fbpx
ಸಮಾಚಾರ

ಚಿರು ಸರ್ಜಾ ಹೆಸರಲ್ಲಿ ಮಹತ್ವದ ನಿರ್ಧಾರ ಕೈಗೊಂಡ ಮೇಘನಾ ರಾಜ್, ಚಿರು ಆತ್ಮೀಯರು!

ಜೂನ್ 7ರಂದು ಅಗಲಿದ ಯುವನಟ ಚಿರಂಜೀವಿ ಅವರ ಒಂದು ತಿಂಗಳ ಪುಣ್ಯ ಸ್ಮರಣೆ. ಒಂದನೇ ತಿಂಗಳ ಪುಣ್ಯ ಸ್ಮರಣೆ ಹಿನ್ನೆಲೆ ಚಿರು ಗೆಳೆಯ ಪನ್ನಗಾಭರಣ ಅವರ ಹೊಸಕೆರೆ ಹಳ್ಳಿಯ ಮನೆಯಲ್ಲಿ, ಚಿರಂಜೀವಿ ಸರ್ಜಾ ಆತ್ಮೀಯ ಗೆಳೆಯರೆಲ್ಲಾ ಸೇರಿ ಪುಣ್ಯಸ್ಮರಣೆ ಆಚರಣೆ ಮಾಡಿದರು. ಪನ್ನಗಾಭರಣ, ನಟ ಪ್ರಜ್ವಲ್ ದೇವರಾಜ್, ರಾಗಿಣಿ ಪ್ರಜ್ವಲ್ ಸೇರಿದಂತೆ ಚಿರು ಆತ್ಮೀಯ ಗೆಳೆಯರೆಲ್ಲಾ ಭಾಗಿಯಾಗಿದ್ದರು. ಈ ವೇಳೆ ಚಿರು ಪತ್ನಿ ಮೇಘನಾ ರಾಜ್ ಕೂಡ ಜೊತೆಗಿದ್ದರು.

 

 

ಚಿರು ನಗುವ ಪೋಟೋ ಇಟ್ಟು, ಅವರಿಗೆ ಇಷ್ಟವಾದ ತಿಂಡಿ ತಿನಿಸುಗಳನ್ನ ಇಟ್ಟು ಪೂಜೆ ಮಾಡಿದ್ದಾರೆ. ಈ ವೇಳೆ ಅವರೆಲ್ಲರೂ ಚಿರಂಜೀವಿ ಫೋಟೋ ಮುಂದೆ ಕುಳಿತು ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋದಲ್ಲಿ ಪ್ರತಿಯೊಬ್ಬರು ನಗುವ ಮೂಲಕ ಚಿರುವಿಗೆ ಗೌರವ ಸಲ್ಲಿಸಿದ್ದಾರೆ. ಜೊತೆಗೆ ಚಿರಂಜೀವಿ ಸರ್ಜಾ ಹೆಸರಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ! ಏನದು ಅಂತೀರಾ? ಮುಂದೆ ಓದಿ

