fbpx
ಸಮಾಚಾರ

“ಅವನೇ ಶ್ರೀಮನ್ನಾರಾಯಣ” ನಿರ್ದೇಶಕನ ಸಿನಿಮಾದಲ್ಲಿ ಅಶ್ವತ್ಥಾಮನಾದ ಶಿವರಾಜ್‌ ಕುಮಾರ್‌

‘ಅವನೇ ಶ್ರೀಮನ್ನಾರಾಯಣ’ ಸಿನಿಮಾವನ್ನು ನಿರ್ಮಿಸಿದ್ದ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ನಿರ್ದೇಶನ ಮಾಡಿದ್ದ ಸಚಿನ್ ರವಿ ಹೊಸದೊಂದು ಸಿನಿಮಾ ಮಾಡಲು ಸಜ್ಜಾಗಿದ್ದು, ಅದರಲ್ಲಿ ಶಿವರಾಜ್‌ಕುಮಾರ್ ಹೀರೋ ಆಗಿರಲಿದ್ದಾರೆ.

ಪ್ರೊಡಕ್ಷನ್ ಹೌಸ್ ಈ ಯೋಜನೆಯನ್ನು ಘೋಷಿಸಿದ್ದು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಪೋಸ್ಟರ್ ಅನ್ನು ಅನಾವರಣಗೊಳಿಸಿತು. ಬೃಹತ್ ಯೋಜನೆಗಾಗಿ ನಿರ್ಮಾಪಕ ಮತ್ತು ನಿರ್ದೇಶಕರು ಶಿವಣ್ಣ ಜತೆ ಸೇರಿದ್ದಾರೆ. ಮಹಾಭಾರತದಲ್ಲಿ ಅಶ್ವತ್ಥಾಮ ಬಹಳ ಪ್ರಧಾನವಾಗಿದ್ದು, ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಅಶ್ವತ್ಥಾಮನನ್ನು ಹೋಲುವಂತಹ ಪಾತ್ರ ನಿರ್ವಹಿಸಲಿದ್ದಾರೆ.

 

 

ಈ ಕುರಿತು ಸ್ವತಃ ಸಚಿನ್ ಅವರೇ ತಮ್ಮ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಪೋಸ್ಟರ್ ಸಹ ಬಿಡುಗಡೆ ಮಾಡಿದ್ದಾರೆ. ”ಇವರ ಸಿನಿಮಾ ನೋಡಿ ಕನಸುಗಳನ್ನು ಕಟ್ಟುತ್ತಿದ್ದೆವು…ಈಗ ಇವರ ಜೊತೆಯಲ್ಲೆ ನಮ್ಮ ಕನಸು ನನಸಾಗುವ ಸಮಯ… ಮಹಾನ್ ಕಲಾವಿದ ಶಿವರಾಜ್ ಕುಮಾರ್ ಅವರ ಜೊತೆ ನನ್ನ ನಿರ್ದೇಶನದ ಮುಂದಿನ ಸಿನಿಮಾ. ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ನಿಮ್ಮ ಶುಭಹಾರೈಕೆ ನಮ್ಮ ಜೊತೆಗಿರಲಿ. ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು” ಎಂದು ಟ್ವೀಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top