fbpx
ಸಮಾಚಾರ

ಸೆಪ್ಟೆಂಬರ್ 09: ನಾಳೆಯ ಪಂಚಾಂಗ ಮತ್ತು ರಾಶಿ ಭವಿಷ್ಯ

ಸ್ಥಳ- ಕರ್ನಾಟಕ
ಸೆಪ್ಟೆಂಬರ್ 9, 2020 ಬುಧವಾರ
ವರ್ಷ : 1942 ಶಾರ್ವರಿ
ತಿಂಗಳು : ಭಾದ್ರಪದ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಸಪ್ತಮೀ 2:05 am
ನಕ್ಷತ್ರ : ಕೃತಿಕೆ 11:15 am
ಯೋಗ : ಹರ್ಷನ 6:17 pm
ಕರಣ : ವಿಷ್ಟಿ 1:07 pm ಬಾವ 2:05 am

Time to be Avoided
ರಾಹುಕಾಲ : 12:16 pm – 1:47 pm
ಯಮಗಂಡ : 7:43 am – 9:14 am
ದುರ್ಮುಹುರ್ತ : 11:52 am – 12:41 pm
ವಿಷ : 4:51 am – 6:37 am
ಗುಳಿಕ : 10:45 am – 12:16 pm

Good Time to be Used
ಅಮೃತಕಾಲ : 8:34 am – 10:22 am

Other Data
ಸೂರ್ಯೋದಯ : 6:08 am
ಸುರ್ಯಾಸ್ತಮಯ : 6:24 pm
ರವಿರಾಶಿ : ಸಿಂಹ
ಚಂದ್ರರಾಶಿ : ವೃಷಭ

 

 

ಎಷ್ಟೇ ಕೂಗಾಡಿದರೂ ಕೋಪ ಅನರ್ಥಕ್ಕೆ ಕಾರಣವಾಗುವುದೇ ಹೊರತು ಅದರಿಂದ ಯಾವ ಕೆಲಸ ಕಾರ್ಯವೂ ಕೈಗೂಡುವುದಿಲ್ಲ. ಕುಟುಂಬ ಸದಸ್ಯರ ಭಾವನೆಗಳಿಗೂ ಬೆಲೆ ಕೊಡಿ ಮತ್ತು ತಾಳ್ಮೆಯಿಂದ ಇರಿ.

 

ಪ್ರತಿಯೊಂದರಲ್ಲೂ ಯಶಸ್ಸು ಕಾಣಲು ಪರಿತಪಿಸುವ ನೀವು ಅದಕ್ಕಾಗಿ ಪಡುವ ಶ್ರಮ ಸಾಕಷ್ಟು ಇದೆ. ಆದರೆ ನೀವು ಅನುಸರಿಸುವ ರೀತಿಗಳು ಸರಿಯಾದ ಕ್ರಮದಲ್ಲಿವೆಯೆ ಎಂದು ಮೊದಲು ಪರಿಶೀಲಿಸಿ. ಏಕೆಂದರೆ ಎಷ್ಟೇ ಕಷ್ಟಪಟ್ಟರೂ ನಿಮಗೆ ಸಿಗುವ ಅಥವಾ ಸಿಗಲಿರುವ ಫಲ ಶೇಕಡಾ 50 ರಿಂದ 60 ಮಾತ್ರ. ಹಲವು ಬಾರಿ ಯೋಚಿಸಿ ಹೊಸ ಯೋಜನೆಗಳನ್ನು ಆರಂಭಿಸಿ.

 

ಎಂತಹ ತುರ್ತು ಕೆಲಸಗಳನ್ನು ಕೂಡಾ ಅವಸರ ಮಾಡದೆ ಸಂಯಮದಿಂದ ನಿರ್ವಹಿಸಿ. ಸಂಸಾರದಲ್ಲಿ ಮೂಡಿದ್ದ ಅನುಮಾನಗಳು ದೂರವಾಗಿ ಸಂತಸ ಮೂಡುವುದು.

 

ಸಂಬಂಧಪಡದ ವಿಷಯಗಳಿಂದಾಗಿ ಕಲಹವಾಗುವ ಸಾಧ್ಯತೆ ಇದೆ. ಪ್ರಯಾಣದಲ್ಲಿ ತುಸು ಎಚ್ಚರಿಕೆಯಿರಲಿ. ಬಂಧು ಮಿತ್ರರೊಂದಿಗೆ ಆಡುವ ನಿಷ್ಠುರದ ಮಾತುಗಳು ಮತ್ತು ನಿಂದನೆಗಳು ಮುಂದೆ ನಿಮಗೇ ಕೆಟ್ಟ ಹೆಸರು ತರುತ್ತವೆ. ಈ ವಿಷಯದಲ್ಲಿ ಜಾಗರೂಕತೆಯಿಂದ ವರ್ತಿಸಿ.

