fbpx
ಸಮಾಚಾರ

ಪದಾರ್ಪಣೆಯ ಸಿನಿಮಾಕ್ಕಾಗಿ ಮಾಡಿಸಿದ್ದ ಮೊದಲ ಫೋಟೋಶೂಟ್ ಹಂಚಿಕೊಂಡ ರಮ್ಯಾ

ಮೋಹಕ ತಾರೇ ರಮ್ಯಾ ಅವರು ಒಂದು ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅದು ಅವರ ಸಿನಿಮಾ ವೃತ್ತಿಜೀವನದಲ್ಲಿ ಬಹಳ ಮಹತ್ವದ ಫೋಟೋ! ಅದರ ಕುರಿತು ಇಲ್ಲಿದೆ ಮಾಹಿತಿ.

ರಮ್ಯಾ ಚಿತ್ರರಂಗಕ್ಕೆ ಕಾಲಿಟ್ಟದ್ದು 2003ರಲ್ಲಿ ಪುನೀತ್ ರಾಜ್ ಕುಮಾರ್ ಗೆ ನಾಯಕಿಯಾಗಿ ಅಭಿ ಚಿತ್ರದ ಮೂಲಕ. ಅದಾದ ನಂತರ ದಶಕದವರೆಗೆ ಸ್ಯಾಂಡಲ್ ವುಡ್ ನಲ್ಲಿ ರಾಣಿಯಾಗಿ ಮೆರೆದು ಹಲವು ಹಿಟ್ ಚಿತ್ರಗಳನ್ನು ನೀಡಿದರು.

 

 

ಚಿತ್ರರಂಗಕ್ಕೆ ಕಾಲಿಟ್ಟು 17 ವರ್ಷಗಳು ಕಳೆದಿದ್ದು ಅಭಿ ಚಿತ್ರದ ಆರಂಭವನ್ನು ರಮ್ಯಾ ನೆನಪು ಮಾಡಿಕೊಂಡಿದ್ದಾರೆ. ಅಭಿ ಚಿತ್ರಕ್ಕಾಗಿ ಮಾಡಿಕೊಂಡಿದ್ದ ಮೊದಲ ಫೋಟೋಶೂಟ್ ಫೋಟೋ ಹಂಚಿಕೊಂಡಿದ್ದಾರೆ.

‘ಇಲ್ಲಿಂದಲೇ ಆರಂಭ… ಪುನೀತ್ ರಾಜ್‌ಕುಮಾರ್ ಅವರೊಂದಿಗೆ ನನ್ನ ಮೊದಲ ಸಿನಿಮಾ ‘ಅಭಿ’ಗಾಗಿ ಮಾಡಿಸಿದ ಮೊದಲ ಫೋಟೋಶೂಟ್ ಇದು’ ಎಂದು ಆ ಫೋಟೋಗೆ ಕ್ಯಾಪ್ಷನ್ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top