fbpx
ಸಮಾಚಾರ

ಸೂಪರ್‌ಸ್ಟಾರ್‌ ರಜನೀಕಾಂತ್‌ ಕನಸು ಭಗ್ನ? ಏನಿದು ಸೋರಿಕೆಯಾದ ಪತ್ರದ ಗುಟ್ಟು

ನಟ ರಜನಿಕಾಂತ್ ಅವರು ರಾಜಕೀಯಕ್ಕೆ ಎಂಟ್ರಿ ನೀಡಿ, ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆಯೂ ಭಾರಿ ನಿರೀಕ್ಷೆ ಇದೆ. ಈ ಎಲ್ಲ ವಿಚಾರಗಳ ಕುರಿತಂತೆ ಸ್ವತಃ ರಜನಿಯೇ ಬರೆದಿದ್ದಾರೆ ಎಂಬಂತಿರುವ ಪತ್ರವೊಂದು ವೈರಲ್‌ ಆಗಿದೆ. ಅಚ್ಚರಿ ಎಂದರೆ, ಆ ಪತ್ರವನ್ನು ರಜನಿಕಾಂತ್‌ ಬರೆದಿಲ್ಲ. ಆದರೆ, ಅದರಲ್ಲಿ ಇರುವ ವಿಚಾರಗಳು ನಿಜ ಎಂದು ರಜನಿ ಹೇಳಿದ್ದಾರೆ.

ಈ ಹಿನ್ನಲೆಯಲ್ಲಿ ಈಗ ನಟ ರಜನಿಕಾಂತ್ ಇದು ನಿಜವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ರಜಿನಿ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ನೀಡಿದ ಸ್ಪಷ್ಟೀಕರಣದಲ್ಲಿ, ಈ ಹೇಳಿಕೆ ನಕಲಿಯಾಗಿದ್ದರೂ, ಅವರ ಆರೋಗ್ಯದ ಬಗ್ಗೆ ಹೇಳಿರುವುದು ನಿಜ ಎಂದು ಹೇಳಿದ್ದಾರೆ.

“ನನ್ನ ಹೇಳಿಕೆಯಂತೆ ಕಂಡುಬರುವ ಪತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ವೈರಲ್ ಆಗಿ ಹಂಚಿಕೊಳ್ಳಲಾಗುತ್ತಿದೆ. ಅದು ನನ್ನ ಹೇಳಿಕೆಯಲ್ಲ ಎಂದು ಎಲ್ಲರಿಗೂ ತಿಳಿದಿದೆ. ಅದೇನೇ ಇದ್ದರೂ, ನನ್ನ ಆರೋಗ್ಯದ ಬಗ್ಗೆ ಮತ್ತು ನನ್ನ ವೈದ್ಯರ ಸಲಹೆಯೆಲ್ಲವೂ ನಿಜ. ನನ್ನ ರಜಿನಿ ಮಕ್ಕಲ್ ಮಂದರಂ ಸದಸ್ಯರೊಂದಿಗೆ ಸಮಾಲೋಚಿಸಿದ ನಂತರ ಸರಿಯಾದ ಸಮಯದಲ್ಲಿ ಈ ಬಗ್ಗೆ ಜನರಿಗೆ ನನ್ನ ರಾಜಕೀಯ ನಿಲುವಿನ ಬಗ್ಗೆ ಪ್ರಕಟಣೆ ನೀಡುತ್ತೇನೆ ‘ಎಂದು ರಜನಿಕಾಂತ್ ಸ್ಪಷ್ಟೀಕರಣ ನೀಡಿದ್ದಾರೆ.

1990ರ ದಶಕದಿಂದ ರಾಜಕೀಯಕ್ಕೆ ಸೇರುವ ಇಂಗಿತವನ್ನು ರಜನಿಕಾಂತ್ ಅವರು ವ್ಯಕ್ತಪಡಿಸುತ್ತಲೇ ಇದ್ದರು. ಅದನ್ನು 2017ರ ಡಿಸೆಂಬರ್ 31ರಂದು ಅಧಿಕೃತವಾಗಿ ಘೋಷಿಸಿದರು. ತಮಿಳು ನಾಡಿನಲ್ಲಿ ರಾಜಕೀಯ ವ್ಯವಸ್ಥೆ ಕುಸಿದಿರುವಾಗ ತಾವು ಪಕ್ಷವನ್ನು ಆರಂಭಿಸಿ ರಾಜಕೀಯಕ್ಕೆ ಸೇರಿ ಜನರ ಸೇವೆ ಮಾಡುತ್ತೇನೆ ಎಂದು ರಜನಿಕಾಂತ್ ಹೇಳಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top