fbpx
ಸಮಾಚಾರ

ಆರೋಗ್ಯ ಸೇತು ಆ್ಯಪ್‌ ಸೃಷ್ಟಿಸಿದ್ದು ಯಾರು? ಸರ್ಕಾರದ ಬಳಿ ಮಾಹಿತಿಯೇ ಇಲ್ಲ!

ಆರೋಗ್ಯ ಸೇತು ಆ್ಯಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಸೂಚಿಸಿದ್ದರಿಂದ ಕೋಟ್ಯಂತರ ಜನರು ಆರೋಗ್ಯ ಸೇತು ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಂಡಿದ್ದಾರೆ. ಆದರೆ ಇದನ್ನು ಸೃಷ್ಟಿಸಿದ್ದು ಯಾರು ಎಂಬುದು ಸರಕಾರಕ್ಕೇ ಗೊತ್ತಿಲ್ಲ. ಅಚ್ಚರಿ ಎನಿಸಿದರೂ ಇದು ಸತ್ಯ.

ಆರೋಗ್ಯ ಸೇತು ಆ್ಯಪ್‌ನ ವೆಬ್‌ಸೈಟ್‌ನಲ್ಲಿ ಇದನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ ಮತ್ತು ಐಟಿ ಇಲಾಖೆ ಸೃಷ್ಟಿಸಿದೆ ಎಂಬ ಮಾಹಿತಿ ಸಿಗುತ್ತದೆ. ಆದರೆ ಈ ಎರಡೂ ಇಲಾಖೆಗಳು ಆ್ಯಪ್‌ ಸೃಷ್ಟಿಸಿದ್ದು ಯಾರು ಎಂಬ ಬಗ್ಗೆ ತಮ್ಮ ಬಳಿಯಲ್ಲಿ ಮಾಹಿತಿ ಇಲ್ಲ ಎಂದು ಆರ್‌ಟಿಐ ಪ್ರಶ್ನೆಗೆ ಉತ್ತರಿಸಿವೆ.

ಇಷ್ಟೇ ಅಲ್ಲದೇ ಆಪ್‌ ನಿರ್ಮಿಸುವಲ್ಲಿ ಹಾಗೂ ಬಳಕೆದಾರರ ಖಾಸಗಿ ಡೇಟಾ ಪಡೆದುಕೊಳ್ಳುವುದಿಲ್ಲಈ ಬಗ್ಗೆ ಆಡಿಟ್ ನೀಡಲು ಯಾರು ಇನ್ಪುಟ್‌ ನೀಡಿದರು ಎಂಬ ಕುರಿತಾಗಿಯೂ ಯಾವುದೇ ಮಾಹಿತಿ ನೀಡಿಲ್ಲ.

ಮಾಹಿತಿ ನೀಡಲು ವಿಫಲರಾಗಿರುವ ಪ್ರಾಧಿಕಾರಗಳನ್ನು ತರಾಟೆಗೆ ತೆಗೆದುಕೊಂಡಿರುವ ಕೇಂದ್ರ ಮಾಹಿತಿ ಆಯೋಗ ಮಂಗಳವಾರದಂದು ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ, ವಿದ್ಯುನ್ಮಾನ ಸಚಿವಾಲಯ, ರಾಷ್ಟ್ರೀಯ ಮಾಹಿತಿ ಕೇಂದ್ರ ಹಾಗೂ ರಾಷ್ಟ್ರೀಯ ಇ-ಗವರ್ನೆನ್ಸ್ ಇಲಾಖೆಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.

ಸದ್ಯ ಕೇಂದ್ರ ಮಾಹಿತಿ ಆಯೋಗ ಕಳುಹಿಸಿರುವ ಈ ನೋಟಿಸ್‌ಗೆ ಸಂಬಂಧಪಟ್ಟ ಇಲಾಖೆಗಳು ನವೆಂಬರ್ 24ರೊಳಗೆ ಉತ್ತರಿಸಬೇಕಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top