fbpx
ಸಮಾಚಾರ

ಹಿಂದು ಪರ ಸಂಘಟನೆಗಳ ಬೇಡಿಕೆಗೆ ಮಣಿದ ಅಕ್ಷಯ್ ಕುಮಾರ್: ‘ಲಕ್ಷ್ಮೀ ಬಾಂಬ್’ ಟೈಟಲ್ ಬದಲಾವಣೆ

ಹಿಂದು ಪರ ಸಂಘಟನೆಗಳ ಪ್ರತಿಭಟನೆಯ ಬಳಿಕ ಅಕ್ಷಯ್ ಕುಮಾರ್ ನಟನೆಯ ಹೊಸ ಹಾರರ್ ಕಾಮಿಡಿ ಚಿತ್ರ ಲಕ್ಷ್ಮೀ ಬಾಂಬ್ ಚಿತ್ರದ ಹೆಸರನ್ನು ನಿರ್ಮಾಪಕರು ಬದಲಿಸಲು ನಿರ್ಧರಿಸಿದ್ದಾರೆ. ಲಕ್ಷ್ಮಿ ಬಾಂಬ್ ಎಂದಿದ್ದ ಸಿನಿಮಾ ಹೆಸರನ್ನು ‘ಲಕ್ಷ್ಮಿ’ ಎಂದು ಬದಲಾಯಿಸಲಾಗಿದೆ ಎಂದು ಹೇಳಿದೆ ಸಿನಿಮಾ ತಂಡ.

ಚಿತ್ರಕ್ಕೆ ಹಿಂದೂ ದೇವತೆಯ ಹೆಸರಿಟ್ಟು, ಅದರ ಮುಂದೆ ಬಾಂಬ್‌ ಅಂತ ಸೇರಿಸಿ ಅವಹೇಳನ ಮಾಡಲಾಗುತ್ತಿದೆ. ಆ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರುವಂತ ಕೆಲಸ ಮಾಡಿದ್ದಾರೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವ ಪ್ರಕಾಶ್‌ ಜಾವ್ಡೇಕರ್‌ ಅವರಿಗೆ ಪತ್ರ ಬರೆದರು. ಹಾಗೇ ಈ ಸಿನಿಮಾ ತಂಡದ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟದ ಎಚ್ಚರಿಕೆಯನ್ನೂ ನೀಡಿದರು. ಇಷ್ಟೆಲ್ಲಾ ಬೆಳವಣಿಗೆಗಳಾಗುತ್ತಿರುವಂತೆಯೇ ಎಚ್ಚೆತ್ತ ಚಿತ್ರತಂಡ ಈಗ ಸಿನಿಮಾ ಟೈಟಲ್‌ ಬದಲಿಸಿದೆ.

ಅಲ್ಲದೆ ಚಿತ್ರತಂಡದವರು ನಾಯಕನಿಗೆ ಆಸಿಫ್‌, ನಾಯಕಿಗೆ ಪ್ರಿಯಾ ಯಾದವ್‌ ಎಂದು ಬೇಕಂತಲೇ ಹೆಸರಿಟ್ಟಿದ್ದು, ಆ ಮೂಲಕ ಲವ್‌ ಜಿಹಾದ್‌ಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು.

‘ಲಕ್ಷ್ಮೀ ಬಾಂಬ್‌’ ಅಲ್ಲ, ಬರೀ ಲಕ್ಷ್ಮೀ!
ಅಂತಿಮವಾಗಿ ಚಿತ್ರತಂಡ ಶೀರ್ಷಿಕೆಯನ್ನು ‘ಲಕ್ಷ್ಮೀ ಬಾಂಬ್‌’ ಬದಲು ‘ಲಕ್ಷ್ಮೀ’ ಎಂದು ಇಟ್ಟಿದೆ.
ಪ್ರೇಕ್ಷಕರ ಭಾವನೆಗಳನ್ನು ಗೌರವಿಸಿ ಸಿನಿಮಾ ನಿರ್ಮಾಪಕರಾದ ಶಬಿನಾ ಖಾನ್, ತುಷಾರ್ ಕಪೂರ್ ಹಾಗೂ ಅಕ್ಷಯ್ ಕುಮಾರ್ ಸಿನಿಮಾದ ಟೈಟಲ್ ಬದಲಾಯಿಸಲು ನಿರ್ಧರಿಸಿ ‘ಲಕ್ಷ್ಮೀ’ ಎಂದಷ್ಟೇ ಉಳಿಸಿಕೊಂಡಿದೆಯಂತೆ.

ಸಿನಿಮಾ ನವೆಂಬರ್ 09ರಂದು ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ರಿಲೀಸ್ ಅಗಲಿದೆ. ಸಿನಿಮಾವನ್ನು ಕೇಪ್ ಆಫ್ ಗುಡ್ ಹೋಪ್ಸ್ ಫಿಲ್ಮ್ಸ್, ತುಷಾರ್ ಎಂಟರ್ಟೈನ್‌ಮೆಂಟ್ ಹೌಸ್, ಹಾಗೂ ಶಬಿನಾ ಎಂಟರ್ಟೈನ್‌ಮೆಂಟ್ ನಿರ್ಮಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top