fbpx
ಸಮಾಚಾರ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಕೆಜಿಎಫ್’ ಗಾಯಕಿ ನೇಹಾ ಕಕ್ಕರ್‌!

‘ಕೆಜಿಎಫ್‌: ಚಾಪ್ಟರ್‌ 1’ರ ಹಿಂದಿ ವರ್ಷನ್‌ನಲ್ಲಿ ‘ಗಲಿ ಗಲಿ ಮೇ..’ ಹಾಡು ಹೇಳಿದ್ದ ಬಾಲಿವುಡ್‌ನ ಜನಪ್ರಿಯ ಗಾಯಕಿ ನೇಹಾ ಕಕ್ಕರ್‌ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಗೆಳೆಯ ರೋಹನ್ ಪ್ರೀತ್ ಸಿಂಗ್ ಜೊತೆ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ದೆಹಲಿಯ ಆನಂದ್ ಕಾರಜ್ ನಲ್ಲಿ ನಡೆದ ಮದುವೆಯಲ್ಲಿ ಎರಡು ಕುಟುಂಬಗಳ ಸದಸ್ಯರು ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದರು.

ಕೆಲ ತಿಂಗಳ ಹಿಂದೆ ರೋಹನ್ ಮತ್ತು ನೇಹಾ ಪರಿಚಯವಾಗಿತ್ತು. ಆಜಾ ಚಲಾ ವ್ಯಾಹ ಕರವಾಯೇಂ ಹಾಡಿನ ಸಂದರ್ಭದಲ್ಲಿ ಇಬ್ಬರ ಪರಿಚಯವಾಗಿತ್ತು. ಪರಿಚಯ ಕೆಲವೇ ದಿನಗಳಲ್ಲಿ ಪ್ರೇಮದ ಪುಟ ತೆರೆದು ಮದುವೆ ಎಂಬ ಹಸ್ತಾಕ್ಷರ ಇಬ್ಬರ ಬಾಳಲ್ಲಿ ಮುದ್ರಣಗೊಂಡಿದೆ.

ರೋಹನ್‌ಪ್ರೀತ್ ಸಿಂಗ್ ಪಂಜಾಬ್‌ ಮೂಲದ ಗಾಯಕರಾಗಿದ್ದಾರೆ. ಮದುವೆಯ ಫೋಟೋಗಳು ಮತ್ತು ವಿಡಿಯೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿವೆ. 2019ರ ಇಂಡಿಯನ್ ರೈಸಿಂಗ್ ಸ್ಟಾರ್ ಮೂರನೇ ಸೀಸನ್ ನಲ್ಲಿ ರೋಹನ್ ಪ್ರೀತ್ ಸಿಂಗ್ ಸ್ಪರ್ಧಿಯಾಗಿದ್ದರು. ಇದರ ಜೊತೆ ಮುಜ್‍ಸೇ ಶಾದಿ ಕರೋಗೆ ರಿಯಾಲಿಟಿ ಶೋನಲ್ಲಿ ರೋಹನ್ ಕಾಣಿಸಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top