fbpx
ಸಮಾಚಾರ

ಮೊದಲ ಬಾರಿಗೆ ಭಾವಿ ಗಂಡನನ್ನು ಪರಿಚಯಿಸಿದ ನಟಿ ಕಾಜಲ್ ಅಗರ್ವಾಲ್: ಫೋಟೋಸ್ ವೈರಲ್

ಇನ್ನೇನು ಕೆಲವೇ ದಿನಗಳಲ್ಲಿ ನಟಿ ಕಾಜಲ್ ಅಗರ್ವಾಲ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇದುವರೆಗೂ ತಮ್ಮ ಭಾವಿ ಪತಿಯನ್ನು ಪರಿಚಯಿಸದ ನಟಿ ಇದೀಗ ಅವರ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೆ ಮದುವೆ ವಿಚಾರವನ್ನು ಬಹಿರಂಗಪಡಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ಇನ್ನೇನು ಹೊಸ ಬಾಳಿನ ಹೊಸಿಲಲಿ ನಿಂತಿರುವ ಕಾಜಲ್ ಇದೇ ಮೊದಲ ಬಾರಿಗೆ ಭಾವಿ ಪತಿಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 

View this post on Instagram

Happy Dussehra from us to you ! @kitchlug #kajgautkitched

A post shared by Kajal Aggarwal (@kajalaggarwalofficial) on

 

ತಮ್ಮ ಭಾವಿ ಪತಿ ಜೊತೆ ತೆಗೆಸಿಕೊಂಡ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕಾಜಲ್, ನಮ್ಮ ಕಡೆಯಿಂದ ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಮದುವೆಗೂ ಮುನ್ನ ಕಾಜಲ್ ಪತಿಯೊಂದಿಗೆ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಕಾಜಲ್ ಮತ್ತು ಗೌತಮ್ ಫೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಬಹಳ ದಿನಗಳಿಂದ ಕಾಜಲ್‌-ಗೌತಮ್‌ ಡೇಟಿಂಗ್‌ ಮಾಡುತ್ತಿದ್ದರು. ಆ ಬಗ್ಗೆ ಗುಸುಗುಸು ಕೇಳಿಬರುತ್ತಿದ್ದರೂ ಕಾಜಲ್‌ ಮೌನ ವಹಿಸಿದ್ದರು. ಆದರೆ ಇತ್ತೀಚೆಗೆ ಸತ್ಯ ಒಪ್ಪಿಕೊಂಡರು. ‘ಅ.30ರಂದು ನಮ್ಮ ಮದುವೆ ಮುಂಬೈನಲ್ಲಿ ನೆರವೇರಲಿದೆ. ಕುಟುಂಬದ ಕೆಲವೇ ಸದಸ್ಯರು ಈ ಸಮಾರಂಭದಲ್ಲಿ ಭಾಗಿ ಆಗಲಿದ್ದಾರೆ. ಕೊರೊನಾದಿಂದಾಗಿ ನಮ್ಮ ಸಂಭ್ರಮ ಚೂರು ಮಂಕಾಗಿದೆ. ಆದರೂ ಹೊಸ ಬದುಕು ಆರಂಭಿಸಲು ನಾವು ಥ್ರಿಲ್‌ ಆಗಿದ್ದೇವೆ’ ಎಂದು ಕೆಲವೇ ದಿನಗಳ ಹಿಂದೆ ಟ್ವೀಟ್‌ ಮಾಡಿದ್ದರು ಕಾಜಲ್‌.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top