ನಾವಿನ್ನು ಅಳಬಾರದು ಎಂದು ನಿರ್ಧಾರ:
‘ಒಂದು ತಿಂಗಳು ಕಳೆದಿದೆ. ಆದರೆ ಕಣ್ಣೀರು….ನಾವಿನ್ನು ಅಳಬಾರದು ಎಂದು ನಿರ್ಧಾರ ಮಾಡಿಕೊಂಡಿದ್ದೇವೆ. ಜೀವನ ತುಂಬ ಚಿಕ್ಕದು, ನಾವು ಖುಷಿಯಾಗಿರಬೇಕು ಎಂದು ಅವನು ಯಾವಾಗಲೂ ಹೇಳುತ್ತಿದ್ದ. ನಾವು ಚಿರುನನ್ನು ಆಚರಣೆ ಮಾಡುತ್ತೇವೆ, ಅವನ ಬಗ್ಗೆ ದುಃಖ ಪಡುವುದಿಲ್ಲ. ಅವನು ನನ್ನ ಫ್ಯಾಮಿಲಿಯವನು. ಅವನಿಗೆ ನಾವೆಲ್ಲವೂ ಆಗಿದ್ದೆವು, ನಮಗೆ ಅವನಾಗಿದ್ದ. ನಾವು ಪ್ರತಿ ವರ್ಷ, ಪ್ರತಿ ತಿಂಗಳು ಪ್ರತಿ ದಿನ ಪ್ರತಿ ದಿನ, ಪ್ರತಿ ಕ್ಷಣ ಕೂಡ ಪ್ರೀತಿಯಿಂದ ಜೀವನ ಕಳೆಯಲು ಪ್ರಯತ್ನಪಡುತ್ತೇವೆ. ಪರಸ್ಪರ ಗೌರವಿಸಿ, ಪ್ರೀತಿಸಿ, ದ್ವೇಷ ಮಾಡೋಕೆ ಜೀವನ ತುಂಬ ಚಿಕ್ಕದು ಎಂದು ಆತ ನಮಗೆ ಹೇಳಿಕೊಟ್ಟಿದ್ದನು. ಎಲ್ಲರೂ ನಗುತ್ತ ಅವನನ್ನು ನಮ್ಮೊಳಗೆ ಅನುಭವಿಸಲು ಪ್ರಯತ್ನಿಸುತ್ತೇವೆ. ಯಾವಾಗಲೂ ನಿನ್ನನ್ನು ಪ್ರೀತಿಸುತ್ತೇವೆ ಮಚ್ಚಾ. ನಿನ್ನ ಶಾಂತಿ ಹುಡುಕಿಕೋ’ ಎಂದು ಚಿರು ಗೆಳೆಯ ಪನ್ನಗಾಭರಣ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

 

 

ಚಿರು ಪತ್ನಿ ಮೇಘನಾ ರಾಜ್ ಭಾವುಕ ಪತ್ರ:
ಚಿರು ಪತ್ನಿ ಮೇಘನಾ ರಾಜ್ ಚಿರುವಿನ ಫೋಟೋ ಮತ್ತು ಸ್ನೇಹಿತರು, ಆಪ್ತರು ನಗು ಮುಖದಿಂದ ತೆಗೆಸಿಕೊಂಡಿರುವ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಜೊತೆಗೆ “ನನ್ನ ಪ್ರೀತಿಯ ಚಿರು…ಚಿರು ಒಂದು ಸೆಲೆಬ್ರೇಷನ್ ಆಗಿದೆ. ಈ ಆಚರಣೆ ಯಾವಾಗಲೂ ಇರುತ್ತದೆ. ಈಗಲೂ ಮತ್ತು ಮುಂದೆಯೂ ಇರುತ್ತದೆ. ಬೇರೆ ಯಾವ ರೀತಿಯನ್ನು ನೀನು ಇಷ್ಟಪಡುವುದಿಲ್ಲ ಎಂಬುದು ನನಗೆ ತಿಳಿದಿದೆ. ಆದರೆ ನಾನು ನಗಲು ಕಾರಣ ಚಿರು” ಎಂದು ಚಿರುವಿನ ನಗುವಿನ ಬಗ್ಗೆ ನೋವಿನಿಂದ ಬರೆದುಕೊಂಡಿದ್ದಾರೆ.

 

 

 

 

ಅಷ್ಟೇ ಅಲ್ಲದೇ “ಅವರು ನನಗೆ ಕೊಟ್ಟಿದ್ದು ಅತ್ಯಂತ ಅಮೂಲ್ಯವಾದುದ್ದು ನನ್ನ ಕುಟುಂಬ…ನಾವು ಮಾತ್ರವೇ. ನಾವು ಯಾವಾಗಲೂ ಒಟ್ಟಿಗೆ ಇರುತ್ತೇವೆ ಬೇಬಿಮಾ. ಪ್ರತಿ ದಿನವೂ ನೀವು ಇಷ್ಟಪಡುವ ರೀತಿಯಲ್ಲಿಯೇ ಇರುತ್ತೇವೆ. ಪ್ರೀತಿ, ನಗು, ಕುಚೇಷ್ಟೇಗಳು, ಪ್ರಾಮಾಣಿಕತೆ ಮತ್ತು ಮುಖ್ಯವಾಗಿ ಒಗ್ಗಟ್ಟಿನಿಂದ ಒಟ್ಟಾಗಿರುತ್ತೇವೆ. ನಾವು ನಿಮ್ಮನ್ನು ತುಂಬಾ ಪ್ರೀತಿಸುತ್ತೇವೆ ಬೇಬಿಮಾ” ಎಂದು ಮೇಘನಾ ಹೇಳಿದ್ದಾರೆ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top