fbpx
ಸಮಾಚಾರ

ನಿಯಮ ಉಲ್ಲಂಘಿಸಿ ರಾತ್ರಿ ಸಫಾರಿ ಮಾಡಿದ ಆರೋಪ; ನಟ ಧನ್ವೀರ್ ವಿಚಾರಣೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ಸಫಾರಿ ನಡೆಸಿರುವ ಆರೋಪ ಎದುರಿಸುತ್ತಿರುವ ನಟ ಧನ್ವೀರ್ ಗೌಡ ಅವರು ಶನಿವಾರ ವಿಚಾರಣೆ ಹಾಜರಾದರು. ಗೋಪಾಲಸ್ವಾಮಿ ಬೆಟ್ಟ ವಲಯದ ವಲಯಾರಣ್ಯಾಧಿಕಾರಿ ನವೀನ್ ಕುಮಾರ್ ಅವರು ವಿಚಾರಣೆ ನಡೆಸಿದ್ದಾರೆ‌. ನಟ ತನ್ನ ಸ್ನೇಹಿತರೊಂದಿಗೆ ವಿಚಾರಣೆಗೆ ಹಾಜರಾಗಿದ್ದು ಸುಮಾರು 1 ಗಂಟೆ ಕಾಲ ವಿಚಾರಣೆ ನಡೆದಿದೆ.

ಧನ್ವಿರ್ ಗುರುವಾರ ರಾತ್ರಿ ಬಂಡೀಪುರದಲ್ಲಿ ಸಫಾರಿ ನಡೆಸಿದ್ದಾರೆ ಎನ್ನಲಾದ ವಿಡಿಯೊ ಶುಕ್ರವಾರ ವೈರಲ್ ಆಗಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.

ಇದರ ನಡುವೆ ನಟ ಧನ್ವೀರ್ ಮಾದ್ಯಮದೊಂದಿಗೆ ಮಾತನಾಡಿ “ನಾನು ಸಂಜೆ 4.3-0 ರಿಂದ 6.30ರ ನಡುವೆ ಸಫಾರಿ ಹೋಗಿದ್ದೆ. ಯಾವ ಪ್ರಾಣಿಯೂ ಕಾಣಿಸಿರಲಿಲ್ಲ. ಆದರೆ ಕಡೆ ಘಳಿಗೆಯಲ್ಲಿ ನಮ್ಮ ವಾಹನದ ಮುಂದೆ ಹುಲಿಯೊಂದು ಹಾದು ಹೋಗಿದ್ದು ಅದರ ವಿಡಿಯೋ ಮಾಡಿದ್ದೆ. ಇದು ಇಷ್ಟು ವಿವಾದವಾಗಿದೆ ಎನ್ನುವುದು ನನಗೆ ನಂಬಲಾಗುತ್ತಿಲ್ಲ. ನಾನು ಅರಣ್ಯ ಇಲಾಖೆಯ ವಾಹನದಲ್ಲೇ ಸಫಾರಿ ಹೋಗಿದ್ದು ಆ ವಾಹನ ಸಂಜೆ 6.30ರ ನಂತರ ಲಭ್ಯವಿರುವುದಿಲ್ಲ, ಸರ್ಕಾರದ ನಿಯಮದ ಅನುಸಾರವೇ ಸಫಾರಿ ಮುಗಿಸಿದ್ದೇನೆ, ಯಾವ ಕಾನೂನು ಮುರಿದಿಲ್ಲ” ಎಂದಿದ್ದರು.

ಪ್ರಾಣಿಗಳಿಗೆ ತೊಂದರೆಯಾಗಬಾರದು ಎಂದು ಸಫಾರಿಗೆ ಸಮಯ ನಿಗದಿ ಮಾಡಲಾಗಿದೆ. ಆದರೆ ಸೆಲೆಬ್ರಿಟಿಗಳಾದರೆ ಇಷ್ಟ ಬಂದಂತೆ ರಾತ್ರಿ ವೇಳೆ ಸಫಾರಿ ಮಾಡಿದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಬೆನ್ನಲ್ಲೇ ಪೋಸ್ಟ್ ಡಿಲೀಟ್ ಮಾಡಿ ನಂತರ ಎಡಿಟ್ ಮಾಡಿ ಮತ್ತೆ ಪೋಸ್ಟ್ ಮಾಡಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top