fbpx
ಸಮಾಚಾರ

“ಕೆಜಿಎಫ್‌-2ನಲ್ಲಿ ಹೀರೋನೂ ನಾನೇ, ವಿಲನ್‌ ಕೂಡ ನಾನೇ” ರಮೀಕಾ ಸೇನ್‌ ಪಾತ್ರದ ಸೀಕ್ರೆಟ್ ಬಿಚ್ಚಿಟ್ಟ ನಟಿ ರವೀನಾ ಟಂಡನ್‌!

ಕೆಜಿಎಫ್ ಚಿತ್ರದ ಹವಾ ಎಷ್ಟರ ಮಟ್ಟಿಗೆ ಇದೆ ಅಂದರೆ ಕೇವಲ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದಲ್ಲಿ ಅಭಿಮಾನಿಗಳ ಮನ ಗೆದ್ದಿದೆ. ಅಷ್ಟೇ ಅಲ್ಲದೆ ಕೆಜಿಎಫ್-2 ಚಿತ್ರದ ಮೇಲೂ ಬಹಳಷ್ಟು ನಿರೀಕ್ಷೆ ಇದ್ದು, ಕಾತುರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ನಟಿ ರವೀನಾ ಟಂಡನ್ ಸಿನಿಮಾದಲ್ಲಿ ತಮ್ಮ ಪಾತ್ರದ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.

ಬಾಲಿವುಡ್ ಚೆಲುವೆ ರವೀನಾ ಟಂಡನ್ ಈಗಾಗಲೇ ‘ಕೆಜಿಎಫ್-2’ ಸಿನಿಮಾದಲ್ಲಿ ಪ್ರಧಾನ ಮಂತ್ರಿ ರಮಿಕಾ ಸೇನ್ ಪಾತ್ರದ ಚಿತ್ರೀಕರಣ ಮುಗಿಸಿದ್ದಾರೆ. ಆದರೆ ನಟಿ ರವೀನಾ, ಮಾಧ್ಯಮವೊಂದರಲ್ಲಿ ತಾವು ತೊಡಗಿಕೊಂಡಿರುವ ಕಾರ್ಯಗಳ ಬಗ್ಗೆ ಮಾತನಾಡುತ್ತಾ ‘ಕೆಜಿಎಫ್’ ಸಿನಿಮಾದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಅದರಲ್ಲಿ ನಾನೇ ಹೀರೋ, ನಾನೇ ವಿಲನ್ ಎಂದು ಹೇಳಿದ್ದಾರೆ.

‘ಚಿತ್ರದಲ್ಲಿ ನಾನು ರಾಜಕಾರಣಿಯಾಗಿ ಕಾಣಿಸಿಕೊಳ್ಳಲಿದ್ದೇನೆ. ಅದು ತುಂಬ ಪವರ್‌ಫುಲ್ ಪಾತ್ರವಾಗಿದೆ. ಅವಳು ಚಿತ್ರದಲ್ಲಿ ಹೀರೋ ಆಗಿರುತ್ತಾಳೆ, ಹಾಗೆಯೇ ವಿಲನ್ ಕೂಡ ಅವಳೇ ಆಗಿರುತ್ತಾಳೆ’ ಎಂದು ಮಾಹಿತಿ ನೀಡಿರುವ ಅವರು, ಚಿತ್ರದಲ್ಲಿ ಬಹಳ ಆಸಕ್ತಿಕರವಾದ ಕಥೆ ಇದೆ ಎಂಬುದನ್ನು ತಿಳಿಸಿದ್ದಾರೆ. ಅಂದಹಾಗೆ ‘ಪಾರ್ಟ್‌ 1’ರಲ್ಲಿ ರಮೀಕಾ ಸೇನ್ ಪಾತ್ರವು ರಾಕಿ ಭಾಯ್‌ಗೆ ಡೆತ್‌ ವಾರಂಟ್‌ ಅನ್ನು ಜಾರಿ ಮಾಡುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top