fbpx
ಸಮಾಚಾರ

ಆರ್.ಆರ್.ನಗರ ಕ್ಷೇತ್ರದಲ್ಲಿ ಮುನಿರತ್ನ ಪರ ದರ್ಶನ್ ಪ್ರಚಾರ

ಆರ್‌ ಆರ್ ನಗರ ಉಪಕದನ ಕಣ ರಂಗೇರಿದೆ. ಮೂರು ಪಕ್ಷಗಳಲ್ಲಿ ಪ್ರಚಾರದ ಭರಾಟೆ ಜೋರಾಗಿದೆ. ಈ ಮದ್ಯೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ಕಣಕ್ಕೆ ಧುಮುಕಲಿದ್ದಾರೆ. ಈ ಮೂಲಕ ಆರ್ ಆರ್ ನಗರದಲ್ಲಿ ಸಾರಥಿ ಧೂಳೆಬ್ಬಿಸ್ತಾರೆ ಎನ್ನಲಾಗ್ತಿದೆ.

ಕೇವಲ ರಾಜಕಾರಣಿಯಲ್ಲದೆ ನಿರ್ಮಾಪಕರೂ ಆಗಿರುವ ಮುನಿರತ್ನ ಪರ ಸ್ಯಾಂಡಲ್​ವುಡ್​ನ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಇಂದು ಪ್ರಚಾರ ನಡೆಸಲಿದ್ದಾರೆ. ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸಿದ್ದ ದರ್ಶನ್​ ಅವರು ಮುನಿರತ್ನ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದೇ ಕಾರಣಕ್ಕೆ ಇಂದು ಅವರ ಪರವಾಗಿ ಮತಯಾಚನೆ ಮಾಡಲಿದ್ದಾರೆ. ದರ್ಶನ್​ ಪ್ರಚಾರದಿಂದ ಆರ್​ಆರ್​ ನಗರ ಇಂದು ಮತ್ತಷ್ಟು ರಂಗೇರಲಿದೆ.

ಆರ್.ಆರ್.ನಗರ ಕುರುಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟಿಯರಾದ ಖುಷ್ಬೂ, ತಾರಾ ಕ್ಯಾಂಪೇನ್ ಮಾಡಿದ್ದಾರೆ. ದರ್ಶನ್ ಸಹ ಪ್ರಚಾರಕ್ಕಿಳಿದ್ರೆ ಚುನಾವಣಾ ಕಣ ರಂಗೇರಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top