fbpx
ಸಮಾಚಾರ

ಕೊನೆಗೂ ‘ಅಪ್ಪಟ ಕನ್ನಡಿಗರ’ ಬಳಿ ಕ್ಷಮೆ ಕೇಳಿದ ಕಾಮಿಡಿ ಕಿಲಾಡಿ ನಯನಾ

ಕಾಮಿಡಿ ಕಿಲಾಡಿಗಳು ಎಂಬ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಗಳಿಸಿ ಕನ್ನಡದ ಕೆಲವು ಚಿತ್ರಗಳಲ್ಲಿಯೂ ನಟಿಸಿರುವ ‘ನಯನಾ’ ಸದ್ಯ ಅಪ್ಪಟ ಕನ್ನಡಿಗರ ಬಳಿ ಕ್ಷಮೆ ಕೇಳಿದ್ದಾರೆ. ಫೇಸ್‌ಬುಕ್‌ನಲ್ಲಿ ಕನ್ನಡ ಬರೆಯಿರಿ ಎಂದು ಪ್ರಶ್ನಿಸಿದ್ದ ವ್ಯಕ್ತಿಗೆ ಅವಾಚ್ಯವಾಗಿ ನಿಂದಿಸಿ ವಿವಾದ ವಿಚಾರವಾಗಿ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟಿ ನಯನಾ ಕ್ಷಮೆ ಕೋರಿದ್ದಾರೆ.

 

 

ನಯನಾ ಅವ್ರು ನೆನ್ನೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹೊಸ ಫೋಟೊವೊಂದನ್ನು ಪೋಸ್ಟ್ ಮಾಡಿದ್ದರು. ಆ ಫೋಟೋಗೆ ವಿವರಣೆಯನ್ನು ಇಂಗ್ಲಿಷ್‌ನಲ್ಲಿ ಬರೆದುಕೊಂಡಿದ್ದರು. ಅದಕ್ಕೆ ಒಬ್ಬರು ‘ಫೇಮಸ್ ಆಗೋತನಕ ಕನ್ನಡ ಬೇಕು. ಆದ್ಮೇಲೆ ಇಂಗ್ಲಿಷ್’ ಎಂದು ಅಸಮಾಧಾನ ವ್ಯಕ್ತಪಡಿಸಿ ಕಾಮೆಂಟ್ ಹಾಕಿದ್ದರು. ಅದಕ್ಕೆ ನಯನಾ, ‘ಅಪ್ಪಾ ಕನ್ನಡದ ಭಕ್ತ ಮುಚ್ಕೊಂಡ್ ನಿನ್ನ ಕೆಲಸ ನೋಡ್ಕೋ’ ಎಂದು ಪ್ರತಿಕ್ರಿಯಿಸಿದ್ದರು. ನಯನಾ ಕನ್ನಡಿಗರ ಬಳಿ ಕ್ಷಮೆ ಕೇಳಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದರು.

 

ಎಲ್ಲರಿಗೂ ನಮಸ್ಕಾರ
ಈ ವೀಡಿಯೋ ಅಪ್ಪಟ ಕನ್ನಡ ಅಭಿಮಾನಿಗಳಿಗೆ…..

ಈ ಮುಂಚೆ ನಾನು ಕನ್ನಡದಲ್ಲಿ ಸಾಲುಗಳನ್ನ ಹಾಕಿದಾಗ ಒಬ್ಬ ವ್ಯಕ್ತಿ…

Nayana Comedy Khiladigalu ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶುಕ್ರವಾರ, ಜುಲೈ 10, 2020

 

ವಿಡಿಯೋ ಒಂದನ್ನು ಶೇರ್ ಮಾಡಿರುವ ನಯನಾ ‘ಎಲ್ಲ ಅಪ್ಪಟ ಕನ್ನಡಾಭಿಮಾನಿಗಳಿಗೆ ನಾನು ಕ್ಷಮೆ ಕೇಳುತ್ತೇನೆ’ ಎನ್ನುವ ಮೂಲಕ ನಯನಾ ಮಾತು ಆರಂಭಿಸಿದ್ದಾರೆ. ‘ಈಗಿನ ಜನರೇಷನ್‌ನಲ್ಲಿ ದಿನ ಮಾತನಾಡುವಾಗ ಎಲ್ಲರೂ ಇಂಗ್ಲಿಷ್ ಪದಗಳನ್ನು ಬಳಸುತ್ತಾರೆ. ಅದನ್ನು ಊಟಕ್ಕೆ ಉಪ್ಪಿನಕಾಯಿ ರೀತಿ ಬಳಸುತ್ತೇವೆಯೇ ವಿನಾ, ಇಂಗ್ಲಿಷ್ ಅವಶ್ಯಕತೆ ಎಂದು ಬಳಸುತ್ತಿಲ್ಲ. ನಾನೂ ಕನ್ನಡ ಶಾಲೆಯಲ್ಲಿ ಓದಿರೋದ್ರಿಂದ ಅದರ ಮೇಲೆ ಅಭಿಮಾನ ಮತ್ತು ಅಧಿಕಾರವಿದೆ. ಮತ್ತೊಮ್ಮೆ ಕ್ಷಮೆ ಕೇಳುತ್ತೇನೆ’ ಎಂದು ಅವರು ಹೇಳಿದ್ದಾರೆ.

