fbpx
ಸಮಾಚಾರ

ಮದುವೆ ಆಗುವುದಾಗಿ ನಂಬಿಸಿ ‘ಜೋಶ್’ ನಟಿಗೆ ವಂಚಿಸಿ, ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಗಳ ಬಂಧನ

‘ಪೂರ್ಣ’ ಎಂಬ ಹೆಸರಿನ ಮೂಲಕ ಪ್ರಖ್ಯಾತಿ ಗಳಿಸಿರುವ ಬಹುಭಾಷ ನಟಿ ಹಾಗೂ ಕನ್ನಡದ ‘ಜೋಶ್’ ಚಿತ್ರದ ನಾಯಕಿ ಶಾಮ್ನಾ ಕಾಸಿಮ್ ಅವರಿಗೆ ಮದುವೆ ಆಗುವುದಾಗಿ ನಂಬಿಸಿ ಹಣವಸೂಲಿ ಮಾಡಲು ಮುಂದಾಗಿದ್ದ ನಾಲ್ವರು ಆರೋಪಿಗಳನ್ನು ಕೇರಳ ಪೊಲೀಸರು ಹೆಡೆಮುರಿ ಕಟ್ಟಿ ಬಂಧಿಸಿದ್ದಾರೆ.

ತ್ರಿಶೂಲ್ ಮೂಲದವರಾದ ರಫಿಕ್, ರಮೇಶ್, ಶರತ್ ಮತ್ತು ಚೆಟ್ಟುವಾದ ಅಶ್ರಫ್ ಎಂದು ಗುರುತಿಸಲಾಗಿರುವ ಈ ಆರೋಪಿಗಳು ನಟಿ ಪೂರ್ಣ ಅವರಿಗೆ ಮದುವೆ ಆಗುವುದಾಗಿ ನಂಬಿಸಿ ಹಣವಸೂಲಿ ಮಾಡಲು ಮುಂದಾಗಿದ್ದರು ಎಂದು ತಿಳಿದುಬಂದಿದೆ.

ಮಾರ್ಚ್ ತಿಂಗಳಲ್ಲಿ ನಟಿಯನ್ನು ಸಂಪರ್ಕಿಸಿದ ಗ್ಯಾಂಗ್, ಕೋಳಿಕೋಡ್ ಮೂಲದ ದುಬೈನಲ್ಲಿ ಬಿಸಿನೆಸ್ ನಡೆಸುತ್ತಿರುವ ದೊಡ್ಡ ಬಿಸಿನೆಸ್ ಮ್ಯಾನ್ ಎಂದು ನಂಬಿಸಿ, ಕೇಳಿದ್ದಷ್ಟು ಹಣ ಕೊಡದಿದ್ದಲ್ಲಿ ಖಾಸಗಿ ವಿಡಿಯೋಗಳನ್ನು ಲೀಕ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಅನ್ವರ್ ಅಲಿ ಎನ್ನುವ ಹೆಸರಿನಲ್ಲಿ ಪೂರ್ಣಗೆ ಫೋನ್ ಮಾಡಿ ಪರಿಚಯ ಮಾಡಿಕೊಂಡಿದ್ದಾರೆ. ಈ ಪರಿಚಯ ಕೊನೆಗೆ ಮದುವೆವರೆಗೂ ತಲುಪಿದೆ.

ಮದುವೆ ವಿಚಾರಕ್ಕೆ ಸಂಬಂಧಪಟ್ಟಂತೆ ವ್ಯಕ್ತಿಯೋರ್ವ ಶಾಮ್ನಾ ತಂದೆಗೆ ಕರೆ ಮಾಡಿ, ದುಬೈನಲ್ಲಿ ಉದ್ಯಮಿಯೋರ್ವನಿದ್ದಾನೆ. ಈತನ ಮೂಲ ನಾರ್ತ್ ಕೇರಳ ಎಂದು ಹೇಳಿದ್ದಾರೆ. 6 ಜನರು ಶಾಮ್ನಾ ಅವರ ಕೋಚಿ ಮನೆಗೆ ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಅವರ ಸಂಬಂಧಿಕರ ವಿಡಿಯೋ ಕೂಡ ಮಾಡಿದ್ದಾರೆ. ಶಾಮ್ನಾ ತಂದೆಗೆ ಪುನಃ ಪುನಃ ಕಾಲ್ ಮಾಡಿ ಹಣ ಕೇಳಲಾಗುತ್ತಿದೆ. ಹಣ ಕೊಡಲು ನಟಿ ಮನೆಯವರು ಒಪ್ಪದಿದ್ದಾಗ ವಿಡಿಯೋ ಲೀಕ್ ಮಾಡುವುದಾಗಿ ಹೇಳಿದ್ದಾರೆ, ಅಷ್ಟೇ ಅಲ್ಲದೆ ಪೊಲೀಸ್ ಬಳಿ ಹೋಗದಂತೆ ಧಮ್ಕಿ ಹಾಕಿದ್ದಾರೆ.

ಮಲಯಾಳಂ ಮಾಧ್ಯಮದ ಬಳಿ ಮಾತನಾಡಿರುವ ಶಾಮ್ನಾ, ‘ಯಾರಾದರೊಬ್ಬರು ಇದಕ್ಕೆ ಬಲಿಯಾಗುತ್ತಾರೆ. ಹೀಗಾಗಿ ನನ್ನ ಪಾಲಕರ ಬಳಿ ದೂರು ನೀಡಲು ಹೇಳಿದೆ. ಇದು ಒಂದು ಗ್ಯಾಂಗ್‌ನ ಪಾರ್ಟ್’ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top