fbpx
ಸಮಾಚಾರ

“ಗೆಲ್ಸಿದ್ರೆ ಮಾತ್ರ ಲಸಿಕೆ ಕೊಡ್ತೀರಾ, ಇಲ್ಲ ಅಂದ್ರೆ ಜನ್ರನ್ನು ಸಾಯಿಸಿ ಬಿಡ್ತಿರಾ” BJP ವಿರುದ್ಧವೇ ವಿಶ್ವನಾಥ್ ಗರಂ

ಬಿಹಾರದ ಬೆನ್ನಲ್ಲೇ ರಾಜ್ಯದಲ್ಲೂ ಕೊರೋನಾ ಲಸಿಕೆ ರಾಜಕೀಯ ಶುರುವಾಗಿದೆ. ಕೊರೋನಾ ಲಸಿಕೆಯನ್ನು ರಾಜಕೀಕರಣಗೊಳಿಸಿದ ಬಿಜೆಪಿ ಬಗ್ಗೆ ವಿಪಕ್ಷಗಳು ಟೀಕಿಸಿರುವ ಬೆನ್ನಲ್ಲೇ, ಬಿಜೆಪಿ ಪ್ರಣಾಳಿಕೆ ವಿರುದ್ಧ ಬಿಜೆಪಿ ನಾಯಕ ಎಚ್. ವಿಶ್ವನಾಥ್ ಕೂಡಾ ಗರಂ ಆಗಿದ್ದಾರೆ.

‘ಚುನಾವಣೆಯಲ್ಲಿ ಗೆಲ್ಲದಿದ್ದರೇ ಜನರನ್ನು ಸಾಯಿಸ್ತೀರಾ ?’ ಎಂದು ವಿಧಾನ ಪರಿಷತ್ ಸದಸ್ಯ ಎಚ್‌.ವಿಶ್ವನಾಥ್‌, ಬಿಹಾರ ವಿಧಾನಸಭಾ ಚುನಾವಣೆಗಾಗಿ ಸ್ವಪಕ್ಷ ಬಿಜೆಪಿ ಪ್ರಕಟಿಸಿದ ಪ್ರಣಾಳಿಕೆಯನ್ನೇ ಕಟು ಶಬ್ದಗಳಲ್ಲಿ ಟೀಕಿಸಿದರು. ‘ಗೆದ್ದರೆ ಮಾತ್ರ ಲಸಿಕೆಯಾ? ಗೆಲ್ಲದಿದ್ದರೆ ಜನ ಸತ್ತು ಹೋಗಲಾ?’ ಎಂದು ಶುಕ್ರವಾರ ತಮ್ಮನ್ನು ಭೇಟಿಯಾದ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಕೊರೊನಾ ವಿಚಾರವನ್ನ ರಾಜಕೀಯಕ್ಕೆ ತರಬೇಡಿ. ವೋಟ್ ಹಾಕಿ ಗೆಲ್ಲಿಸಿದರೆ ಉಚಿತ ಲಸಿಕೆ ಕೊಡುತ್ತೀರಾ ಸರಿ. ಸೋಲಿಸಿಬಿಟ್ಟರೆ ಜನರನ್ನು ಸಾಯಿಸಿ ಬಿಡುತ್ತೀರಾ? ಯಾವುದೇ ಪಕ್ಷವಾಗಲಿ ಕೊರೊನಾ ವಿಚಾರ ರಾಜಕೀಯ ಚರ್ಚೆಗೆ ಬಳಸಿಕೊಳ್ಳಬಾರದು. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ತಮ್ಮ ಪಕ್ಷದ ಪ್ರಣಾಳಿಕೆ ವಿರುದ್ಧವೇ ಅಸಮಾಧಾನ ಹೊರ ಹಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top