fbpx
ಸಮಾಚಾರ

ಪಂದ್ಯದ ವೇಳೆ ಇ-ಸಿಗರೇಟ್‌ ಸೇದಿ ಸಿಕ್ಕಿಬಿದ್ದ ಫಿಂಚ್: ವಿಡಿಯೋ ವೈರಲ್

ಶನಿವಾರ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್​ನ 33ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ 7 ವಿಕೆಟ್​ಗಳ ಗೆಲುವು ದಾಖಲಿಸಿತು. ಎಬಿ ಡಿವಿಲಿಯರ್ಸ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೊಹ್ಲಿ ಪಡೆ ಟೂರ್ನಿಯಲ್ಲಿ 6ನೇ ಜಯ ಸಾಧಿಸಿತು.

 

 

ಪಂದ್ಯದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರ ಆರೋನ್ ಪಿಂಚ್ ಇ-ಸಿಗರೇಟ್ ಸೇದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಕೂಡ ಆಗಿರುವ ಆರೊನ್‌ ಫಿಂಚ್‌ ಅವರಿಗೆ ತಂಬಾಕು ಸೇವನೆಯ ಚಟ ಇದೆ ಎಂಬ ಸಂಗತಿ ಈ ಮೂಲಕ ಬಹಿರಂಗವಾಗಿದೆ. ಡ್ರೆಸಿಂಗ್‌ ರೂಮ್‌ನಲ್ಲೇ ಫಿಂಚ್‌ ಸಿಗರೇಟ್‌ ಸೇದಿ ಹೊಗೆ ಬಿಡುತ್ತಾ ನಿಂತ್ತಿರುವುದು ಲೈವ್‌ ಟೆಲಿಕಾಸ್ಟ್ ಆಗಿದೆ.

 

 

ಇದನ್ನು ಕಂಡ ಕೂಡಲೇ ಸೋಷಿಯಲ್‌ ಮೀಡಿಯಾಗಳಲ್ಲಿ ಚುರುಕಾದ ನೆಟ್ಟಿಗರು ಡ್ರೆಸಿಂಗ್‌ ರೂಮ್‌ನಲ್ಲಿ ಸಿಗರೇಟ್‌ ಸೇದಲು ಅನುಮತಿ ಇದೆಯೇ. ಐಪಿಎಲ್‌ ನಿಯಮಗಳು ಇಷ್ಟು ಸಡಿಲವೇ? ಎಂದೆಲ್ಲಾ ಪ್ರಶ್ನೆ ಮಾಡಿದ್ದಾರೆ. ಮತ್ತೂ ಕೆಲವರು ಆಟಗಾರರು ಐಪಿಎಲಗ್ ಟೂರ್ನಿ ವೇಳೆ ಡ್ರೆಸಿಂಗ್‌ ರೂಮ್‌ನಲ್ಲಿ ಏನೆಲ್ಲಾ ಮಾಡುತ್ತಾರೆ ಎಂಬುದಕ್ಕೆ ಇದು ಉದಾಹರಣೆ ಎಂದೆಲ್ಲಾ ಟ್ವೀಟ್‌ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top