fbpx
ಸಮಾಚಾರ

ಶೂಟಿಂಗ್ ವೇಳೆ ಎದೆನೋವು, ಕನ್ನಡದ ಖ್ಯಾತ ಪೋಷಕ ನಟ ಕೃಷ್ಣ ನಾಡಿಗ್ ವಿಧಿವಶ

ಕನ್ನಡ ಧಾರಾವಾಹಿ ಮತ್ತು ಚಿತ್ರರಂಗದ ಹಿರಿಯ ನಟ ಕೃಷ್ಣಮೂರ್ತಿ ನಾಡಿಗ್ ಶನಿವಾರ ರಾತ್ರಿ ನಿಧನರಾಗಿದ್ದಾರೆ. 5 ದಶಕಗಳಿಗೂ ಹೆಚ್ಚು ಕಾಲ ನಟನಾ ರಂಗದಲ್ಲಿ ತೊಡಗಿಸಿಕೊಂಡಿದ್ದ ಕೃಷ್ಣಮೂರ್ತಿ ನಾಡಿಗ್ ಲೇಖಕರಾಗಿಯೂ ಗುರುತಿಸಿಕೊಂಡಿದ್ದರು.

ನಿನ್ನೆ ಸಂಜೆ ಧಾರಾವಾಹಿಯ ಚಿತ್ರೀಕರಣ ನಡೆಯುತ್ತಿರುವಾಗಲೇ ಕೃಷ್ಣಮೂರ್ತಿ ನಾಡಿಗ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ.

ಅವರಿಗೆ ಪತ್ನಿ ಮತ್ತು ಮೂವರು ಪುತ್ರಿಯರು ಇದ್ದಾರೆ. ಶ್ರೀನಗರದಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದರು. ಇಬ್ಬರೂ ಪುತ್ರಿಯರು ಅಮೆರಿಕದಲ್ಲಿ ನೆಲೆಸಿದ್ದಾರೆ. ಚಾಮರಾಜಪೇಟೆಯ ಚಿತಾಗಾರದಲ್ಲಿ ನಾಡಿಗ್ ಅವರ ಅಂತ್ಯಕ್ರಿಯೆ ನಡೆದಿದೆ.

ಸುಮಾರು 50 ವರ್ಷಗಳಷ್ಟು ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಅವರ 60 ಕ್ಕೂ ಹೆಚ್ಚು ಚಿತ್ರಗಳಿಗೆ ಸಂಭಾಷಣೆ, ಚಿತ್ರಕತೆ ಬರೆದು ನಿರ್ಮಾಣ ನಿರ್ವಹಿಸಿ ಖಾಸಗಿ ಸುದ್ದಿ ವಾಹಿನಿಯಲ್ಲಿ ಕರ್ನಾಟಕದ ಸಾಂಸ್ಕೃತಿಕ ಜಗತ್ತನ್ನು ಪರಿಚಯಿಸುತ್ತಿದ್ದರು. ಜೊತಗೆ ಕನ್ನಡದ ಹಲವು ಧಾರವಾಹಿಗಳಲ್ಲಿ ಕೃಷ್ಣಮೂರ್ತಿ ನಾಡಿಗ ನಟಿಸಿದ್ದರು.

‘ಮಿಲನ’, ‘ದೇವಿ’, ‘ಪಾರು’, ‘ಲಗ್ನಪತ್ರಿಕೆ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿ, ಮನೆಮಾತಾಗಿದ್ದರು. ‘ಮಾಂಗಲ್ಯಂ ತಂತುನಾನೇನಾ’ ಹಾಗೂ ‘ಆದಿಲಕ್ಷ್ಮಿಪುರಾಣ’ ಹಾಗೂ ಟಿ.ಎನ್‌. ಸೀತಾರಾಮ್‌ ನಿರ್ದೇಶನದ ‘ಕಾಫಿ ತೋಟ’ ಚಿತ್ರದಲ್ಲೂ ಕೃಷ್ಣಮೂರ್ತಿ ನಾಡಿಗ್‌ ನಟಿಸಿದ್ದರು. ವಿಜಯ್‌ ಭಾರದ್ವಾಜ್‌ ನಿರ್ದೇಶನದ ‘ತೆರೆಯೊ ಬಾಗಿಲನು’ ಕಿರುಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top