fbpx
ಸಮಾಚಾರ

ಮುಖಕ್ಕೆ ಮಾಸ್ಕ್​, ತಲೆ ಮೇಲೆ ಟೋಪಿ: ಮಾರುವೇಷದಲ್ಲಿ ದಸರಾ ವೀಕ್ಷಿಸಿದ ಸ್ಯಾಂಡಲ್‍ವುಡ್ ಖ್ಯಾತ ನಟ

ಸ್ಟಾರ್ ನಟ ಎಂದರೆ ಸಾಮಾನ್ಯ ದಿನಗಳಲ್ಲೇ ಜನ ಮುಗಿ ಬೀಳುತ್ತಾರೆ. ಇನ್ನೂ ದಸರಾ ಸಂದರ್ಭದಲ್ಲಿ ಕೇಳ್ತೀರಾ ಇರುವೆ ತರ ಮುತ್ತಿಕೊಳ್ಳುತ್ತಾರೆ. ಇದರಿಂದಾಗಿಯೇ ಹಲವು ನಟ, ನಟಿಯರು ಮಾರುವೇಷದಲ್ಲಿ ಸುತ್ತಾಡುತ್ತಾರೆ. ಅದೇ ರೀತಿ ದಸರಾ ನೋಡಲು ನಟ ನೀನಾಸಂ ಸತೀಶ್ ಮಾರುವೇಷದಲ್ಲಿ ದಸರಾ ಸಂಭ್ರಮವನ್ನು ಕಣ್ತುಂಬಿಕೊಂಡಿದ್ದಾರೆ.

 

 

ಹೌದು, ಮುಖಕ್ಕೆ ಮಾಸ್ಕ್, ತಲೆಗೆ ಟೋಪಿ ಹಾಕಿ ಸತೀಶ್ ಬೀದಿ ಬದಿಗಳಲ್ಲಿ ಓಡಾಡಿದರು. ಅಲ್ಲದೆ ಬೀದಿ ಬದಿಯಲ್ಲಿ ನಿಂತು ಸಾಮಾನ್ಯರಂತೆ ತಿಂಡಿ-ತಿನಿಸುಗಳ ರುಚಿ ಸವಿದರು. ಈ ಸಂತಸದ ಕ್ಷಣಗಳ ವಿಡಿಯೋವನ್ನು ಅಭಿನಯ ಚತುರ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು, ಹಲವರು ನಟನ ಸಿಂಪಲ್​ಸಿಟಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

ಸತೀಶ್ ಪೋಸ್ಟ್:
‘ಇಂದು ನನ್ನ ವೃತ್ತಿ ಜೀವನದಲ್ಲಿ ಮರೆಯಲಾಗದ ದಿನ. ನನ್ನ ಮೂರು ಚಿತ್ರಗಳ, ಚಿತ್ರೀಕರಣ ಒಂದೇ ದಿನದಲ್ಲಿ ನಡೆಯುತ್ತಿವೆ. ‘ಮ್ಯಾಟ್ನಿ’ ಮತ್ತು ‘ದಸರಾ’ ನಾನಿಲ್ಲದಿರುವ ದೃಶ್ಯಗಳನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸುತ್ತಿದ್ದರೆ, ಮೈಸೂರಿನಲ್ಲಿ ‘ಪೆಟ್ರೊಮ್ಯಾಕ್ಸ್’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ಸೌಭಾಗ್ಯ ದೊರಕಲು ಇಷ್ಟು ವರ್ಷದ ನಿಮ್ಮ ಪ್ರೀತಿಯೇ ಕಾರಣ. ದಸರಾ ಹಬ್ಬದ ಶುಭಾಶಯಗಳು. ಲವ್ ಯೂ ಆಲ್’ ಎಂದು ಬರೆದಿದ್ದಾರೆ.

“ಮೈಸೂರು ದಸರಾ ನೋಡುವ ಸೌಭಾಗ್ಯ ದೊರಕಲು ಇಷ್ಟು ವರ್ಷದ ನಿಮ್ಮ ಪ್ರೀತಿ ಕಾರಣ. ಲವ್ ಯೂ ಆಲ್” ಎಂದು ನೀನಾಸಂ ಸತೀಶ್ ಬರೆದುಕೊಂಡು ಖುಷಿ ಹಂಚಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top