fbpx
ಸಮಾಚಾರ

ದೇವದತ್ ಪಡಿಕ್ಕಲ್‌ ಬ್ಯಾಟಿಂಗ್ ಶೈಲಿಯನ್ನು ಮ್ಯಾಥ್ಯೂ ಹೇಡನ್‌ಗೆ ಹೋಲಿಸಿದ ಸ್ಟಾರ್ ಆಟಗಾರ

ಐಪಿಎಲ್‌ನ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡದ ಆರಂಭಿಕ ಆಟಗಾರರಾಗಿ ಮಿಂಚುತ್ತಿರುವ ದೇವದತ್ತ್ ಪಡಿಕ್ಕಲ್‌ ತಮ್ಮ ಆಕ್ರಮಣಕಾರಿ ಆಟದ ಮೂಲಕ ಈಗಾಗಲೇ ಕ್ರಿಕೆಟ್ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಪದಾರ್ಪಣೆಯ ಟೂರ್ನಿಯಲ್ಲೇ ಮೈಚುತ್ತಿರುವ ಯುವ ಆಟಗಾರನ ಬಗ್ಗೆ ಅನೇಕ ಕ್ರಿಕೆಟ್ ದಿಗ್ಗಜರು ಮೆಚ್ಚುಗೆ ವ್ಯಕ್ತಪಡಿಸುತ್ತಿದಾರೆ.

ಈ ಮದ್ಯೆ RCBಯ ಸ್ಟಾರ್ ಆಲ್‌ರೌಂಡರ್ ಕ್ರಿಸ್ ಮೊರಿಸ್ ಅವರು ತಂಡದ ಯುವ ಆಟಗಾರ ದೇವದತ್‌ ಪಡಿಕ್ಕಲ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ‘ಪಡಿಕ್ಕಲ್ ಭಾರತೀಯ ಕ್ರಿಕೆಟ್‌ನ ಭವಿಷ್ಯ’ ಎಂದೇ ಶ್ಲಾಘಿಸಿದ್ದಾರೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಕರ್ನಾಟಕದ ದೇವದತ್‌ ಪಡಿಕ್ಕಲ್‌ ಬ್ಯಾಟಿಂಗ್‌ ಶೈಲಿ, ಆಸೀಸ್‌ನ ಮಾಜಿ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್‌ ಅವರಂತೆ ಇದೆ ಎಂದು ಆಲ್ರೌಂಡರ್‌ ಮೋರಿಸ್‌ ಹೇಳಿದ್ದಾರೆ.

“ಪಡಿಕ್ಕಲ್‌ ಬ್ಯಾಟಿಂಗ್‌ ವೇಳೆ ಆಯ್ಕೆ ಮಾಡುವ ಹೊಡೆತಗಳು ಹೇಡನ್‌ ರನ್ನು ನೆನಪಿಸುತ್ತದೆ. ಪಡಿಕ್ಕಲ್‌ ಆರಂಭದಲ್ಲಿ ಎದುರಾಳಿ ಬೌಲರ್‌ಗಳ ಮೇಲೆ ಸವಾರಿ ಮಾಡುವ ಆಟ ನಿಜಕ್ಕೂ ಮೆಚ್ಚುವಂತದ್ದಾಗಿದೆ. ಪಡಿಕ್ಕಲ್ ಆಸೀಸ್ ಆರಂಭಿಕ ಬ್ಯಾಟ್ಸ್‌ಮನ್ ಹೇಡನ್ ಅವರಂತೆ ದೈತ್ಯ ಆಟಗಾರನಲ್ಲದಿದ್ದರೂ, ಬ್ಯಾಟಿಂಗ್ ಶೈಲಿ ಅವರಂತೆಯೇ ಇದೆ. ಅವರು ಭಾರತೀಯ ಕ್ರಿಕೆಟ್‌ನ ಭವಿಷ್ಯ” ಎಂದು ದಕ್ಷಿಣ ಆಫ್ರಿಕಾ ಆಲ್ರೌಂಡರ್ ಕನ್ನಡಿಗನ ಆಟದ ಗುಣಗಾನ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top