fbpx
ಸಮಾಚಾರ

ದೀಪಿಕಾ ಪಡುಕೋಣೆಗೆ ಸಂಕಷ್ಟ: ದೀಪಿಕಾ ಪಡುಕೋಣೆ ಮ್ಯಾನೇಜರ್‌ಗೆ NCB ಸಮನ್ಸ್

ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದ ಮಾದಕವಸ್ತು ಪ್ರಕರಣದಲ್ಲಿ ನಟಿ ದೀಪಿಕಾ ಪಡುಕೋಣೆ ಅವರ ವ್ಯವಸ್ಥಾಪಕಿ ಕರಿಷ್ಮಾ ಪ್ರಕಾಶ್ ಅವರಿಗೆ ಮಾದಕವಸ್ತು ನಿಯಂತ್ರಣ ಬ್ಯೂರೋ ಸಮನ್ಸ್ ಜಾರಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.ಅವರು ಪ್ರಸ್ತುತ ಯಾರಿಗೂ ಸಿಗುತ್ತಿಲ್ಲ ಅವರ ಮುಂಬೈ ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಲಾಗಿದೆ.

ಮಂಗಳವಾರ ದೀಪಿಕಾ ಅವರ ಮ್ಯಾನೇಜರ್ ಕರಿಷ್ಮಾ ಅವರ ಮುಂಬೈ ಮನೆಯಲ್ಲಿ ಡ್ರಗ್ಸ್ ವಶಪಡಿಸಿಕೊಂಡ ಬೆನ್ನಲ್ಲೇ ಎನ್,ಸಿ,ಬಿ, ಸಮನ್ಸ್ ಕೊಟ್ಟಿದೆ. ಕಳೆದ ತಿಂಗಳೂ ಸಹ ಕರಿಷ್ಮಾ ಪ್ರಕಾಶ್ ಅವರನ್ನು ಬಾಲಿವುಡ್‌ನಲ್ಲಿ ನಿಷೇಧಿತ ವಸ್ತುಗಳ ಮಾರಾಟ ಮತ್ತು ಬಳಕೆಯ ಬಗ್ಗೆ ತನಿಖೆ ನಡೆಸುತ್ತಿರುವ ಎನ್.ಸಿ.ಬಿ. ಪ್ರಶ್ನಿಸಿತ್ತು.

ಡ್ರಗ್ಸ್ ಲಿಂಕ್ ಆರೋಪ ಬಾಲಿವುಡ್​ನ ಹಲವು ನಟಿಯರ ವಿರುದ್ಧ ಕೇಳಿಬಂದಿತ್ತು. ಈ ಹಿನ್ನೆಲೆ ದೀಪಿಕಾ ಪಡುಕೋಣೆಗೂ ಸಮನ್ಸ್ ನೀಡಿ ವಿಚಾರಣೆ ನಡೆಸಲಾಯ್ತು. ಇದೀಗ ದೀಪಿಕಾ ಮ್ಯಾನೇಜರ್​ಗೂ ಸಮನ್ಸ್ ನೀಡಿರುವುದು ಬಾಲಿವುಡ್ ಅಂಗಳದಲ್ಲಿ ಚರ್ಚೆ ಹುಟ್ಟುಹಾಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top