fbpx
ಸಮಾಚಾರ

ಮೊಮ್ಮಗನಿಗೆ ಮುದ್ದಾದ ನಿಕ್ ನೇಮ್ ಇಟ್ಟಿದ್ದಾರೆ ತಾತ ಸುಂದರ್ ರಾಜ್

ಆಸ್ಪತ್ರೆಯಿಂದ ಮೇಘನಾ ಡಿಸ್ಚಾರ್ಜ್ ಆಗಿದ್ದು ಮೇಘನಾ ತಂದೆ ಮಾತನಾಡಿದ್ದಾರೆ. ಏಳು ದಿನಗಳ ನಂತ್ರ ನಾನು ಮಾಧ್ಯಮದವರನ್ನ ಮೀಟ್ ಮಾಡ್ತಾ ಇದ್ದೇನೆ. ಮೂರು ತಿಂಗಳ ನಂತರ ಅದ್ಧೂರಿಯಾಗಿ ನಾಮಕರಣ ಮಾಡಲಾಗುವುದು ಎಂದು ಮೇಘನಾ ತಂದೆ ಸುಂದರ್ ರಾಜ್ ಹೇಳಿದ್ದಾರೆ.

ಮಗುವನ್ನು ಸುಂದರ್‌ ರಾಜ್‌ ಪ್ರೀತಿಯಿಂದ ಚಿಂಟು ಎಂದು ಕರೆಯುತ್ತಾರಂತೆ. ಹಾಗೇ ಮೇಘನಾ ಕೂಡ ಮಗುವನ್ನು ಪಾಪು ಅನ್ನುತ್ತಾರಂತೆ. ಮಗುವಿನ ಮೂಗು ನಿಜಕ್ಕೂ ಚಿರು ಸರ್ಜಾ ಮೂಗಿನಂತೆಯೇ ಇದೆ ಎಂದು ನಗುತ್ತಾರೆ ಸುಂದರ್‌ ರಾಜ್‌.

ಚಿಂಟೂ:
“ಮಗುವಿಗೆ ಪ್ರೀತಿಯಿಂದ ಚಿಂಟೂ ಅಂತ ಕರೆಯುತ್ತಿದ್ದೇವೆ. ಚಿಂಟೂ ಅಂದ್ರೆ ಚಿಂತೆಯನ್ನ ದೂರ ಮಾಡಲಿ ಅನ್ನೋದಕ್ಕೆ ಈ ರೀತಿ ಕರಿಯುತ್ತಿದ್ದೇವೆ. ಚಿರು ಪರವಾಗಿ ಮನೆಗೆ ಬಂದ ಅವನ ಮಗನನ್ನ ಗೋಧೂಳಿ ಮುಹೂರ್ತದಲ್ಲಿ ಮನೆಗೆ ಕರೆದುಕೊಂಡು ಬಂದಿದ್ದೇವೆ” ಎಂದಿದ್ದಾರೆ.

ಇನ್ನು ಅರ್ಜುನ್ ಸರ್ಜಾ ಫೋನ್ ಮಾಡಿ ಮಗುವನ್ನ ಬರಮಾಡಿಕೊಳ್ಳುವದರ ಕುರಿತು ಮಾತಾನಾಡಿದ್ರು ಸುಂದರ್ ರಾಜ್ “ಅರ್ಜುನ್ ಸರ್ಜಾ ಜೆಂಟಲ್‍ಮ್ಯಾನ್, ಧೃವ ಸರ್ಜಾ ಸೂಪರ್ ಶೋ ಮ್ಯಾನ್. ಮಗು ಹುಟ್ಟಿದ ತಕ್ಷಣ ಎಲ್ಲರಿಗೂ ತೋರಿಸಿ ಸಂಭ್ರಮಿಸಿದರು. ಆದ್ರೆ ತಂದೆ ಮಗಳನ್ನು ನೋಡಿಕೊಳ್ಳುವವನು ವಾಚ್ ಮ್ಯಾನ್. ಆ ಕೆಲಸವನ್ನ ಕೊನೆಯವರೆಗೂ ನಾನು ನಿರ್ವಹಿಸುತ್ತೇನೆ. ” ಎಂದು ಹೇಳಿದರು

“ಈ ಮಗು ಸರ್ಜಾ ಕುಟುಂಬದ ಕುಡಿ. ಚಿರು ಅನುಪಸ್ಥಿತಿಯಲ್ಲಿಯೇ ಮಗುವನ್ನ ನೋಡಿಕೊಳ್ಳುವುದು ತಾಯಿಯ ಕರ್ತವ್ಯ. ಈ ಸ್ಥಿತಿಯಲ್ಲಿ ಮಗಳನ್ನ ಆರೈಕೆ ಮಾಡೋದು ನಮ್ಮ ಕರ್ತವ್ಯ. ಹಾಗಾಗಿ ಜೂನಿಯರ್ ಚಿರು ನಮ್ಮ ಮನೆಯಲ್ಲಿಯೇ ಬೆಳೆಯಲಿದ್ದಾನೆ. ಮಗು ಇಲ್ಲಿಯೂ ಇರುತ್ತೆ, ಅಲ್ಲಿಯೂ ಇರಬೇಕು. ಎರಡೂ ಕುಟುಂಬಗಳ ಆರೈಕೆಯಲ್ಲಿ ಮಗು ಬೆಳೆಯಲಿದೆ.” ಎಂದು ಹೇಳಿದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top