fbpx
ಸಮಾಚಾರ

ಸಂಸದರ ಕಚೇರಿಗೆ ಉತ್ಸಾಹಿ ಪತ್ರಕರ್ತರು ಬೇಕಾಗಿದ್ದಾರೆ

ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಬಯಸುವ ಯುವ ಹಾಗೂ ಅನುಭವಿ ಪತ್ರಕರ್ತರಿಗೆ ಇಲ್ಲಿದೆ ಒಂದು ಸುವರ್ಣ ಅವಕಾಶ. ಸಂಸದರ ಕಚೇರಿಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡಲು ಇಚ್ಛಿಸುವ ಉತ್ಸಾಹಿ ಪತ್ರಕರ್ತರಿಗೆ ನೇಮಕಾತಿ ನಡೆಯುತ್ತಿದೆ. ಈ ಬಗ್ಗೆ ಕೇಳಲಾಗಿರುವ ಅರ್ಹತೆಗಳ ವಿವರ ಇಲ್ಲಿದೆ.

ವಿದ್ಯಾರ್ಹತೆ:
ಆಸಕ್ತ ಅಭ್ಯರ್ಥಿಗಳು ಕಾನೂನು ಮೂಲಕ ಸ್ಥಾಪಿವಾಗಿರುವ ವಿಶ್ವವಿದ್ಯಾಲಯದಲ್ಲಿ ಯಾವುದೇ ವಿಷಯದಲ್ಲಿ ಪದವೀ ಪಡೆದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಯಾವುದಾದರೂ ಕೋರ್ಸ್ ಮುಗಿಸಿರಬೇಕು. ಪತ್ರಿಕೋದ್ಯಮ ವಿಷಯದಲ್ಲಿ ಪದವಿ ಪಡೆದ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ.

ಇತರೆ ಅರ್ಹತೆಗಳು:
*ಅಭ್ಯರ್ಥಿಯು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಬಲವಾದ ಹಿಡಿತ ಹೊಂದಿರಬೇಕು.

*ಅರ್ಥಶಾಸ್ತ್ರ, ಸಾರ್ವಜನಿಕ ನೀತಿ ಅಧ್ಯಯನಗಳು, ಸಾರ್ವಜನಿಕ ಆರೋಗ್ಯ, ಕಾನೂನು ಸಂಶೋಧನೆ, ರಾಜ್ಯಸಭೆ ಮತ್ತು ಲೋಕಸಭೆ ಅಧಿವೇಶನಗಳಲ್ಲಿ ಮತ್ತು ಮಸೂದೆಗಳಲ್ಲಿ ಜ್ಞಾನ ಹೊಂದಿರಬೇಕು.

* ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿಯೂ ಪತ್ರ ವ್ಯವಹಾರ ನಡೆಸುವುದನ್ನು ಕಲಿತಿರಬೇಕು.

*ಫೇಸ್ಬುಕ್, ಟ್ವಿಟ್ಟರ್, ಯೌಟ್ಯೂಬ್ ನಂತಹ ಸಾಮಾಜಿಕ ಜಾಲತಾಣಗಳನ್ನು ಬಳಸಿ ಕೆಲಸ ಮಾಡಲು ತಿಳಿದಿರಬೇಕು

*ಪ್ರಚಲಿತ ವಿದ್ಯಮಾನಗಳ ಮಾಹಿತಿಗಳನ್ನು ಸುದ್ದಿ ಶೈಲಿಯಲ್ಲಿ, ಸುದ್ದಿ ಸಂಕ್ಷೇಪ ಮಾದರಿಯಲ್ಲಿ ಚಿಕ್ಕದಾಗಿ ಚೊಕ್ಕದಾಗಿ ಬರೆಯುವ ಜಾಣ್ಮೆ ಇರಬೇಕು.

ವಯೋಮಿತಿ:
ಕನಿಷ್ಠ 22ರಿಂದ 30 ವಯೋಮಾನದ ಆಕಾಂಕ್ಷಿ ಪತ್ರಕರ್ತರಿಗೆ ಅರ್ಜಿಹಾಕಿಕೊಳ್ಳಲು ಸ್ವಾಗತ.

ವೇತನ:
ತಿಂಗಳಿಗೆ ರೂ.25000

ಅನುಭವ:
ಕನಿಷ್ಠ ಮೂರು ವರ್ಷಗಳ ಕಾಲ ಮೀಡಿಯಾ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಅನುಭವ ಇರಬೇಕು

ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹತೇ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಇಚ್ಛಿಸಿದಲ್ಲಿ ಸದರಿ ಹುದ್ದೆಗಳಲ್ಲಿ ಕೆಲಸ ಮಾಡಲು ನಿಮ್ಮ ಅರ್ಹತೆ ಈ ಕೆಲಸಕ್ಕೆ ಸೂಕ್ತ ಎಂದು ಭಾವಿಸಿದರೆ ನಿಮ್ಮ resume ಅನ್ನು 09 -11 -2020ರ ಒಳಗೆ ಈ ಇಮೇಲ್ kannadawebcontent@gmail.com ಅಥವಾ itsanandsharma594@gmail.comಗೆ ಕಳುಹಿಸಬೇಕಾಗಿ ಕೋರಲಾಗಿದೆ.

ವಿ.ಸೂ: ನಿಮ್ಮ ಅರ್ಜಿಗಳನ್ನು ಈ ಮೇಲ್ ಮುಖಾಂತರವೇ ಕಳಿಸಬೇಕು. ಈ ಸಂಬಂಧ ದೂರವಾಣಿ, ಎಸ್ ಎಂಎಸ್ ಮೂಲಕ ವಿವರಗಳನ್ನು ಸ್ವೀಕರಿಸುವುದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top