‘ನನ್ನ ಕಡೆಯಿಂದ ತಪ್ಪಾಗಿದ್ದರೆ ಕ್ಷಮಿಸಬೇಕು. ಯಾರೆಲ್ಲ ಕಾಮೆಂಟ್ ಸೆಕ್ಷನ್‌ನಲ್ಲಿ ಅವಾಚ್ಯ ಶಬ್ದಗಳಿಂದ ರಿಪ್ಲೈ ಮಾಡಿದ್ದೀರಿ. ಅಂತಹವಳು ಇಂತಹವಳು ಎಂದಿದ್ದೀರಿ. ತುಂಬಾ ಜನ ಅವಾಚ್ಯ ಶಬ್ದಗಳಿಂದ ಬೈದಿದ್ದೀರಲ್ಲ. ನಿಮ್ಮ ಕನ್ನಡ ಅಭಿಮಾನ ಏನು ಎನ್ನುವುದು ಇದರಲ್ಲಿ ಗೊತ್ತಾಗುತ್ತದೆ’ ಎಂದಿದ್ದಾರೆ ನಯನಾ.

“ಈ ಮುಂಚೆ ನಾನು ಕನ್ನಡದಲ್ಲಿ ಸಾಲುಗಳನ್ನ ಹಾಕಿದಾಗ ಒಬ್ಬ ವ್ಯಕ್ತಿ ಅವ್ಯಾಚ್ಯ ಶಬ್ದ ಬಳಕೆ ಮಾಡಿದರು ನಿನಗೆ ಕೊಬ್ಬು ದುರಂಕರ ಅಂತ ಅದನ್ನ ಒಂದಷ್ಟು ಜನ ದುರುಪಯೋಗ ಪಡಿಸಿಕೊಂಡು ಅವರುಗಳು ಕೂಡ ಕೆಟ್ಟ ಪದಬಳಕೆ ಮಾಡಿದ್ದರೂ,, ನಾನು ಯಾವುದೇ ಪೋಸ್ಟ್ ಹಾಕಿದರು ಕೂಡ ಆ ತರಹದ ನೆಗೆಟಿವ್ ಕಾಮೆಂಟ್ ಗಳು ಬರುತ್ತಿದ್ದವು ನಾನು ತುಂಬಾ ದಿನಗಳಿಂದ ಗಮನಿಸುತ್ತಾ ಇದ್ದೆ ,, ನನ್ನ ತಾಳ್ಮೆಗೂ ಮಿತಿಯಿದೆ ಅಲ್ಲವೆ ನಾನು ಆ ವ್ಯಕ್ತಿಗೆ ಅದನ್ನು ಹೇಳಿರುವುದೆ ವಿನಹ ಅವರು ಕನ್ನಡದ ಅಭಿಮಾನಿ ಎಂದು ಅಥವಾ ಕನ್ನಡ ಭಾಷೆ ಬಗ್ಗೆಯಾಗಲಿ ನಾನು ಮಾತನಾಡಲಿಲ್ಲ.”ಎಂದು ನಯನಾ ಹೇಳಿದ್ದಾರೆ

“ನಾನು ಎಲ್ಲಿಯೂ ಯಾವುದೇ ಕಾರ್ಯಕ್ರಮಗಳಲ್ಲಿಯೂ ಕೂಡ ಕನ್ನಡ ಭಾಷೆ ಕನ್ನಡದ ಅಭಿಮಾನಗಳ ಬಗ್ಗೆ ಕೀಳಾಗಿ ಮಾತನಾಡಿದವಳು ಅಲ್ಲಾ ,,ನಮ್ಮ ಕನ್ನಡವನ್ನು ಎಲ್ಲಾ ಕಡೆಯೂ ನಾವು ಬೆಳೆಸಬೇಕು ಅನ್ನೊ ಕೆಲಸ ಮಾಡಬೇಕೆ ಹೊರೆತು ವ್ಯಕ್ತಿಗೆ ಹೇಳಿದನ್ನ ಕನ್ನಡ ಭಾಷೆಗೆ ಹೇಳಿದೀನಿ ಎಂದು ಹೇಳುವುದು ತಪ್ಪಾಗಿ ಕಾಣಿಸುತ್ತೆ .. ಆದರೆ ಕೆಲವರು ಕನ್ನಡ ಅಭಿಮಾನಿಗಳು ಎಂದು ಹೇಳಿ ಒಬ್ಬ ಹೆಣ್ಣಿಗೆ ಉಪಯೋಗಿಸಿರುವ ಪದಬಳಕೆ ಮೇಲೆ ಕೂಡ ಗಮನವಿರಲಿ ಅದರಲ್ಲಿ ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ.”ಎಂದು ನಯನಾ ಹೇಳಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top