fbpx
ಸಮಾಚಾರ

ಪ್ರಯಾಣಿಕರ ಗಮನಕ್ಕೆ: ಮಹತ್ವದ ಪ್ರಕಟಣೆ ಹೊರಡಿಸಿದ ಕೆಎಸ್‌ಆರ್‌ಟಿಸಿ!

ಕೋವಿಡ್ 19 ಸಾಂಕ್ರಾಮಿಕ ಕಾಯಿಲೆ ಭೀತಿಯಿಂದ ಇಷ್ಟುದಿನ ಸ್ಥಗಿತಗೊಂಡಿದ್ದ ಹವಾನಿಯಂತ್ರಿತ (ಎಸಿ) ಬಸ್ ಸಂಚಾರಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಕೊರೋನಾ ಭೀತಿಯ ಮದ್ಯೆಯೂ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ನಾಳೆ ಅಂದ್ರೆ ಜೂನ್ 25ರಿಂದ ಎಸಿ ಬಸ್‌ಗಳು ಕೂಡ ರಸ್ತೆಗಿಳಿಯಲಿವೆ. ಈ ಬಗ್ಗೆ ಕೆಎಸ್‌ಆರ್‌ಟಿಸಿ ಇಂದು (ಬುಧವಾರ) ಪ್ರಕಟಣೆ ಹೊರಡಿಸಿದೆ.

 

 

ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು, ಮೊದಲ ಹಂತದಲ್ಲಿ ಬೆಂಗಳೂರಿನಿಂದ ಕೆಲ ನಿಗದಿತ ಸ್ಥಳಗಳಿಗೆಸಂಚಾರ ಕಾರ್ಯಾಚರಣೆ ಪ್ರಾರಂಭಿಸಲಿದೆ ಎಂದು ತಿಳಿಸಿದ್ದಾರೆ. ಬೆಂಗಳೂರಿನಿಂದ ಮೈಸೂರು, ಮಂಗಳೂರು, ಕುಂದಾಪುರ, ಚಿಕ್ಕಮಗಳೂರು, ಮಡಿಕೇರಿ, ದಾವಣಗೆರೆ ಶಿವಮೊಗ್ಗ , ವಿರಾಜಪೇಟೆಗೆ KSRTCಯ ಎಸಿ ಬಸ್ ಸಂಚಾರ ಆರಂಭವಾಗಲಿದೆ.

ಹವಾ ನಿಯಂತ್ರಿತ ಬಸ್ ಗಳಲ್ಲಿ ಮಾರ್ಗಸೂಚಿಯ ಅನ್ವಯ 24 ರಿಂದ 25 ಸೆಂಟಿಗ್ರೇಡ್ ತಾಪಮಾನವನ್ನು ನಿರ್ವಹಿಸಲಿದೆ. ಆದರೆ ಕೊರೋನಾ ಮುಂಜಾಗ್ರತಾ ಕ್ರಮವಾಗಿ ಈ ಮೊದಲು ಎಸಿ ಬಸ್ ಗಳಲ್ಲಿ ನೀಡಲಾಗುತ್ತಿದ್ದಂತೆ ಹೊದಿಕೆಗಳನ್ನು ನೀಡಲಾಗುವುದಿಲ್ಲ. ಹೀಗಾಗಿ ಪ್ರಯಾಣಿಕರೇ ತಮ್ಮ ಹೊದಿಕೆಗಳನ್ನು ತಾವೇ ತರುವಂತೆ ಸಂಸ್ಥೆ ಮನವಿ ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top