fbpx
ಸಮಾಚಾರ

“ಸುಶಾಂತ್ ಸಾವಿಗೆ ವೈಫಲ್ಯ ಕಾರಣವಲ್ಲ, ಬೇರೇನೋ ಇದೆ” ಸುಶಾಂತ್ ಆತ್ಮಹತ್ಯೆಯ ಬಗ್ಗೆ ಸುದೀಪ್ ಅನುಮಾನ

ಬಾಲಿವುಡ್​​ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಮುಂಬೈನ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಹಲವಾರು ಬಾಲಿವುಡ್ ಸಿನಿಮಾದಲ್ಲಿ ನಟಿಸಿದ್ದ ಸುಶಾಂತ್ ಸಿಂಗ್ ಸಾವು ಅಭಿಮಾನಿಗಳಿಗೆ ಆಘಾತ ಉಂಟುಮಾಡಿತ್ತು. ಅಲ್ಲದೆ ಈ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಕೂಡ ಕಾಡಿದ್ದವು. ಸುಶಾಂತ್ ಸಿಂಗ್ ಆತ್ಮಹತ್ಯೆಗೆ ನಿಖರವಾದ ಕಾರಣ ಬಹಿರಂಗವಾಗಿಲ್ಲವಾದರೂ, ಕಳೆದ ಕೆಲವು ತಿಂಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂಬ ಮಾತು ಕೇಳಿ ಬಂದಿತ್ತು.

ಸುಶಾಂತ್ ಆತ್ಮಹತ್ಯೆಯ ಬಗ್ಗೆ ತನಿಖೆಯಾಗಬೇಕು ಅಂತ ಸುಶಾಂತ್ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಇದೀಗ ಹಿಂದಿ ವೆಬ್​ಸೈಟ್​ವೊಂದಕ್ಕೆ ಸಂದರ್ಶನ ನೀಡಿದ್ದ ವೇಳೆ ಕಿಚ್ಚ ಸುದೀಪ್​​​ ಸುಶಾಂತ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದೇ ಮೊದಲ ಬಾರಿಗೆ ಅವಕಾಶಗಳಿಲ್ಲ ಅಥವಾ ಸೋಲು ಸುಶಾಂತ್ ಸಾವಿಗೆ ಕಾರಣ ಅನ್ನೋದನ್ನ ನಾನು ಒಪ್ಪೋದಿಲ್ಲ ಎಂದು ಮಾತನಾಡಿದ್ದಾರೆ.

ಸುಶಾಂತ್ ವೃತ್ತಿ ಬದುಕಿನಲ್ಲಿ ಯಶಸ್ಸು ಗಳಿಸಿದ್ದರು. ಹೀಗಾಗಿ ವೈಫಲ್ಯಕ್ಕಿಂತಲೂ ಬೇರೆ ಯಾವುದೋ ಸಂಗತಿ ಅವರನ್ನು ತೀವ್ರವಾಗಿ ಕಾಡುತ್ತಿತ್ತು ಎಂದು ನಾನು ವೈಯಕ್ತಿಕವಾಗಿ ನಂಬುತ್ತೇನೆ. ಅಲ್ಲಿ ಕೇವಲ ಸೋಲಿನಿಂದ ಆಗಿರೋದಲ್ಲ ಬೇರೇನೋ ಸ್ಟ್ರಾಂಗ್ ಕಾರಣವಿದೆ ಎಂಬುದಾಗಿ ಸುದೀಪ್ ತಿಳಿಸಿದ್ದಾರೆ.

ನಾನು ಕುಟುಂಬ ಸಮೇತ ಒಮ್ಮೆ ಬ್ಯಾಂಕಾಕ್​ಗೆ ಹೋಗಿದ್ದಾಗ, ಏರ್​ಪೋರ್ಟ್​ನಲ್ಲಿ ಸುಶಾಂತ್ ಸಿಕ್ಕಿದ್ದರು. ಯಾವಾಗಲೂ ನಗುತ್ತಿದ್ದ ವ್ಯಕ್ತಿ ಸುಶಾಂತ್. ಅವರನ್ನು ನೋಡಿದಾಕ್ಷಣ ನನ್ನ ಕುಟುಂಬದವರೆಲ್ಲರೂ ಹೋಗಿ ಫೋಟೋ ಕ್ಲಿಕ್ಕಿಸಿಕೊಂಡೆವು. ಆತ ಯಶಸ್ಸು ಕಂಡಿರದಿದ್ದರೆ ಜನ ಗುರುತಿಸಲ್ಲ

ಪ್ರತಿದಿನ ನೂರಾರು ಮಂದಿ ಬಾಲಿವುಡ್​ಗೆ ಬರುತ್ತಾರೆ. ಆದರೆ ಯಶಸ್ಸು ಕಂಡವರು ಕೆಲವು ಮಂದಿ ಮಾತ್ರ ಅಂಥವರಿಗೆ ಹೋಲಿಸಿದರೆ ಸುಶಾಂತ್ ಕೊಂಚ ಜಾಸ್ತಿಯೇ ಸಕ್ಸಸ್ ಕಂಡಿದ್ದರು. ಆದರೆ ನಾನು ಇದರ ಹೊಳಹೊಕ್ಕು ಮಾತನಾಡಲು ಬಯಸುವುದಿಲ್ಲ. ಏಕೆಂದರೆ ಅಲ್ಲಿ ಏನಾಗಿದೆಯೋ ನನಗೆ ತಿಳಿದಿಲ್ಲ. ಆದರೆ ಬೇರೆ ಏನೋ ಸಮಸ್ಯೆ ಇತ್ತು ಎನಿಸುತ್ತದೆ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top