fbpx
ಸಮಾಚಾರ

ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ‘ರಾಜಹಂಸ’ ಚಿತ್ರದ ನಟ

‘ಜೋಕಾಲಿ’, ‘ರಾಜಹಂಸ’ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ನಟ/ನಿರ್ಮಾಪಕ ಗೌರಿಶಂಕರ್ ಇಂದು (ಗುರುವಾರ) ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ವೃತ್ತಿಯಲ್ಲಿ ವಸ್ತ್ರ ವಿನ್ಯಾಸಕಿ ಆಗಿರುವ ಅರುಣಾ ಅವರೊಂದಿಗೆ ಕೊಲ್ಲೂರಿನ ಶ್ರೀಮೂಕಾಂಬಿಕಾ ದೇವಸ್ಥಾನದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.

ಅಕ್ಟೋಬರ್ 29 ರಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಮದುವೆ ಹಿಂದೂ ಸಂಪ್ರದಾಯದಂತೆ ವಿವಾಹ ನಡೆದಿದೆ. ನಂತರ ಅದೇ ದಿನ ಸಂಜೆ ಹುಡುಗನ ಸ್ವಗೃಹ ತೀರ್ಥಹಳ್ಳಿ ತಾಲ್ಲೂಕು ಶಂಕರ ಹಳ್ಳಿಯಲ್ಲಿ ಮನೆ ತುಂಬಿಸಿಕೊಳ್ಳುವ ಶಾಸ್ತ್ರವೂ ನೆರವೇರಿದೆ.

ಅತ್ಯಂತ ಸರಳ ಶಾಸ್ತ್ರೋಕ್ತವಾಗಿ ಕೇವಲ ಇಪ್ಪತ್ತು ಜನರ ಸಮ್ಮುಖದಲ್ಲಿ ಕುಟುಂಬ ವರ್ಗ ಮತ್ತು ಕೆಲವು ಸ್ನೇಹಿತರ ಸಮ್ಮುಖದಲ್ಲಿ ಹೊಸ ಬಾಳಿಗೆ ಅಡಿ ಇಟ್ಟಿದ್ದಾರೆ ಗೌರಿ ಶಂಕರ್. ಕೊರನಾ ಕಾರಣದಿಂದ ಅತ್ಯಂತ ಸರಳವಾಗಿ ಮದುವೆಯಾಗಿದ್ದೇನೆ ಯಾರನ್ನೂ ಆಮಂತ್ರಿಸಲು ಸಕಾಲವಲ್ಲ, ನಿಮ್ಮ ಆಶೀರ್ವಾದ ಮತ್ತು ಪ್ರೀತಿ ಸದಾ ನಮ್ಮ ಮೇಲೆ ಇರಲಿ ಎಂದಿದ್ದಾರೆ ಗೌರಿ ಶಂಕರ್

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top