fbpx
ಸಮಾಚಾರ

ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ಖ್ಯಾತ ನಟಿ ಕಾಜಲ್ ಅಗರ್‌ವಾಲ್: ಇಲ್ಲಿವೆ ಮದುವೆ ಫೋಟೋಗಳು

ನಟಿ ಕಾಜಲ್ ಅಗರ್‌ವಾಲ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಮೂರು ದಿನಗಳಿಂದ ಅರಿಷಿಣ ಶಾಸ್ತ್ರ, ಮೆಹೆಂದಿ ಶಾಸ್ತ್ರಗಳಲ್ಲಿ ಮಿಂದೆದ್ದಿದ್ದ ಕಾಜಲ್ ಪಿಂಕ್ ಬಣ್ಣದ ಉಡುಗೆ ತೊಟ್ಟು ಉದ್ಯಮಿ ಗೌತಮ್ ಜೊತೆ ಸಪ್ತಪದಿ ತುಳಿದಿದ್ದಾರೆ.

 

 

ಮುಂಬೈನ ಖಾಸಗಿ ಹೋಟೆಲ್​ನಲ್ಲಿ ಮದುವೆ ಸಮಾರಾಂಭ ನಡೆಯಿತು. ಕೊರೊನಾ ಹಿನ್ನೆಲೆಯಲ್ಲಿ ಕಾಜಲ್ ಕುಟುಂಬಸ್ಥರು ಹಾಗೂ ತೀರಾ ಹತ್ತಿರದ ಸಂಬಂಧಿಗಳು ಮಾತ್ರ ಮದುವೆಗೆ ಆಗಮಿಸಿದ್ದರು. ಇನ್ನು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿವೆ.

 

 

ಕಾಜಲ್ ಮದುವೆಗೆ ಕೆಲವೇ ಕೆಲವು ಮಂದಿ ಹಾಜರಾಗಿ ನವಜೋಡಿಗೆ ಶುಭಹಾರೈಸಿದ್ದಾರೆ. ಕುಟುಂಬದವರು, ಸ್ನೇಹಿತರು ಮತ್ತು ತೀರಾ ಆಪ್ತರು ಮಾತ್ರ ಭಾಗಿಯಾಗಿದ್ದಾರೆ. ಕೊರೊನಾ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಬಂಧಗಳ ಮಿತಿಯಲ್ಲೇ ಮದುವೆ ಸಮಾರಂಭ ಮಾಡಿ ಮುಗಿಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top