fbpx
ಸಮಾಚಾರ

59 ಚೀನಾ ಆ್ಯಪ್‌ ಜೊತೆ PUBG ಮತ್ತು Zoom ಆ್ಯಪ್ ಬ್ಯಾನ್ ಮಾಡಿಲ್ಲ ಯಾಕೆ? ಕುತೂಹಲಕ್ಕೆ ಉತ್ತರ ಇಲ್ಲಿದೆ!

ಚೀನಾದ ಪ್ರಸಿದ್ಧ 59 ಆ್ಯಪ್‌ಗಳನ್ನು ಭಾರತ ಸರ್ಕಾರ ನಿಷೇಧಿಸಿದೆ. ನಿಷೇಧಿತ ಪಟ್ಟಿಯಲ್ಲಿ ಟಿಕ್​ಟಾಕ್ (TikTok) ಸೇರಿದಂತೆ ಅನೇಕ ಜನಪ್ರಿಯ ಅಪ್ಲಿಕೇಶನ್‌ಗಳಿವೆ. ಸರ್ಕಾರದ ಈ ನಿರ್ಧಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. ಈ ಮದ್ಯೆ PUBG ಮತ್ತು Zoom ಆ್ಯಪ್ ಬ್ಯಾನ್ ಮಾಡಿಲ್ಲ ಯಾಕೆ? ಕುತೂಹಲ ಕೂಡ ಹುಟ್ಟುಕೊಂಡಿದೆ

ಈ ಹಿಂದೆ ಕೇಂದ್ರ ಸರ್ಕಾರವೇ ಝೂಮ್ ಆ್ಯಪ್ ಬಳಸದಂತೆ ಸೂಚಿಸಿತ್ತು. ಇಷ್ಟೇ ಅದು ಚೀನಿ ಆ್ಯಪ್ ಅನ್ನೋ ಮಾತುಗಳು ಕೇಳಿಬಂದಿದೆ. ಇಷ್ಟಾಗಿಯೂ ಝೂಮ್ ಆ್ಯಪ್ ಬ್ಯಾನ್ ಪಟ್ಟಿಯಲ್ಲಿ ಇಲ್ಲ ಯಾಕೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಪ್ರಶ್ನಿಸಿದ್ದಾರೆ. ಝೂಮ್ ಮಾತ್ರವಲ್ಲ ಪಬ್‌ಜಿ ಕೂಡ ಬ್ಯಾನ್ ಮಾಡಿಲ್ಲ ಯಾಕೆ ಎಂದು ಕೇಳಿದ್ದಾರೆ.

ಸರ್ಕಾರ PUBG ಆ್ಯಪ್​ ಮೇಲೆ ನಿಷೇಧ ಹೇರದಿರುವ ಮುಖ್ಯ ಕಾರಣ ಅದು ಚೀನಾ ಅಪ್ಲಿಕೇಶನ್ ಅಲ್ಲ ಎಂಬುದು. ದಕ್ಷಿಣ ಕೊರಿಯಾದ ಆನ್‌ಲೈನ್ ವಿಡಿಯೋ ಗೇಮ್ ಕಂಪೆನಿ ಇದನ್ನು ನಿರ್ಮಿಸಿದೆ. ನಂತರ ಚೀನಾದ ಟೆನ್ಸೆಂಟ್ ಕಂಪನಿ ಈ ಜನಪ್ರಿಯ ಗೇಮ್ ನಲ್ಲಿ ಹೂಡಿಕೆ ಮಾಡಿ, ಎಲ್ಲೆಡೆ ಪಬ್ಲಿಷ್, ಪ್ರಚಾರ ಮಾಡಿತ್ತು.

ಇನ್ನು ಝೂಮ್ ಚೀನಾ ಆ್ಯಪ್ ಅಲ್ಲ. ಇದು ಅಮೆರಿಕದ ಕಂಪನಿ. ಝೂಮ್ ಆ್ಯಪ್ ಹುಟ್ಟು ಹಾಕಿದ್ದು ಚೀನಾ ಮೂಲದ ಅಮೆರಿಕ ಉದ್ಯಮಿ ಎರಿಕ್ ಯುಆನ್. ಇದರ ಪ್ರಧಾನ ಕಚೇರಿ ಇರುವುದು ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸೆಯಲ್ಲಿ. ಜೂಮ್ ಕಂಪನಿಯ ಸಿಇಓ ಆಗಿರುವ ಎರಿಕ್ ಯುಆನ್ ಅಮೆರಿಕ ಪೌರತ್ವ ಹೊಂದಿದ್ದಾರೆ. ಇದರ ಹೊರತಾಗಿ ಈ ಆ್ಯಪ್​ನ ಹಿಂದೆ ಚೀನಿಯರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿಯೇ ಈ ಹಿಂದೊಮ್ಮೆ ಆ್ಯಪ್​ನ ಸುರಕ್ಷಿತೆ ಬಗ್ಗೆ ಪ್ರಶ್ನೆಗಳು ಕೇಳಿಬಂದಿದ್ದವು. ನಂತರ ಮಾರ್ಗಸೂಚಿಯಂತೆ ಜೂಮ್ ಆಪ್ ಕೂಡಾ ಸುರಕ್ಷತೆ ಹೆಚ್ಚಿಸಿ ಹೊಸ ಆವೃತ್ತಿ ಬಿಡುಗಡೆ ಮಾಡಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top