fbpx
ಸಮಾಚಾರ

“ರಾಗಿಣಿ, ಸಂಜನಾಗೆ ಬೇಲ್ ಸಿಗದಿದ್ರೆ ಕಮಿಷನರ್ ಕಚೇರಿ ಬ್ಲಾಸ್ಟ್ ” ನ್ಯಾಯಾಧೀಶರಿಗೇ ಬಾಂಬ್‌ ಬೆದರಿಕೆ ಪತ್ರ!

ಡ್ರಗ್ಸ್ ಪ್ರಕರಣದಲ್ಲಿ ಬಂಧನದಲ್ಲಿರುವ ನಟಿ ರಾಗಿಣಿ ದ್ವಿವೇದಿ ಜಾಮೀನು ಸಿಗದಿದ್ರೆ ಕಮಿಷನರ್ ಕಚೇರಿ ಮತ್ತು ಸಿಟಿ ಸಿವಿಲ್ ಕೋರ್ಟಿಗೆ ಬೆದರಿಕೆ ಪತ್ರ ಬಂದಿದೆ. ಪತ್ರದ ಜೊತೆಗೆ ಕಮೀಷನರ್ ಕಚೇರಿಗೆ ಬಂಡೆ ಒಡೆಯುವ ಸ್ಫೋಟಕ ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಸಿಟಿ ಸಿವಿಲ್ ಸೆಷನ್‌ ಕೋರ್ಟ್‌ನ ಜಡ್ಜ್‌ಗೆ ಈ ಪತ್ರ ಬರೆಯಲಾಗಿದೆ. ‘ಸಂಜನಾ ರಾಗಿಣಿ ಸೇರಿದಂತೆ ಡ್ರಗ್ಸ್‌ ಕೇಸ್‌ನಲ್ಲಿ ಭಾಗಿ ಆಗಿರುವ ಎಲ್ಲರಿಗೂ ಜಾಮೀನು ನೀಡಬೇಕು. ಕೇಸ್‌ನಲ್ಲಿ ಇರುವ ಎಲ್ಲರನ್ನೂ ವಜಾ ಮಾಡಬೇಕು’ ಎಂದು ಪತ್ರದಲ್ಲಿ ಹೇಳಲಾಗಿದೆ. ಒಂದು ವೇಳೆ ಹಾಗೆ ಮಾಡದಿದ್ದರೆ ಕಾರಿನಲ್ಲಿ ಬಾಂಬ್‌ ಇಡುತ್ತೇವೆ ಎಂಬುದಾಗಿಯೂ ಬೆದರಿಕೆ ಹಾಕಲಾಗಿದೆ.

ನ್ಯಾಯಾಧೀಶ ಜಿ ಎಂ ಶೀನಪ್ಪ ಅವರ ವಿಳಾಸಕ್ಕೆ ಅಂಚೆ ಮೂಲಕ ಪತ್ರ ಬಂದಿದ್ದು, ಅದನ್ನು ಅವರು ತೆರೆದು ನೋಡಿದಾಗ, ಸಣ್ಣ ಡಿಟೊನೇಟರ್ ರೀತಿಯ ವಸ್ತುವಿನೊಂದಿಗೆ ಬೆದರಿಕೆ ಪತ್ರವನ್ನು ಕೂಡ ಬರೆಯಲಾಗಿತ್ತು. ಕೂಡಲೇ ನ್ಯಾಯಮೂರ್ತಿಗಳು ತಮ್ಮ ಸಿಬ್ಬಂದಿಗೆ ಹೇಳಿ ಪೊಲೀಸರಿಗೆ ಕರೆ ಮಾಡುವಂತೆ ಸೂಚಿಸಿದರು. ತಕ್ಷಣವೇ ಪೊಲೀಸ್ ಶ್ವಾನ ಮತ್ತು ಬಾಂಬ್ ಪತ್ತೆ ದಳ ಬಂದು ಶೋಧ ನಡೆಸಿತು. ಪೊಲೀಸರು ವಸ್ತುವನ್ನು ಪರಿಶೀಲಿಸಿದ್ದಾರೆ.

ಸ್ಫೋಟಕಗಳನ್ನು ಬಳಸಿ ನ್ಯಾಯಾಧೀಶರ ಕಾರನ್ನು ಸ್ಫೋಟಿಸಿ ಬೇಡಿಕೆ ಈಡೇರಿಸದಿದ್ದರೆ ಕೊಲ್ಲುವುದಾಗಿ ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ. ಪೊಲೀಸ್ ಆಯುಕ್ತ ಕಮಲ್ ಪಂತ್ ಮತ್ತು ಇತರ ಹಿರಿಯ ಅಧಿಕಾರಿಗಳು ಇದೇ ರೀತಿಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಮಲ್ ಪಂತ್ ಮತ್ತು ಇತರ ಹಿರಿಯ ಅಧಿಕಾರಿಗಳಿಗೆ ಇದೇ ರೀತಿಯ ಪತ್ರಗಳನ್ನು ಕಳುಹಿಸಲಾಗಿದೆ ಎಂದು ಹೇಳಲಾಗಿದ್ದರೂ ಪೊಲೀಸರು ಇದನ್ನು ಖಚಿತಪಡಿಸಿಲ್ಲ. “ನಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಮತ್ತು ಇದರ ಹಿಂದೆ ಯಾರು ಇದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು. ಶೀಘ್ರದಲ್ಲೇ ದುಷ್ಕರ್ಮಿಯನ್ನು ಹಿಡಿಯಲು ನಾವು ವಿಶೇಷ ತಂಡಗಳನ್ನು ರಚಿಸಿದ್ದೇವೆ ಎಂದು ಸಿಸಿಬಿಯ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top