fbpx
ಸಮಾಚಾರ

ಕಾಜಲ್ ಮದುವೆ ಕಾರ್ಯಗಳು ಆರಂಭ: ಮೆಹಂದಿ ಸಂಭ್ರಮದಲ್ಲಿ ನಟಿ ಕಾಜಲ್ ಅಗರ್ವಾಲ್

ನಟಿ ಕಾಜಲ್ ಅಗರ್ವಾಲ್ ಮದುವೆಗೆ ಇನ್ನೊಂದೆ ದಿನ ಬಾಕಿ ಇದೆ. ಇದೇ ತಿಂಗಳು 30ರಂದು ಕಾಜಲ್ ಬಹುಕಾಲದ ಗೆಳೆಯ ಗೌತಮ್ ಕಿಚಲು ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ. ಈಗಾಗಲೇ ಕಾಜಲ್ ಮನೆಯಲ್ಲಿ ಮದುವೆ ಸಂಭ್ರಮ ಮನೆಮಾಡಿದೆ. ಮದುವೆ ಶಾಸ್ತ್ರಗಳು ಜೋರಾಗಿ ನಡೆಯುತ್ತಿವೆ.

 

View this post on Instagram

🧿 #kajgautkitched 🧿

A post shared by Kajal Aggarwal (@kajalaggarwalofficial) on

 

ಅವರ ಅರಶಿನ – ಮದರಂಗಿ ಶಾಸ್ತ್ರ ಗುರುವಾರ ನೆರವೇರಿದೆ. ಕೊರೋನಾ ಕಾರಣಕ್ಕಾಗಿ ಅವರ ಆಪ್ತರು ಮತ್ತು ಕುಟುಂಬದ ಸದಸ್ಯರು ಮಾತ್ರ ಸಮಾರಂಭದಲ್ಲಿ ಹಾಜರಿದ್ದರು. ಕೈಗೆ ಮದರಂಗಿ ಹಾಕಿಕೊಂಡ ಚಿತ್ರವನ್ನು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಕೊರೊನಾದಿಂದಾಗಿ ನಮ್ಮ ಸಂಭ್ರಮ ಚೂರು ಮಂಕಾಗಿದೆ. ಆದರೂ ಹೊಸ ಬದುಕು ಆರಂಭಿಸಲು ನಾವು ಥ್ರಿಲ್‌ ಆಗಿದ್ದೇವೆ. ನೀವೆಲ್ಲರೂ ನಮ್ಮನ್ನು ಉತ್ಸಾಹದಿಂದ ಹುರಿದುಂಬಿಸುತ್ತೀರಿ ಎಂಬುದು ತಿಳಿದಿದೆ. ಇಷ್ಟು ವರ್ಷಗಳ ಕಾಲ ನನಗೆ ನೀವೆಲ್ಲ ತೋರಿದ ಪ್ರೀತಿಗೆ ಧನ್ಯವಾದಗಳು. ಈಗ ಹೊಸ ಪಯಣಕ್ಕೆ ನಾವು ನಿಮ್ಮ ಆಶೀರ್ವಾದ ಬಯಸುತ್ತಿದ್ದೇವೆ’ ಎಂದಿದ್ದಾರೆ ಕಾಜಲ್‌.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top