚ್ಚುತ್ತಿದ್ದಂತೆ, ಇತ್ತ ಭಾರತೀಯರು ಚೀನಾ ವಸ್ತುಗಳನ್ನು ಬ್ಯಾನ್​ ಮಾಡುವಂತೆ ಆಂದೋಲನ ಆರಂಭಿಸಿದ್ದಾರೆ. ಚೀನಾ ವಸ್ತುಗಳನ್ನು ಹಾಗೂ ಚೀನಾ ಆಪ್​ಗಳನ್ನು ಬಳಕೆ ಮಾಡದಂತೆ ಆಗ್ರಹಿಸಿಲಾಗುತ್ತಿ. ಈ ಮಧ್ಯೆ ಚೀನಾ ಮೊಬೈಲ್​ಗಳ ಮೇಲೂ ನಿಷೇಧ ಹೇರುವಂತೆ ಆಗ್ರಹ ಕೇಳಿ ಬಂದಿತ್ತು. ಈ ಎಲ್ಲ ಬೆಳವಣಿಗೆ ಮಧ್ಯೆ ಐಪಿಎಲ್​ಗೆ ಚೀನಾ ಮೊಬೈಲ್​ ಸಂಸ್ಥೆ ವಿವೋ ಪ್ರಾಯೋಜಕತ್ವ​ ಮಾಡುತ್ತಿರುವ ವಿಚಾರ ಸಾಕಷ್ಟು ಚರ್ಚೆ ಆಗಿದೆ.

ಇನ್ನು ಚೀನಾ ಮೂಲದ ಮೊಬೈಲ್‌ ಫೋನ್‌ ತಯಾರಿಕಾ ಸಂಸ್ಥೆ ‘ವಿವೋ’ ವಿರುದ್ಧವೂ ಜನಸಾಮಾನ್ಯರು ದನಿಯೆತ್ತಿದ್ದಾರೆ. ಚೀನಾ ತಯಾರಿಕೆಯ ಮೊಬೈಲ್‌ ಫೋನ್‌ಗಳ ಬಳಕೆಯನ್ನೂ ಬಿಡಲು ಮುಂದಾಗುತ್ತಿದದ್ದಾರೆ. ಹೀಗಿರುವಾಗ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ತನ್ನ ಐಶಾರಾಮಿ ಟಿ20 ಕ್ರಿಕೆಟ್‌ ಟೂರ್ನಿ ಆಗಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಮೆಂಟ್‌ಗೆ ‘ವಿವೋ’ದ ಪ್ರಯೋಜಕತ್ವವನ್ನು ಉಳಿಸಿಕೊಳ್ಳುವುದಾಗಿ ಹೇಳಿದೆ.

ಐಪಿಎಲ್‌ಗೆ ಪ್ರಾಯೋಜಕತ್ವ ನೀಡಿರುವ ವಿವೊ ಮೊಬೈಲ್ ಚೀನಾ ದ ಕಂಪೆನಿಯಾಗಿದೆ. ಇದರಿಂದ ಪ್ರತಿ ವರ್ಷ ₹ 440 ಕೋಟಿ ಆದಾಯ ಬಿಸಿಸಿಐಗೆ ಬರುತ್ತಿದೆ. 2022ರವರೆಗೂ ಮಂಡಳಿ ಒಪ್ಪಂದ ಮಾಡಿ ಕೊಂಡಿದೆ. ‘ಮಂಡಳಿಗೆ ಇದು ಪ್ರಮುಖ ಆದಾಯವಾಗಿದೆ. ಇದರಿಂದ ದೇಶಕ್ಕೆ ಪ್ರಯೋಜನವಾಗುತ್ತಿದೆ’ ಎಂದಿದ್ದಾರೆ.

‘ಭಾರತದಲ್ಲಿ ಚೀನಾ ಉತ್ಪನ್ನಗಳ ಮಾರಾಟಕ್ಕೆ ಅವಕಾಶವಿದೆ. ಇಲ್ಲಿಯ ಗ್ರಾಹಕರಿಂದ ಲಾಭ ಪಡೆಯುತ್ತದೆ. ಆ ಉತ್ಪನ್ನದ ಪ್ರಚಾರಕ್ಕಾಗಿ ವೇದಿಕೆ ಒದಗಿಸಲು ಬಿಸಿ ಸಿಐಗೆ ಪ್ರಾಯೋಜಕತ್ವದ ರೂಪದಲ್ಲಿ ದುಡ್ಡು ನೀಡುತ್ತದೆ. ನಾವು ಪಡೆ ಯುವ ಆ ಹಣದ ಶೇ 42ರಷ್ಟು ತೆರಿಗೆ ಯನ್ನು ಭಾರತ ಸರ್ಕಾರಕ್ಕೆ ಪಾವ ತಿಸುತ್ತೇವೆ. ಆದ್ದರಿಂದ ಇದು ನಮ್ಮ ದೇಶಕ್ಕೆ ಲಾಭ, ಚೀನಾಕ್ಕಲ್ಲ’ ಎಂದರು.

ಇಲ್ಲಿ ಮೊಬೈಲ್ ಮಾರಾಟ ಮಾಡಿ ಚೀನಾ ಸಂಸ್ಧೆ ಹಣವನ್ನು ತೆಗೆದುಕೊಂಡು ಹೋಗುತ್ತಿತ್ತು. ಆದರೆ ಅದೇ ಸಂಸ್ಥೆಯನ್ನು ಮರಲಿ ಇಲ್ಲೇ ಹೂಡಿಕೆ ಮಾಡುವಂತೆ ಮಾಡಿ ಭಾರತ ಸರ್ಕಾರಕ್ಕೆ ತೆರಿಗೆ ಸಿಗುವಂತೆ ಮಾಡುತ್ತಿದ್ದೇವೆ ಎಂದು ಅರುಣ್ ಧುಮಾಲ್ ಹೇಳಿದ್ದಾರೆ. ನಮಗೆ ದೇಶವೇ ಮೊದಲು. ನಂತರವೇ ಉಳಿದುದ್ದೆಲ್ಲವು. ಒಂದು ವೇಳೆ ಸರ್ಕಾರ ಈ ಒಪ್ಪಂದ ತೆಗೆದುಹಾಕಿ ಎಂದು ಆದೇಶಿಸಿದರೆ ಮರುದಿನವೇ ಆ ಕೆಲಸ ಮಾಡುತ್ತೇವೆ ಎಂದು ಅರುಣ್ ಧುಮಾಲ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top