ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಮತ್ತು ಕುತೂಹಲ ಹುಟ್ಟಿಸಿರುವ ಸಿನಿಮಾಗಳಲ್ಲಿ ಒಂದಾಗಿರುವ ‘ಫ್ಯಾಂಟಮ್’ ವಿಭಿನ್ನ ಪಾತ್ರಗಳ ಮೂಲಕ ಕನ್ನಡ ಸಿನಿಮಾಭಿಮಾನಿಗಳ ಗಮನ ಸಳೆಯುತ್ತಿದೆ. ಈ ಚಿತ್ರಕ್ಕೆ ‘ರಂಗಿತರಂಗ’ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ಆ್ಯಕ್ಷನ್-ಕಟ್ ಹೇಳುತ್ತಿದ್ದು, ಚಿತ್ರದ ಒಂದೊಂದೇ ಪಾತ್ರಗಳನ್ನು ಬಹಿರಂಗಪಡಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಮತ್ತು ನಿರೂಪ್ ಭಂಡಾರಿ ಅವರ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಅದರ ಹಿಂದೆಯೇ ಒಂದು ಕೌತುಕವನ್ನೂ ಮೂಡಿಸಲಾಗಿತ್ತು. ಇದೀಗ ಚಿತ್ರದ ಪ್ರಮುಖ ಪಾತ್ರಧಾರಿ ಅಪರ್ಣ ಬಲ್ಲಾಳ್ ಅಂದರೆ ಪನ್ನಾ ಪಾತ್ರದ ಪರಿಚಯ ಮಾಡಿಕೊಟ್ಟಿದೆ ಸಿನಿಮಾತಂಡ.
ವಿಡಿಯೋ ಟ್ವೀಟ್ ಮಾಡಿರುವ ಅನೂಪ್ ಭಂಡಾರಿ ಪನ್ನಾ ಪಾತ್ರದ ಪರಿಚಯವನ್ನು ಮಾಡಿಕೊಟ್ಟಿದ್ದಾರೆ.ಈ ಸಿನಿಮಾದ ತುಂಬಾ ಸುಂದರವಾದ ಪಾತ್ರ ಅಪರ್ಣ ಬಲ್ಲಾಳ್ ಅಂದರೆ ಪನ್ನಾ, ಈ ಪಾತ್ರವನ್ನು ನಿರ್ವಹಿಸುತ್ತಿರುವುದು ನೀತಾ ಅಶೋಕ್. ಚಿತ್ರದಲ್ಲಿ ನಿರೂಪ್ ಭಂಡಾರಿ ಅವರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ.
Presenting #AparnaBallal aka #Panna, played by @neethaofficial
Welcome Neetha to,,#TheWorldofPhantom#PhantomWelcomesNeetha #NeethaAshokAsPanna pic.twitter.com/Ex9eIXMAz4— Kichcha Sudeepa (@KicchaSudeep) August 20, 2020
ಪನ್ನಾ ಮುಂಬೈನಲ್ಲಿ ಹುಟ್ಟಿ ಬೆಳೆದ ಹುಡುಗಿ. ಹಾಗಾಗಿ ಹಿಂದಿ ಮಿಶ್ರಿತ ಕನ್ನಡ ಮಾತನಾಡುತ್ತಾರೆ. ಪನ್ನಾ ಸಾಹಸಿಯಾಗಿದ್ದು ಎಲ್ಲವನ್ನು ತಿಳಿದುಕೊಳ್ಳುವ ಕುತುಹೂಲ ಹೊಂದಿರುವ ಯುವತಿ. ಫ್ಯಾಂಟಮ್ ಚಿತ್ರದಲ್ಲಿ ಅಪರ್ಣಾ ಬಲ್ಲಾಳ್ ಬಹು ಪ್ರಮುಖ ಪಾತ್ರ. ನೀತಾ ಅಶೋಕ್ ಈ ಪಾತ್ರದಲ್ಲಿ ನಟಿಸುತ್ತಿದ್ದು, ಮೊದಲ ಬಾರಿಗೆ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Presenting @neethaofficial as #AparnaBallal Aka #Panna
Welcome Neetha to#TheWorldofPhantom#PhantomWelcomesNeetha #NeethaAshokAsPanna pic.twitter.com/e7rqA51Skr— Kichcha Sudeepa (@KicchaSudeep) August 20, 2020
ಯಾರು ಈ ನೀತಾ ಅಶೋಕ್?
ನೀತಾ ಅಶೋಕ್ ಕಿರುತೆರೆಯ ನಟಿ. ಕಿರುತೆರೆಯಲ್ಲಿ ಯಶೋಧೆ, ನಾ ನಿನ್ನ ಬಿಡಲಾರೆ ಮತ್ತು ನೀಲಾಂಬರಿ ಧಾರಾವಾಹಿ ಮೂಲಕ ಕನ್ನಡ ಪ್ರೇಕ್ಷಕರ ಮನೆ ಮಾತಾಗಿರುವ ನೀತಾ ಅಶೋಕ್ ಫ್ಯಾಂಟಮ್ ಮೂಲಕ ಮೊದಲ ಬಾರಿಗೆ ಬೆಳ್ಳಿ ಪರಧೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.. ಮೊದಲ ಪ್ರಯತ್ನದಲ್ಲೇ ಇಷ್ಟು ದೊಡ್ಡ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿರುವುದು ಅವರ ಹೆಚ್ಚುಗಾರಿಕೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
