fbpx
ಸಮಾಚಾರ

ಆಸ್ಪತ್ರೆಗೆ ತೆರಳಿದ ತುಂಬು ಗರ್ಭಿಣಿ ಮೇಘನಾ ರಾಜ್​: ಜೂನಿಯರ್​ ಚಿರು ನಿರೀಕ್ಷೆಯಲ್ಲಿ ಸರ್ಜಾ ಕುಟುಂಬ

ನಟ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್‌ ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಇಡೀ ಸರ್ಜಾ ಕುಟುಂಬ ಅವರ ಜೊತೆಗಿದ್ದು ಕಾಳಜಿ ವಹಿಸುತ್ತಿದೆ. ಮಂಗಳವಾರ (ಅ.20) ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಮೇಘನಾ ತೆರಳಿದ್ದಾರೆ. ಸದ್ಯದಲ್ಲೇ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ.

ತುಂಬು ಗರ್ಭಿಣಿಯಾಗಿರುವ ಮೇಘನಾ ರಾಜ್​ ಇಂದು ಬೆಳಗ್ಗೆ ಕೆ.ಆರ್​ ಆಸ್ಪತ್ರೆಯಲ್ಲಿರುವ ಅಕ್ಷ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ವೈದ್ಯರು ಡೆಲಿವರಿ ಡೇಟ್​ ಕೊಟ್ಟಿದ್ದು, ಡೇಟ್​ ಆಗಿರುವ ಹಿನ್ನೆಲೆ ಆಸ್ಪತ್ರೆಗೆ ಭೇಟಿ ಕೊಟ್ಟಿರೋದಾಗಿ ತಿಳಿದು ಬಂದಿದೆ. ಇದೇ ಅಕ್ಷ ಆಸ್ಪತ್ರೆಯಲ್ಲಿ ಮೇಘನ ರಾಜ್​ ಸರ್ಜಾ ಗರ್ಭಿಣಿ ಆದ ದಿನದಿಂದಲೂ ಚಿಕಿತ್ಸೆ ಪಡೆಯುತ್ತಿದ್ದಾರೆ

ಸಮಯ ನಿಗದಿ ಮಾಡಿಕೊಂಡು ಆಸ್ಪತ್ರೆಗೆ ಬರಲು ಸಿದ್ದತೆ ಮಾಡಿಕೊಳ್ತಿರೋ ಕುಟುಬಂಸ್ಥರು ಇನ್ನೆರಡು ದಿನಗಳಲ್ಲಿ ಡೆಲಿವರಿ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆಸ್ಪತ್ರೆ ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದು, ಮೇಘನಾಗೆ ಚಿಕಿತ್ಸೆ ಡಾ ಮಾಧುರಿ ಸುಮಂತ್ ಚಿಕಿತ್ಸೆ ನೀಡುತ್ತಿದ್ದು ಇನ್ನೆರಡು ದಿನದಲ್ಲಿ ಡೆಲಿವರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top