fbpx
ಸಮಾಚಾರ

ಮದ್ವೆಯಾಗೋದಾಗಿ ನಂಬಿಸಿ ದೈಹಿಕ ಸಂಪರ್ಕ, ದಬ್ಬಾಳಿಕೆ: ಮಿಥುನ್ ಚಕ್ರವರ್ತಿ ಪುತ್ರನ ವಿರುದ್ಧ ರೇ’ಪ್ ಕೇಸ್ ದಾಖಲು

ನಟಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಪ್ರಕರಣ ಸಂಬಂಧ ಹಿರಿಯ ನಟ ಮಿಥುನ್‌ ಚಕ್ರವರ್ತಿ ಅವರ ಪುತ್ರ ಮಹಾಕ್ಷಯ್‌ ವಿರುದ್ಧ ಮುಂಬೈನಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಮಿಥುನ್‌ ಚಕ್ರವರ್ತಿಯ ಪುತ್ರ ಮಹಾಕ್ಷಯ್‌ನಿಂದ ತನಗೆ ದೌರ್ಜನ್ಯ ಆಗಿದೆ ಎಂದು ಯುವತಿ ದೂರು ನೀಡಿದ್ದಾರೆ. ‘2015ರಿಂದಲೂ ನಾನು ಮತ್ತು ಮಹಾಕ್ಷಯ್‌ ರಿಲೇಷನ್‌ಶಿಪ್‌ನಲ್ಲಿ ಇದ್ದೆವು. ಒಮ್ಮೆ ಆತ ಸಾಫ್ಟ್‌ ಡ್ರಿಂಕ್ಸ್‌ನಲ್ಲಿ ಡ್ರಗ್ಸ್‌ ಬೆರೆಸಿ, ನನ್ನ ಅನುಮತಿ ಇಲ್ಲದೆಯೇ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದಾರೆ’ ಎಂದು ಆ ಯುವತಿ ಆರೋಪಿಸಿದ್ದಾರೆ. ಈ ವಿಚಾರ ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿ ಮಾಡಿದೆ.

“2015ರಿಂದ ಮಹಾಅಕ್ಷಯ್ ಜೊತೆ ರಿಲೇಶನ್ ಶಿಪ್ ನಲ್ಲಿದ್ದು, ಮದುವೆಯಾಗೋದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದನು. 2015ರಲ್ಲಿ ಮಹಾಅಕ್ಷಯ್ ತನ್ನನ್ನು ಮನೆಗೆ ಕರೆಸಿಕೊಂಡು ತಂಪು ಪಾನೀಯದಲ್ಲಿ ನಶೆ ಪದಾರ್ಥ ಮಿಕ್ಸ್ ಮಾಡಿದ್ದನು. ನಾನು ಜ್ಞಾನ ತಪ್ಪಿದಾಗ ಅತ್ಯಾಚಾರ ಎಸಗಿದ್ದನು. ಆದಾದ ಬಳಿಕ ಮದುವೆ ಆಗೋದಾಗಿ ಮಾತು ಸಹ ನೀಡಿದ್ದನು.”

“ಗರ್ಭಿಣಿಯಾದ ವಿಷಯ ತಿಳಿಯುತ್ತಲೇ ಗರ್ಭಪಾತಕ್ಕೆ ಒತ್ತಾಯಿಸಿದನು. ಗರ್ಭಪಾತಕ್ಕೆ ಒಪ್ಪದಿದ್ದಾಗ ಮೋಸದಿಂದ ಮಾತ್ರೆ ನೀಡಿ ಅಬಾರ್ಷನ್ ಮಾಡಿಸಿದನು. ಗರ್ಭಿಣಿಯಾಗಿದ್ದ ವೇಳೆ ಮಹಾಅಕ್ಷಯ್ ನೀಡುತ್ತಿದ್ದ ಮಾತ್ರೆಗಳು ಗರ್ಭಪಾತಕ್ಕೆ ಎಂದು ಸಂತ್ರಸ್ತೆಗೆ ತಿಳಿದಿರಲಿಲ್ಲ. ” ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಸಂತ್ರಸ್ತೆಗೆ ನಟ ಮಿಥುನ್ ಚಕ್ರವರ್ತಿ ಅವರ ಪತ್ನಿ ಬೆದರಿಕೆ ಹಾಕಿದ್ದು, ಪ್ರಕರಣವನ್ನು ವಜಾಗೊಳಿಸುವಂತೆ ಎಚ್ಚರಿಸಿದ್ದಾರೆ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top