fbpx
ಸಮಾಚಾರ

ಮುರುಳಿಧರನ್ ಬಯೋಫಿಕ್ ನಿಂದ ಹೊರಬಂದ ವಿಜಯ್ ಸೇತುಪತಿ ಮಗಳಿಗೆ ಅ*ತ್ಯಾ*ಚಾರ ಬೆದರಿಕೆ

ನಟ ವಿಜಯ್ ಸೇತುಪತಿ ಕಳೆದ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಅವರು ನಟಿಸಬೇಕು ಎಂದುಕೊಂಡಿದ್ದ ‘800’ ಸಿನಿಮಾ ಕೂಡ ವಿವಾದಕ್ಕೆ ಗುರಿ ಆಯಿತು. ತಮಿಳರ ಭಾವನೆಗಳಿಗೆ ಧಕ್ಕೆ ಉಂಟುಮಾಡಬಾರದು ಎಂಬ ಕಾರಣಕ್ಕೆ ಆ ಚಿತ್ರದಿಂದ ವಿಜಯ್‌ ಸೇತಿಪತಿ ಹೊರನಡೆದರು. ಆದರೂ ಕೆಲವು ಕಿಡಿಗೇಡಿಗಳು ಅವರನ್ನು ಟಾರ್ಗೆಟ್‌ ಮಾಡುವುದು ನಿಲ್ಲಿಸಿಲ್ಲ. ಈಗ ಅವರ ಪುತ್ರಿಗೆ ಅತ್ಯಾಚಾರದ ಬೆದರಿಕೆ ಹಾಕಲಾಗಿದೆ!

ವಿಜಯ್ ಸೇತುಪತಿ 800 ಸಿನಿಮಾದಿಂದ ಹೊರಬರುವುದಾಗಿ ಮಾಡಿದ್ದ ಟ್ವೀಟ್ ಗೆ ಕಿರಾತಕನೊಬ್ಬ ಮಗಳ ಮೇಲೆ ಅತ್ಯಾಚಾರವೆಸಗುವುದಾಗಿ ಅಸಹ್ಯಕರ ಕಾಮೆಂಟ್ ಹಾಕಿದ್ದಾನೆ. ಬೆದರಿಕೆ ಹಾಕಿದ ವ್ಯಕ್ತಿಯ ವಿರುದ್ಧ ವಿಜಯ್ ಸೇತುಪತಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಆತನ ಟ್ವಿಟ್ಟರ್ ಹ್ಯಾಂಡಲ್ ಗೆ ರಿಪೋರ್ಟ್ ಮಾಡಿ ತಕ್ಷಣ ಬಂಧಿಸುವಂತೆ ಆಗ್ರಹಿಸುತ್ತಿದ್ದಾರೆ.

ರಿತಿಕ್ ಹೆಸರಿನ ಟ್ವಿಟ್ಟರ್ ಹ್ಯಾಂಡಲ್ ನಿಂದ ಬೆದರಿಕೆ ಅತ್ಯಾಚಾರ ಬೆದಕರಿಕೆ ಹಾಕಿದ ವ್ಯಕ್ತಿಯ ಟ್ವಿಟ್ಟರ್ ಖಾತೆ ರಿತಿಕ್ ಎನ್ನುವ ಹೆಸರಿನಲ್ಲಿದೆ. ಈ ಟ್ವಿಟ್ಟರ್ ಹ್ಯಾಂಡಲ್ ನಿಂದ ವಿಜಯ್ ಮತ್ತು ಪುಟ್ಟ ಮಗಳ ಫೋಟೋವನ್ನು ಶೇರ್ ಮಾಡಿ ಅತ್ಯಾಚಾರ ನಡೆಸಬೇಕು, ಅವಳ ತಂದೆಗೆ ತಮಿಳರು ಶ್ರೀಲಂಕಾದಲ್ಲಿ ನಡೆಸಿದ ಜೀವನ ಅರ್ಥವಾಗಬೇಕು’ ಎಂದು ಟ್ವೀಟ್ ಮಾಡಿದ್ದಾನೆ.

ಕೆಲ ದಿನಗಳ ಹಿಂದೆಯಷ್ಟೇ ನಟ ವಿಜಯ್ ಸೇತುಪತಿ, ಸ್ಪಿನ್ ದಂತಕಥೆ ಮುತ್ತಯ್ಯ ಮುರಳೀಧರನ್ ಅವರ ಬಯೋಪಿಕ್‍ನಲ್ಲಿ ನಟಿಸುವುದು ಖಚಿತವಾಗಿತ್ತು. ಇದರ ಬೆನ್ನಲ್ಲೇ ಚಿತ್ರತಂಡ ಕೂಡ ಸಿನಿಮಾ ಮೋಷನ್ ಪೋಸ್ಟರ್ ಕೂಡ ಬಿಡುಗಡೆ ಮಾಡಿತ್ತು. ಆದರೆ ಸೋಮವಾರ ಸಿನಿಮಾದಿಂದ ನಟ ವಿಜಯ್ ಸೇತುಪತಿ ಹೊರ ನಡೆದಿದ್ದು, ಮುರಳೀಧರನ್ ಅವರ ಮನವಿಯ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top