fbpx
ಸಮಾಚಾರ

ವಿವಾದದಲ್ಲಿ ಸಿಂಪಲ್ ಸ್ಟಾರ್: ರಕ್ಷಿತ್ ಶೆಟ್ಟಿ ವಿರುದ್ಧ ದೂರು

ಚಿತ್ರರಂಗದಲ್ಲಿ ಟೈಟಲ್​ ವಿವಾದಗಳೇನು ಹೊಸದಲ್ಲ. ಯಾರಾದರೂ ಸಿನಿಮಾ ಘೋಷಣೆ ಮಾಡಿದ ನಂತರದಲ್ಲಿ ಅದು ನಮ್ಮ ಟೈಟಲ್​ ಎಂದು ಕೆಲವರು ಮುಂದೆ ಬಂದಿರುವ ಸಾಕಷ್ಟು ಉದಾಹರಣೆಗಳಿವೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಈ ರೀತಿಯ ಸಾಕಷ್ಟು ಘಟನೆಗಳು ನಡೆದಿವೆ. ಈಗ ರಕ್ಷಿತ್ ಶೆಟ್ಟಿ ನಟನೆಯ ಸಿನಿಮಾದ ಟೈಟಲ್​ ಕೂಡ ವಿವಾದಕ್ಕೀಡಾಗಿದೆ.

 

 

ರಿಚ್ಚಿ ಸಿನಿಮಾ ಟೈಟಲ್ ವಿವಾದದ ವಿಚಾರವಾಗಿ ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಾಗಿದೆ.

ನಿರ್ದೇಶಕ ಹೇಮಂತ್ ಎಂಬುವವರು ದೂರು ನೀಡಿದ್ದು, ರಿಚ್ಚಿ ಎಂಬ ಹೆಸರಿನಲ್ಲಿ ರಕ್ಷಿತ್ ಶೆಟ್ಟಿಗೂ ಮೊದಲೇ ಟೈಟಲ್ ರಿಜಿಸ್ಟರ್ ಮಾಡಿಸಿದ್ದೇವೆ. ಎರಡು ವರ್ಷದ ಮೊದಲೇ ಚಿತ್ರದ ಟೈಟಲ್ ನೋಂದಣಿ ಮಾಡಲಾಗಿದೆ. ಟೈಟಲ್ ರಿನಿವಲ್ ಕೂಡ ಆಗಿದೆ. ಆದರೆ ರಕ್ಷಿತ್ ಶೆಟ್ಟಿ ಕೂಡ ರಿಚ್ಚಿ ಟೈಟಲ್‍ನಲ್ಲಿ ಸಿನಿಮಾ ಮಾಡಲು ಹೊರಟಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ನಾನು​ ಎರಡು ವರ್ಷಗಳ ಹಿಂದೆಯೇ ರಿಚ್ಚಿ ಸಿನಿಮಾ ಕೈಗೆತ್ತಿಕೊಂಡಿದ್ದೆ. ಈಗಾಗಲೇ ಶೇ.70 ಶೂಟಿಂಗ್ ಕೂಡ ಪೂರ್ಣಗೊಂಡಿದೆ. ಹೀಗಿರುವಾಗ ರಕ್ಷಿತ್​ ಸಿನಿಮಾಗೂ ಅದೇ ರೀತಿಯ ಹೆಸರಿಟ್ಟರೆ ಹೇಗೆ ಎನ್ನುವ ಪ್ರಶ್ನೆ ಹೇಮಂತ್​ ಅವರದ್ದು. ಅಲ್ಲದೆ, ಈ ಬಗ್ಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎನ್ನುತ್ತಾರೆ ಹೇಮಂತ್.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top