 

 

ಹಲವು ವಿಷಯಗಳಲ್ಲಿ ನಿಮಗೆ ಗೊಂದಲ ಉಂಟಾಗುವುದು. ಈ ವಿಷಯಗಳ ಬಗ್ಗೆ ಖಚಿತ ನಿಲುವು ತಾಳುವುದು ಒಳ್ಳೆಯದು. ಹಣದ ಹರಿವು ನೀವು ಬಯಸಿದಂತೆ ಇರುವುದು.

 

 

ಮನುಷ್ಯನಿಗೆ ಆತ್ಮವಿಶ್ವಾಸ ಅತಿ ಮುಖ್ಯ. ಆದರೆ ಅತಿ ಆತ್ಮವಿಶ್ವಾಸ ಕಾರ್ಯಹಾನಿಗೆ ಕಾರಣವಾದೀತು. ಹಾಗೆಂದ ಮಾತ್ರಕ್ಕೆ ಧೃತಿಗೆಡುವ ಅಗತ್ಯವಿಲ್ಲ.ಹಣಕಾಸಿನ ವಿಷಯದಲ್ಲಿ ತೊಂದರೆ ಇಲ್ಲ. ಹಣ ಉಳಿತಾಯದ ಕಡೆ ಗಮನ ಹರಿಸಿ.

 

 

 

ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ಮುಂದೆ ಸಾಗುವವು. ನಿಮ್ಮ ಶ್ರಮ ಹಾಗೂ ನಿಷ್ಠೆಯ ಫಲವಾಗಿ ಉತ್ತಮ ಆದಾಯ ಹೊಂದುವಿರಿ. ಖರ್ಚಿನ ಮೇಲೆ ನಿಗಾ ಇಡುವುದು ಒಳ್ಳೆಯದು

 

 

ಹಲವು ದಿನಗಳಿಂದ ಒಂದು ಸ್ಪಷ್ಟ ಸ್ವರೂಪ ಕೊಡಲು ಸಾಧ್ಯವಾಗದ ಸಂಗತಿಗೆ ನಿಶ್ಚಿತ ರೂಪ ದೊರೆಯಲಿದೆ. ಇದರಿಂದ ಆರ್ಥಿಕ ಸಂಕಷ್ಟ ಕಡಿಮೆ ಆಗಲಿದೆ. ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಲಿದೆ.

ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಎಂಬಂತೆ ನೀವು ಆಡುವ ಮಾತು ನಿಮ್ಮ ಹತ್ತಿರದ ವೃಕ್ತಿಗೆ ಘಾಸಿಯನ್ನುಂಟು ಮಾಡುವುದು. ಇದರಿಂದ ಅವರು ಕುಪಿತರಾಗಿ ನಿಮ್ಮ ಮೇಲೆ ಜಗಳಕ್ಕೆ ಬರುವ ಸಾಧ್ಯತೆ ಇದೆ. ಆದಷ್ಟು ತಾಳ್ಮೆಯಿಂದ ಇರಿ.

 

 

ನಿಮ್ಮ ವಿಚಾರದಲ್ಲಿ ಸ್ವಜನರು ತಿಳಿದುಕೊಂಡ ತಪ್ಪು ಗ್ರಹಿಕೆಗಳು ದೂರವಾಗಲು ಶುಭ ದಿನವಾಗಿದೆ. ಹಾಗಾಗಿ ನಿಮ್ಮ ಮನಸ್ಸು ಹಕ್ಕಿಯಂತೆ ಹಾರಾಡುವುದು. ನೂತನ ಕೆಲಸ ಮಾಡಲು ಹೊಸ ಉತ್ಸಾಹ ಮೂಡುವುದು.

 

ಯಾರೇ ನಿಮ್ಮ ನಿಲುವನ್ನು ಟೀಕಿಸಲಿ ನಿಮ್ಮ ನಿಲುವು ತರ್ಕಪೂರ್ಣವಾಗಿದ್ದಲ್ಲಿ ಹೆಜ್ಜೆಯನ್ನು ಹಿಂದೆ ಇಡಲೇ ಬೇಡಿ. ಸಾಹಸವಂತನಿಗೆ ಭಗವಂತ ಸಹಾಯಹಸ್ತ ನೀಡುವರು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು.

 

ಏನೋ ಆತಂಕ ಎದುರಾಗಲಿದೆ ಎಂದು ವಿಚಲಿತರಾಗುವ ಸಾಧ್ಯತೆ ಇದ್ದು ಎಲ್ಲವೂ ದೈವಕೃಪೆಯಿಂದ ಪರಿಹಾರವಾಗಲಿದೆ. ಹಾಸಿಗೆ ಇದ್ದಷ್ಟು ಕಾಲು ಚಾಚುವುದನ್ನು ಅಭ್ಯಾಸ ಮಾಡಿಕೊಳ್ಳಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top