‘ಕೆಜಿಎಫ್’ ಚಿತ್ರದ ಮೂಲಕ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ಖ್ಯಾತಿ ಶ್ರೀನಿಧಿ ಶೆಟ್ಟಿ ಮೊದಲ ಯತ್ನದಲ್ಲೇ ದೇಶಾದ್ಯಂತ ಫೇಮಸ್ ಆದವರು. ಇದೀಗ ನಟಿ ಶ್ರೀನಿಧಿ ಶೆಟ್ಟಿಯ ನಿಶ್ಚಿತಾರ್ಥದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನಟಿ ಶ್ರೀನಿಧಿ ಅವರೇ ನಿಶ್ಚಿತಾರ್ಥದ ಆಮಂತ್ರಣ ಪತ್ರಿಕೆ ಮತ್ತು ಕೆಲವು ಫೋಟೋಗಳನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ.
Stills from the beautiful song #ThumbiThullal #CobraFirstSingle #Cobra ♥️🤩@AjayGnanamuthu #ChiyaanVikram @7screenstudio @arrahman @SonyMusicSouth @Harishdop pic.twitter.com/TY8YgcnEXk
— Srinidhi Shetty (@SrinidhiShetty7) June 28, 2020
ಅಯ್ಯೋ, ಶ್ರೀನಿಧಿ ಶೆಟ್ಟಿ ಮದುವೆಯಾಗುತ್ತಿದ್ದಾರಾ? ಎಂದು ಅಚ್ಚರಿ ಪಡಬೇಡಿ. ಯಾಕಂದ್ರೆ ಶ್ರೀನಿಧಿ ಶೆಟ್ಟಿ ನಿಶ್ಚಿತಾರ್ಥ ಆಗುತ್ತಿರುವುದು ರಿಯಲ್ ಆಗಿ ಅಲ್ಲ, ಸಿನಿಮಾದಲ್ಲಿ ಎಂಗೇಜ್‍ಮೆಂಟ್ ಆಗುತ್ತಿದ್ದಾರೆ. ಕಾಲಿವುಡ್ ನಟ ಚಿಯಾನ್ ವಿಕ್ರಂ ನಟನೆಯ ‘ಕೋಬ್ರಾ’ ಸಿನಿಮಾದಲ್ಲಿ ಇವರೇ ನಾಯಕಿ. ಈ ಸಿನಿಮಾದ ಹಾಡೊಂದನ್ನು ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದ್ದು, ದಿನಾಂಕ ಕೂಡ ತಿಳಿಸಿದೆ.
Excited to announce #ThumbiThullal #CobraFirstSingle releases tomorrow, June 29th at 5pm IST!🎼 @arrahman #ChiyaanVikram @SonyMusicSouth @JioSaavn #Cobra pic.twitter.com/M2sYjqRd8X
— Shreya Ghoshal (@shreyaghoshal) June 28, 2020
ಈ ಹಾಡು ಈ ಸಿನಿಮಾದ ಹೀರೋ ಮತ್ತು ಹೀರೋಯಿನ್‌ಗೆ ಸಂಬಂಧಪಟ್ಟಿರೋದರಿಂದ ವಿಶೇಷವಾದ ಆಹ್ವಾನ ಪತ್ರಿಕೆಯನ್ನು ಚಿತ್ರತಂಡ ರೆಡಿ ಮಾಡಿದೆ. ಇದನ್ನು ಒಮ್ಮೆಲೆ ನೋಡಿದವರಿಗೆ ಶ್ರೀನಿಧಿ ಶೆಟ್ಟಿ ನಿಜ ಜೀವನದ ಆಹ್ವಾನ ಪತ್ರಿಕೆ ಎಂದು ಅನಿಸುತ್ತದೆ. ಈ ಪೋಸ್ಟನ್ನು ನಟಿ ಶ್ರೀನಿಧಿ ಕೂಡ ಟ್ವಿಟ್ಟರಿನಲ್ಲಿ ಅಪ್ಲೋಡ್ ಮಾಡಿದ್ದರು. ಅಲ್ಲದೇ ಹಾಡಿನ ಕೆಲವು ನಿಶ್ಚಿತಾರ್ಥದ ಫೋಟೋಗಳನ್ನು ಕೂಡ ಶೇರ್ ಮಾಡಿಕೊಂಡಿದ್ದಾರೆ. ಇಂದು ಹಾಡು ಬಿಡುಗಡೆಯಾಗಲಿದೆ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
