fbpx
ಸಮಾಚಾರ

ಅಗಲಿದ ನಟನಿಗೆ ವಿಶೇಷ ಗೌರವ : ಚಿರು ಸರ್ಜಾ ಖಾತೆಯನ್ನು ‘ಚಿರಸ್ಮರಣೀಯ’ಗೊಳಿಸಿದ ಇನ್‌ಸ್ಟಾಗ್ರಾಮ್

ಜೂನ್ 7ರಂದು ಹೃದಯಾಘಾತದಿಂದ ಅಗಲಿದ ನಟ ಚಿರಂಜೀವಿ ಸರ್ಜಾ ಅವರಿಗೆ ಇನ್‌ಸ್ಟಾಗ್ರಾಂ ಗೌರವ ಸಲ್ಲಿಸಿದೆ. ಚಿರು ಸರ್ಜಾ ಅವರ ಹೆಸರಿನ ಕೆಳಗೆ ‘ರಿಮೆಂಬರಿಂಗ್’ ಪದವನ್ನು ಇನ್‌ಸ್ಟಾಗ್ರಾಂ ಅಳವಡಿಸಿದೆ. ಅಂದರೆ ನಿಮ್ಮನ್ನು ನಾವು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ ಎಂಬುದನ್ನು ಈ ಟ್ಯಾಗ್‌ ಸೂಚಿಸುತ್ತದೆ. ಅಂದರೆ ಚಿರು ಸರ್ಜಾ ಅವರ ಖಾತೆಯನ್ನು ಕಾಯಂ ಆಗಿ ಸ್ಮರಣೀಯವಾಗಿ ಇರಿಸುವ ಮೂಲಕ ಅಗಲಿದ ನಟನಿಗೆ ಗೌರವ ಸಲ್ಲಿಸಿದೆ.

 

 

ರಿಮೆಂಬರಿಂಗ್ ಫೀಚರ್
ಮೃತಪಟ್ಟ ವ್ಯಕ್ತಿಯ ಜೀವನವನ್ನು ನೆನಪಿಸುವುದು ಇನ್‌ಸ್ಟಾಗ್ರಾಂನಲ್ಲಿನ ಮೆಮೋರಿಯಲ್ ಫೀಚರ್ ಆಗಿದೆ. ವ್ಯಕ್ತಿಯ ಹೆಸರಿನ ಕೆಳಗೆ ‘ರಿಮೆಂಬರಿಂಗ್’ ಎಂಬ ಪದ ಹಾಕುವ ಮೂಲಕ ಅವರ ಖಾತೆಯನ್ನು ಚಿರಸ್ಮರಣೀಯವಾಗಿರಿಸುವುದು ಇದರ ಉದ್ದೇಶ. ಅಂದರೆ ಈ ಖಾತೆಯಲ್ಲಿನ ಹಳೆಯ ಪೋಸ್ಟ್‌ಗಳನ್ನು ಫಾಲೋವರ್‌ಗಳು ವೀಕ್ಷಿಸಬಹುದಾಗಿದೆ. ಆದರೆ ಈ ರೀತಿಯ ‘ರಿಮೆಂಬರಿಂಗ್’ ಫೀಚರ್ ಅಳವಡಿಸಿದ ಬಳಿಕ ಬೇರೆ ಯಾರೂ ಈ ಖಾತೆಗೆ ಲಾಗಿನ್ ಆಗಲು ಸಾಧ್ಯವಾಗುವುದಿಲ್ಲ.

ಅಂದಹಾಗೆ ಜೂನ್ 07ರಂದು ನಟ ಚಿರಂಜೀವಿ ಸರ್ಜಾ ಉಸಿರಾಟದ ತೊಂದರೆ ಹಾಗೂ ಎದೆ ನೋವೆಂದು ಮನೆಯಲ್ಲಿಯೇ ಕುಸಿದು ಬಿದ್ದಿದ್ದರು. ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು. ಹಲವು ಚಿತ್ರಗಳಲ್ಲಿ ನಟಿಸಿದ ಈ ಯುವನಟನ ಅಕಾಲಿಕ ಮರಣಕ್ಕೆ ಕನ್ನಡ ಚಿತ್ರರಂಗವೇ ಶಾಕ್‌ಗೆ ಒಳಗಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top