fbpx
ಸಮಾಚಾರ

‘ಅವನು ಮತ್ತು ಶ್ರಾವಣಿ’ ನಟಿ ಚೈತ್ರಾ ರೆಡ್ಡಿ ನಿಶ್ಚಿತಾರ್ಥ!

ಆಂಧ್ರಪ್ರದೇಶದಲ್ಲಿ ಹುಟ್ಟಿದ ಸುಂದರಿ ಚೈತ್ರಾ ರೆಡ್ಡಿ ‘ಅವನು ಮತ್ತೆ ಶ್ರಾವಣಿ’ ಧಾರಾವಾಹಿ ಮೂಲಕ ಕನ್ನಡಿಗರಿಗೆ ಪರಿಚಯವಾದರು. ಹಲವು ವರ್ಷಗಳ ಕಾಲ ಪ್ರಸಾರವಾಗಿದ್ದ ಈ ಧಾರಾವಾಹಿ ಒಳ್ಳೆಯ ಪ್ರತಿಕ್ರಿಯೆ ಪಡೆದಿತ್ತು.

ಈ ಸೀರಿಯಲ್‌ನಲ್ಲಿ ಶ್ರಾವಣಿ ಪಾತ್ರ ಮಾಡಿದ್ದ ನಟಿ ಚೈತ್ರಾ ರೆಡ್ಡಿ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ,. ನಿಶ್ಚಿತಾರ್ಥದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಸಿನಿಮಾಟೋಗ್ರಾಫರ್ ಆಗಿರುವ ರಾಕೇಶ್ ಸಮಾಲಾ ಜೊತೆ ಚೈತ್ರಾ ರೆಡ್ಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ರಾಕೇಶ್‌ ಛಾಯಾಗ್ರಯಕ ಹಾಗೂ ಕಾರ್ಪೋರೇಟ್ ಜಾಹೀರಾತುಗಳನ್ನು ನಿರ್ದೇಶಿಸುತ್ತಾರೆ.

ಚೈತ್ರಾ ರೆಡ್ಡಿ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ರಾಕೇಶ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಇದರ ಜೊತೆಗೆ ಯಾವಾಗ ಈ ಜೋಡಿ ಹಸೆಮಣೆ ಏರಲಿದೆ ಎಂದು ಕಾದುನೋಡಬೇಕಾಗಿದೆ.

ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ‘ರಾಧಾ ರಮಣ’ ನಟಿ ಕಾವ್ಯಾ ಗೌಡ ಕೂಡ ಭಾಗಿಯಾಗಿದ್ದರು. ಇನ್‌ಸ್ಟಾಗ್ರಾಂ ಸ್ಟೋರಿ ಮೂಲಕ ಅವರು ಸ್ನೇಹಿತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top