fbpx
ಸಮಾಚಾರ

“ನಮ್ಮಔಷಧಿ ಕೊರೋನಾ ಗುಣಪಡಿಸಲಿದೆ ಎಂದು ನಾವೆಂದೂ ಹೇಳಿಲ್ಲ” ಯುಟರ್ನ್ ಹೊಡೆದ ರಾಮದೇವ್ ಬಾಬಾ

ಕೊರೋನಾಗೆ ಔಷಧ ಕಂಡುಹಿಡಿದಿದ್ದಾಗಿ ಹೇಳಿಕೊಂಡಿದ್ದ ಬಾಬಾ ರಾಮದೇವ್‌ ನೇತೃತ್ವದ ಪತಂಜಲಿ ಯೋಗಪೀಠ, ಈಗ ತನ್ನ ಹೇಳಿಕೆಯಿಂದ ಉಲ್ಟಾಹೊಡೆದಿದೆ. ತಾನು ಕೊರೋನಾಗೆ ಔಷಧ ಕಂಡು ಹಿಡಿದಿದ್ದಾಗಿ ಹೇಳಿಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ.

“ಕೊರೊನಿರಲ್ ಕೊರೊನಾವೈರಸ್ ರೋಗಿಗಳನ್ನು ಗುಣಪಡಿಸಬಹುದು ಅಥವಾ ನಿಯಂತ್ರಿಸಬಹುದು ಎಂದು ನಾವು ಎಂದಿಗೂ ಹೇಳಲಿಲ್ಲ, ನಾವು ಔಷಧಿ ತಯಾರಿಸಿದ್ದೇವೆ. ಅವುಗಳನ್ನು ಕೊರೊನಾವೈರಸ್ ರೋಗಿಗಳನ್ನು ಗುಣಪಡಿಸುವ ಕ್ಲಿನಿಕಲ್ ಪ್ರಯೋಗಗಳಲ್ಲಿ ಮಾತ್ರ ಬಳಸಿದ್ದೇವೆ. ಅದೇ ಕೊರೊನಾವೈರಸ್‌ಗೆ ಔಷಧಿ ಎಂದು ನಾವು ಎಲ್ಲೂ ಹೇಳಿಲ್ಲ. ಕ್ಲಿನಿಕಲ್ ಪ್ರಯೋಗ ನಡೆಸಲು ಸರ್ಕಾರದಿಂದ ಅಗತ್ಯ ಅನುಮತಿಯನ್ನು ಪಡೆದಿದ್ದೇವೆ ಎಂದು ನಾವು ಹೇಳಿದ್ದೇವೆ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ”

“ನಾವು ತುಳಸಿ ಗಿಲೋಯ್ ಅಶ್ವಗಂಧರ ಸಂಯೋಜನೆ ಹೊಂದಿದ ಸುಧಾರಿತ ಔಷಧಿ ತಯಾರಿಸಿದ್ದೇವೆ. ಮತ್ತು ಈ ಔಷಧಿ ಕೋವಿಡ್ ರೋಗಿಗಳ ಮೇಲೆ ಕ್ಲಿನಿಕಲ್ ಪ್ರಯೋಗ ಮಾಡಲಾಗಿ ಅವರು ಗುಣಹೊಂದಿದ್ದಾರೆ. ನಮ್ಮ ವಿರುದ್ಧ ಪಿತೂರಿ ನಡೆಸಲಾಗಿದೆ ಮತ್ತು ಆಯುಷ್ ಸಚಿವಾಲಯವು ಬಯಸಿದರೆ ನಾವು ಇನ್ನೊಮ್ಮೆ ಈ ಪ್ರಯೋಗ ಕೈಗೊಳ್ಳಲು ಸಿದ್ದವಿದ್ದೇವೆ.” ಎಂದು ಪತಂಜಲಿ ಸಂಸ್ಥೆ ಹೇಳಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top