fbpx
ಸಮಾಚಾರ

ವೀರ ಮದಕರಿ ಖ್ಯಾತಿಯ ನಟ, ನಿರ್ದೇಶಕ, ನಿರ್ಮಾಪಕ ದಿನೇಶ್ ಗಾಂಧಿ ವಿಧಿವಶ

ನಟ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ದಿನೇಶ್ ಗಾಂಧಿ ವಿಧಿವಶರಾಗಿದ್ದಾರೆ. ಇಂದು ಬೆಳಗ್ಗೆ ಮಹಾಲಕ್ಷ್ಮೀ ಲೇಔಟ್​​​​ನಲ್ಲಿರುವ ನಿವಾಸದಲ್ಲಿ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದರು.

ದಿನೇಶ್ ಗಾಂಧಿಗೆ 52 ವರ್ಷ ವಯಸ್ಸಾಗಿತ್ತು. ನಿರ್ಮಾಪಕ ಕಮ್ ನಿರ್ದೇಶಕ ದಿನೇಶ್ ಗಾಂಧಿ ಅಂತ್ಯಕ್ರಿಯೆಯನ್ನು ಶ್ರೀರಂಗಪಟ್ಟಣದ ನಗುವಿನಹಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸುದೀಪ್ ಅಭಿನಯದ ವೀರ ಮದಕರಿ , ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಮಲ್ಲಿಕಾರ್ಜುನ ಹಾಗೂ ಹೂ ಚಿತ್ರವನ್ನು ದಿನೇಶ್ ಗಾಂಧಿ ನಿರ್ಮಾಣ ಮಾಡಿದ್ದರು.

ನಟನಾಗಿಯೂ ಗುರುತಿಸಿಕೊಂಡಿದ್ದ ದಿನೇಶ್​ ‘ವೀರ ಮದಕರಿ’, ‘ಹೂ’, ‘ಮಲ್ಲಿಕಾರ್ಜುನ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದಲ್ಲದೇ, ‘ಛತ್ರಪತಿ’ ಎಂಬ ಸಿನಿಮಾವನ್ನೂ ನಿರ್ದೇಶನ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top