fbpx
ಸಮಾಚಾರ

ಚಿನ್ನ-ಬೆಳ್ಳಿ ಆಯ್ತು, ಈಗ ಮಾರುಕಟ್ಟೆಗೆ ಬಂತು ಡೈಮಂಡ್ ಮಾಸ್ಕ್​​: ಬೆಲೆ ಎಷ್ಟು ಗೊತ್ತಾ?

ಕೋವಿಡ್‌-19 ತಡೆಗಟ್ಟುವ ಸಲುವಾಗಿ ಲಾಕ್‌ಡೌನ್‌ ಸಡಿಲಿಕೆ ಮಧ್ಯೆಯೂ ನಿರ್ಬಂಧಕಾಜ್ಞೆ ಮುಂದುವರಿದಿದೆ. ಮುಂಜಾಗ್ರತಕ್ರಮವಾಗಿ ಸಾರ್ವಜನಿಕರು ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸ ಮಾಡುವ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಮಾಸ್ಕ್ ಧರಿಸುವುದು ಕಡ್ಡಾಯವಾದ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ವಿಶೇಷ ಮಾಸ್ಕ್‌ಗಳು ಲಗ್ಗೆ ಇಡುತ್ತಿವೆ.

 

 

ಐಷಾರಾಮಿಗಳಿಗಾಗಿ ಬೆಳ್ಳಿ ಮಾಸ್ಕ್ ಚಿನ್ನದ ಮಾಸ್ಕ್ ಮಾರುಕಟ್ಟೆಗೆ ಬಂದಿದ್ದ ವಿಷಯ ಇತ್ತೀಚಿಗೆ ಸುದ್ದಿಯಾಗಿತ್ತು ಇದೀಗ ವಜ್ರ ಬಳಸಿ ಸಿದ್ಧಪಡಿಸಿರುವ ಡೈಮಂಡ್ ಮಾಸ್ಕ್ ತಯಾರಿಸಲಾಗಿದೆ. ಸೂರತ್‌ನ ಆಭರಣ ಅಂಗಡಿಯೊಂದು ಸಾಂಕ್ರಾಮಿಕ ರೋಗದ ನಡುವೆ ಮದುವೆಯಾಗಲು ಹೋಗುವ ಗ್ರಾಹಕರನ್ನು ಗುರಿಯಾಗಿಸಿಕೊಂಡಿದೆ. ಸೂರತ್‌ನ ಆಭರಣದ ವ್ಯಾಪಾರಿ 1.5 ಲಕ್ಷದಿಂದ 4 ಲಕ್ಷದವರೆಗೆ ವಜ್ರದಿಂದ ಅಲಂಕಾರಗೊಂಡ ಮಾಸ್ಕ್‌ಗಳನ್ನು ಮಾರಾಟ ಮಾಡುತ್ತಿದ್ದಾನೆ..

 

 

ಲಾಕ್‌ಡೌನ್ ಅನ್ನು ತೆಗೆದುಹಾಕುತ್ತಿದ್ದಂತೆ ನಮ್ಮ ಅಂಗಡಿಗೆ ಗ್ರಾಹಕರೊಬ್ಬರು ಬಂದು, ನಮ್ಮ ಮನೆಯಲ್ಲಿ ಮದುವೆ ಇದೆ. ವಧು ವರರಿಗಾಗಿ ವಿಶೇಷವಾದ ಮಾಸ್ಕ್​ ತಯಾರಿಸಿಕೊಡಿ ಅಂತ ಕೇಳಿದ್ದರು. ಹೀಗಾಗಿ ನಮ್ಮ ವಿನ್ಯಾಸಕಾರರಿಗೆ ಹೇಳಿ ವಜ್ರದ ಮಾಸ್ಕ್​​ ರೆಡಿ ಮಾಡಿಸಿದ್ದೆವು, ಅದನ್ನ ಅವರು ಕೊಂಡುಕೊಂಡರು. ನಂತರ ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಬೇಕಾಗಬಹುದು ಅಂತ ಇಂಥ ಅನೇಕ ಮಾಸ್ಕ್​​ಗಳನ್ನ ತಯಾರಿಸಲಾಗಿದೆ. ಇದರಲ್ಲಿ ಅಪ್ಪಟ ವಜ್ರ ಹಾಗೂ ಅಮೇರಿಕನ್ ಡೈಮಂಡ್ ಜೊತೆ ಚಿನ್ನವನ್ನ ಬಳಸಲಾಗಿದೆ ಅಂತ ಆಭರಣದಂಗಡಿಯ ಮಾಲೀಕರು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top