fbpx
ಸಮಾಚಾರ

‘ಸುಶಾಂತ್ ಸಿಂಗ್ ನನ್ನ ಹೊಟ್ಟೆಯಲ್ಲಿ ಮತ್ತೆ ಹುಟ್ಟಿ ಬರ್ತಾನೆ’ ಬಾಲಿವುಡ್ ನಟಿ ಸ್ಪೋಟಕ ಹೇಳಿಕೆ

ಇತ್ತೀಚೆಗಷ್ಟೇ ನಿಧನರಾದ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯಾಗುತ್ತಿದೆ. ಇವರ ಸಾವಿಗೆ ಒಬ್ಬೊಬ್ಬರು ಒಂದೊಂದು ಕಾರಣ ನೀಡುತ್ತಿದ್ದಾರೆ. ಈ ನಡುವೆ ಬಾಲಿವುಡ್ ನಟಿ ರಾಖಿ ಸಾವಂತ್ ನೀಡಿರುವ ಹೇಳಿಕೆ ಹಲವರ ಕೋಪವನ್ನು ತಾರಕಕ್ಕೇರಿಸಿದೆ.

ಈ ನಡುವೆ ಬಾಲಿವುಡ್ ನಟಿ, ವಿವಾದಾತ್ಮಕ ಹೇಳಿಕೆಗಳ ಮೂಲಕರವೆ ಪ್ರಚಾರ ಗಿಟ್ಟಿಸಿಕೊಳ್ಳುವ ರಾಖಿ ಸಾವಂತ್ ಈಗ ಸುಶಾಂತ್ ಸಿಂಗ್ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಸುಶಾಂತ್ ಮತ್ತೆ ಬರ್ತಾರೆ. ನನ್ನ ಹೊಟ್ಟೆಯಲ್ಲಿ ಹುಟ್ಟಿ ಬರ್ತಾರೆ, ಹೀಗಂತ ಸುಶಾಂತ್ ಕನಸಿನಲ್ಲಿ ಬಂದು ಹೇಳಿದ್ದಾರೆ ಎಂದು ರಾಖಿ ಸಾವಂತ್ ಹೇಳಿದ್ದಾರೆ.

ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್ ಮಾಡಿಕೊಂಡಿರುವ ರಾಖಿ ಸಾವಂತ್ ‘ಸ್ನೇಹಿತರೆ ನಾನು ನಿಮಗೊಂದು ಗುಡ್​ನ್ಯೂಸ್​​ ಹೇಳುತ್ತೇನೆ, ನಾನು ನಿನ್ನೆ ರಾತ್ರಿ ಮಲಗಿದ್ದಾಗ ಕನಸು ಬಿತ್ತು. ತಕ್ಷಣ ಎಚ್ಚರ ಆಯ್ತು. ನನ್ನ ಕನಸಿನಲ್ಲಿ ಸುಶಾಂತ್ ಸಿಂಗ್​ ಬಂದಿದ್ದರು. ನನ್ನ ಕನಸಿನಲ್ಲಿ ಸುಶಾಂತ್ ಸಿಂಗ್​ ಬಂದಿದ್ದರು. ನೀವು ನಾನು ಹೇಳುತ್ತಿರುವ ಈ ಮಾತನ್ನು ನಂಬೋದಿಲ್ಲ. ನಂಬಿದರೆ ನಂಬಿ ಬಿಟ್ಟರೆ ಬಿಡಿ. ನಾನು ಸತ್ಯವನ್ನೇ ಹೇಳುತ್ತಿದ್ದೇನೆ.

ಈ ಕನಸಿನಿಂದ ನಾನು ಸಿಕ್ಕಾಪಟ್ಟೆ ಬೆವತುಬಿಟ್ಟೆ. ನೀನು ಮದುವೆಯಾದ್ರೆ ನಿನ್ನ ಹೊಟ್ಟೆಯಲ್ಲಿ ನಾನು ಮತ್ತೆ ಹುಟ್ಟಿ ಬರ್ತೀನಿ. ನನ್ನ ಅಭಿಮಾನಿಗಳಿಗೆ ಈ ವಿಷಯ ಹೇಳು. ನಿನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗು ಸುಶಾಂತ್ ಆಗಿರ್ತಾನೆ. ನನಗೆ ಸುಶಾಂತ್ ಒಳ್ಳೆಯ ದೋಸ್ಟ್, ಸಹೋದರ ಆಗಿದ್ದಾನೆ. ಈ ಚಿತ್ರರಂಗ ನನಗೆ ತುಂಬ ಕಷ್ಟ ಕೊಟ್ಟಿದೆ. ಬಾಲಿವುಡ್‌ ನನಗೆ ಎಷ್ಟು ಬಹಳಷ್ಟು ಕೊಟ್ಟಿದೆಯೋ ಅಷ್ಟೇ ಕಿತ್ತುಕೊಂಡಿದೆ. ಪಾರ್ಟಿಗಳಿಗೆ ಬಾಯ್‌ಕಟ್ ಹೇಳಿತ್ತು. ಕಂಗನಾ ರಣಾವತ್, ರಾಖಿ ಸಾವಂತ್ ನನಗೆ ಪ್ರೋತ್ಸಾಹ ನೀಡಿದ್ದಾರೆ. ಇವರಿಗೆ ನನ್ನ ಧನ್ಯವಾದಗಳು ಎಂದು ಸುಶಾಂತ್ ಹೇಳಿದ್ದಾರೆ’ ಎಂದು ರಾಖಿ ಸಾವಂತ್ ಹೇಳಿದ್ದಾರೆ.

ರಾಖಿ ಸಾವಂತ್​ ಮಾತು ಕೇಳಿ ಅನೇಕರು ಸಿಟ್ಟಾಗಿದ್ದಾರೆ. ಕೆಲವರು ಈ ರೀತಿ ಹೇಳಿದ್ದಕ್ಕಾಗಿ ಬೈಗುಳದ ಸುರಿಮಳೆ ಸುರಿಸಿದ್ದಾರೆ. ಇನ್ನು ಕೆಲವು ಟ್ರೋಲ್​ ಪೇಜ್​ ರಾಖಿ ಸಾವಂತ್​ ಅವರನ್ನು ಟ್ರೋಲ್​ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top