fbpx
ಸಮಾಚಾರ

ಚಿರು-ಮೇಘನಾ ಮಗುವಿಗಾಗಿ ಮನೆಗೆ ಬಂತು ಬೆಳ್ಳಿ ತೊಟ್ಟಿಲು, ಚಿನ್ನದ ಬಟ್ಟಲು

ಚಿರಂಜೀವಿ ಸರ್ಜಾ ಮತ್ತು ಮೇಘನಾ ಮಗುವಿನ ಆಗಮನಕ್ಕೆ ಸರ್ಜಾ ಕುಟುಂಬ ಮಾತ್ರವಲ್ಲದೆ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಮೇಘನಾಗೆ ಹೆರಿಗೆಯಾಗಲಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಮದ್ಯೆ ಅದಾಗಲೇ ಚಿರು-ಮೇಘನಾ ಕಂದನಿಗಾಗಿ ಬೆಳ್ಳಿ ತೊಟ್ಟಿಲು ಮನೆಗೆ ಬಂದಿದೆ.

 

 

ಮನೆಗೆ ಮುದ್ದಾದ ಮಗು ಬರುವ ಮುನ್ನವೇ ಧ್ರುವ ಸರ್ಜಾ ಅವರು ಬೆಳ್ಳಿ ತೊಟ್ಟಿಲು ಖರೀದಿಸಿದ್ದಾರೆ. ಪ್ರೀತಿಯ ಅಣ್ಣನ ಮಗುವಿಗೆ ಭರ್ಜರಿ ಸ್ವಾಗತ ಕೋರಲು ಮುಂದಾಗಿರುವ ಧ್ರುವ ಸರ್ಜಾ, ಸುಮಾರು 10 ಲಕ್ಷ ರೂ. ಮೌಲ್ಯದ ಬೆಳ್ಳಿ ತೊಟ್ಟಲು ಖರೀದಿ ಮಾಡಿದ್ದಾರೆ. ನವರತ್ನ ಜ್ಯೂವೆಲರ್ಸ್ ನಲ್ಲಿ ಬೆಳ್ಳಿ ತೊಟ್ಟಿಲು ಖರೀದಿ ಮಾಡಲಾಗಿದ್ದು, ತೊಟ್ಟಿಲು ಜೊತೆಗೆ ಚಿನ್ನದ ಬಟ್ಟಲನ್ನು ಖರೀದಿ ಮಾಡಲಾಗಿದೆ.

ಇತ್ತೀಚೆಗೆಷ್ಟೇ ಮೇಘನಾ ಅವರಿಗೆ ಸೀಮಂತ ಸಮಾರಂಭ ನೆರವಿಸಿದ್ದ ಸರ್ಜಾ ಫ್ಯಾಮಿಲಿ ಅಕಾಲಿಕವಾಗಿ ಕಣ್ಮರೆಯಾಗಿದ್ದ ಕನ್ನಡ ಯುವ ನಟ ಚಿರಂಜೀವಿ ಸರ್ಜಾ ಅವರು ಅಗಲಿಕೆಯ ನೋವಿನಿಂದ ಹೊರ ಬರುವ ಪ್ರಯತ್ನದಲ್ಲಿದೆ. ಇದೇ ವೇಳೆ ಆ ನೋವನ್ನು ಮರೆಸಲು ಜೂನಿಯರ್ ಚಿರುಗೆ ಸ್ವಾಗತವನ್ನು ಕೋರಲು ಸಿದ್ಧರಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top