fbpx
ಸಮಾಚಾರ

ಕೆ. ಕಲ್ಯಾಣ್ ಕೌಟುಂಬಿಕ ಕಲಹಕ್ಕೆ ಕಾರಣವಾಗಿದ್ದ ಗಂಗಾ ಆತ್ಮಹತ್ಯೆ

ಸಾಹಿತಿ ಕೆ. ಕಲ್ಯಾಣ್ ಕೌಟುಂಬಿಕ ಕಲಹದ ರೂವಾರಿ ಎನ್ನಲಾಗಿದ್ದ ಜ್ಯೋತಿ ಅಲಿಯಾಸ್ ಗಂಗಾ ಕುಲಕರ್ಣಿ ದುರಂತ ಅಂತ್ಯ ಕಂಡಿದ್ದಾಳೆ. ಆತ್ಮಹತ್ಯೆ ಮಾಡಿಕೊಂಡಿರೋ ಜ್ಯೋತಿ ಕುಲಕರ್ಣಿ, ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಪ್ರಕರಣವೊಂದಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಜಿಲ್ಲೆಯ ಕುಷ್ಟಗಿ ನ್ಯಾಯಾಲಯಕ್ಕೆ ಆಗಮಿಸಿದ್ದ ಗಂಗಾ ಕುಲಕರ್ಣಿ ಕುಸಿದು ಬಿದ್ದಿದ್ದಾರೆ. ವಿಷಸೇವಿಸಿಯೇ ನ್ಯಾಯಾಲಯಕ್ಕೆ ಬಂದಿದ್ದ ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕೆಲದಿನಗಳ ಹಿಂದೆ ಕೆ. ಕಲ್ಯಾಣ್ ಹಾಗೂ ಅವರ ಪತ್ನಿಯ ಜೀವನದ ಜೊತೆ ಚೆಲ್ಲಾಟ ವಾಡಿ ಪತಿ ಪತ್ನಿಯರಿಬ್ಬರೂ ದೂರಾಗುವಂತೆ ಮಾಡಲು ಪ್ರಮುಖ ರೂವಾರಿಯಾಗಿದ್ದ ಜ್ಯೋತಿ ಅಲಿಯಾಸ್ ಗಂಗಾ ಕುಲಕರ್ಣಿ ಎಂಬಾಕೆ ಕುಷ್ಟಗಿ ತಾಲೂಕಿನಾದ್ಯಂತ ವಿವಿಧ ನಿರುದ್ಯೋಗಿ ಯುವಕರಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ಎತ್ತುವಳಿ ಮಾಡಿ, ತಲೆಮರೆಸಿಕೊಂಡಿದ್ದಳು. ಈ‌ ಕುರಿತು ಇಲ್ಲಿನ ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣಗಳ ವಿಚಾರಣೆ ನಡೆಯುತ್ತಿತ್ತು.

ಕಲ್ಯಾಣ್ ಪತ್ನಿ ಅಶ್ವಿನಿಯನ್ನು ಹಾಗೂ ಅತ್ತೆ, ಮಾವರನ್ನು ಪುಸಲಾಯಿಸಿ ಅಪಹರಣ ಮಾಡಿರುವ ಆರೋಪಕ್ಕೂ ಗಂಗಾ ಗುರಿಯಾಗಿದ್ದರು. ಪತ್ನಿ ಅಶ್ವಿನಿ ಅಕೌಂಟ್‍ನಿಂದ 19 ಲಕ್ಷ ರೂಪಾಯಿ ತನ್ನ ಅಕೌಂಟ್‍ಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಆರೋಪ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಡಗಿ ಗ್ರಾಮದ ಶಿವಾನಂದ ವಾಲಿ, ಗಂಗಾ ಕುಲಕರ್ಣಿ ಎಂಬವರ ವಿರುದ್ಧ ಕೇಳಿಬಂದಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top