fbpx
ಸಮಾಚಾರ

“ಭಾರತ ಕಲುಷಿತವಾಗಿದೆ” ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಹವಾಮಾನ ಬದಲಾವಣೆ ವಿಷಯದಲ್ಲಿ ಪದೇ ಪದೇ ಭಾರತ ಹಾಗೂ ಚೀನಾದಂಥ ರಾಷ್ಟ್ರಗಳ ಮೇಲೆ ದೂಷಣೆ ಮಾಡುತ್ತಾ ಬಂದಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಈಗ ಮತ್ತೆ ಇತರೆ ರಾಷ್ಟ್ರಗಳತ್ತ ಬೊಟ್ಟು ಮಾಡಿದ್ದಾರೆ.

ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ 12 ದಿನಗಳು ಬಾಕಿ ಇದ್ದು, ನಿನ್ನೆ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾದ ಟ್ರಂಪ್ ಹಾಗೂ ಜೋ ಬೈಡನ್ ನಡುವೆ ಕೊನೆಯ ಹಂತದ ಚರ್ಚೆ ನಡೆಯಿತು.

ಈ ವೇಳೆ ಅಮೆರಿಕದ ಹವಾಮಾನ ಬದಲಾವಣೆಯ ಬಗ್ಗೆ ಮಾತನಾಡುವಾಗ ಬೇರೆ ದೇಶಗಳ ಜೊತೆ ಹೋಲಿಕೆ ಮಾಡಿರುವ ಡೊನಾಲ್ಡ್​ ಟ್ರಂಪ್, ಚೀನಾ, ರಷ್ಯಾ, ಭಾರತ ದೇಶಗಳನ್ನೇ ಗಮನಿಸಿ. ಆ ದೇಶಗಳ ಗಾಳಿ ಬಹಳ ಕಲುಷಿತವಾಗಿದೆ. ಭಾರತ, ರಷ್ಯಾಗಳ ವಾಯು ಮಾಲಿನ್ಯಕ್ಕೆ ಹೋಲಿಸಿದರೆ ಅಮೆರಿಕದಲ್ಲಿ ಅತಿ ಶುದ್ಧವಾದ ಗಾಳಿಯಿದೆ, ಸ್ವಚ್ಛವಾದ ನೀರಿದೆ ಎಂದು ಹೇಳಿದ್ದಾರೆ.

ಇನ್ನು ಇದಕ್ಕೆ ಜೋ ಬಿಡೆನ್‌ ಯಾವುದೇ ಪ್ರತಿಕ್ರಿಯೆ ನೀಡಲು ಹೋಗಿಲ್ಲ. ಇದಲ್ಲದೆ ಹಲವು ವಿಚಾರಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top